ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಪರಧರ್ಮವನ್ನು ನಿಂದಿಸಬೇಡಿ ಅದು ನಿಮ್ಮ ಧರ್ಮ ವನ್ನು ನಿಂದಿಸಲು ಕಾರಣವಾಗಬಹುದು ಎಂಬ ಪವಿತ್ರ ಸಂದೇಶವನ್ನು ಕಲಿಸಿದ ಇಸ್ಲಾಮಿನ ಸಂದೇಶವಾಹಕರಾದ ಕೋಟ್ಯಾಂತರ ಮುಸಲ್ಮಾನರು ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರವರನ್ನು ಸೋಶಿಯಲ್ ಮೀಡಿಯಾ ಮೂಲಕ ಹೀಯಾಳಿಸಿದ ಜಗದೀಶ ಐವರ್ನಾಡು ಎಂಬ ಕೋಮುವಾದಿ ನೀಚನ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ಕ್ರಮ ಕೈಗೊಳ್ಳಬೇಕು.
ಇಂತಹ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸಿ ನಾಡಿನ ಸೌಹಾರ್ದತೆಯನ್ನು ಕಾಪಾಡಬೇಕಾಗಿದೆ. ಯಾವುದೇ ಕಾರಣಕ್ಕೂ ಪೋಲೀಸ್ ಇಲಾಖೆಯು ಈತನನ್ನು ದಯೆಯಿಂದ ಕಾಣಬಾರದಾಗಿಯೂ, ಶೀಘ್ರವೇ ಬಂದಿಸಬೇಕೆಂದೂ ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಮಿತಿಯು ಆಗ್ರಹಿಸುತ್ತದೆ ಎಂದು ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಮಿತಿ ಅಧ್ಯಕ್ಷರಾದ ಎ.ಎಂ.ಫೈಝಲ್ ಝುಹ್ರಿ ಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.