ಚಿಕ್ಕಬಳ್ಳಾಪುರ(ವಿಶ್ವಕನ್ನಡಿಗ ನ್ಯೂಸ್): ಮೈಸೂರು ಹುಲಿ ಶಹೀದೇ ಮಿಲ್ಲತ್ ಹಝ್ರತ್ ಟಿಪ್ಪು ಸುಲ್ತಾನ್ ರವರ 272ನೇ ಜನ್ಮ ಜಯಂತಿಯ ಅಂಗವಾಗಿ ಡಾ. ಏ ಪಿ ಜೆ ಅಬ್ದುಲ್ ಕಲಾಂ ಫೌಂಡೇಶನ್ ಕರ್ನಾಟಕ (ರಿ) ಚಿಕ್ಕಬಳ್ಳಾಪುರ ಇದರ ವತಿಯಿಂದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಹಂಣ್ಣು ಹಂಪಲು ಹಂಚುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಏ ಪಿ ಜೆ ಅಬ್ದುಲ್ ಕಲಾಂ ಫೌಂಡೇಶನ್ ಕರ್ನಾಟಕ (ರಿ) ರಾಜ್ಯಾಧ್ಯಕ್ಷರಾದ ಡಾ. ನಂದಿ ಬಾಷ ಟಿಪ್ಪು ಸುಲ್ತಾನ್ ಅವರ ಇತಿಹಾಸ ಅದು ದೇಶದ ಇತಿಹಾಸ ಎಂದು ಅಭಿಪ್ರಾಯ ಪಟ್ಟರು.
ಇದೇ ವೇಳೆ ಡಾ. ಏ ಪಿ ಜೆ ಅಬ್ದುಲ್ ಕಲಾಂ ಫೌಂಡೇಶನ್ ಕರ್ನಾಟಕ (ರಿ) ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಶಿಂ ಬನ್ನೂರು, ಡಾ. ಏ ಪಿ ಜೆ ಅಬ್ದುಲ್ ಕಲಾಂ ಫೌಂಡೇಶನ್ ಕರ್ನಾಟಕ (ರಿ) ಜಿಲ್ಲಾಧ್ಯಕ್ಷ ವಿ.ರಾಜಶೇಕರ, ದರ್ಗಾ ಮೊಹಲ್ಲ ಇಮಾಮ್ ಅಬ್ದುಲ್ ಮುಸವ್ವಿರ್,ಡಾ. ಏ ಪಿ ಜೆ ಅಬ್ದುಲ್ ಕಲಾಂ ಫೌಂಡೇಶನ್ ಕರ್ನಾಟಕ (ರಿ) ಜಿಲ್ಲಾ ಸದಸ್ಯರಾದ ನವಾಜ್ ಪಾಷ, ಮನ್ನು , ಅರ್ಬಾಜ್, ನಝೀರ್, ಸಿ.ಎಂ ನೂರುಲ್ಲಾ, ಹಾಗೂ ಇನ್ನಿತರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.