ಕೋಲಾರ(ವಿಶ್ವಕನ್ನಡಿಗ ನ್ಯೂಸ್): ಕಸಾಪ ಜಿಲ್ಲಾಧ್ಯಕ್ಷರಾಗಿ ಆರು ವರ್ಷಗಳ ಅಧಿಕಾರದಲ್ಲಿ ಇದ್ದರೂ ಸಹ ಇದುವರೆಗೂ ಒಂದು ಕಾರ್ಯಕ್ರಮವನ್ನು ಸ್ವಗ್ರಾಮ ಕೆಂಬೋಡಿಯಲ್ಲಿ ಮಾಡಿಲ್ಲ ಎಂದು ಗಾಮಸ್ಥರೇ ಬೇಸರ ವ್ಯಕ್ತಪಡಿಸಿದ ಘಟನೆ ಕೆಂಬೋಡಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಕಂಬೋಡಿ ಗ್ರಾಮದಲ್ಲಿ ಕಸಾಪ ಚುನಾವಣೆಯ ಪ್ರಚಾರದಲ್ಲಿ ಕಸಾಪ ಅಭ್ಯರ್ಥಿ ಎನ್.ಬಿ.ಗೋಪಾಲಗೌಡ ಮನೆ ಮನೆಗೂ ಬೇಟಿ ನೀಡಿ ಮಾತೆಯಾಚಿಸಿದ ಸಂದರ್ಭದಲ್ಲಿ ಗ್ರಾಮಸ್ಥರು ಗ್ರಾಮದವರೇ ಕಸಾಪ ಅಧ್ಯಕ್ಷರಾಗಿದ್ದರೂ ಸಹ ಇದುವರೆಗೂ ಯಾವುದೇ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸದೆ ಇರುವ ಬಗ್ಗೆ ಗ್ರಾಮಸ್ಥರು ಅಸಮಾಧಾನ ಹೊರಹಾಕಿದರು.
ಈ ಸಂದರ್ಭದಲ್ಲಿ ಕಸಾಪ ಅಭ್ಯರ್ಥಿ ಎನ್.ಬಿ. ಗೋಪಾಲಗೌಡ ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಮಾತನಾಡಿ , ನನಗೆ ನನಗೆ ಒಂದು ಅವಕಾಶ ನೀಡಿದ್ದೇ ಆದಲ್ಲಿ ಕೆಂಬೋಡಿ ಗ್ರಾಮದಲ್ಲಿ ಒಳ್ಳೆಯ ಕನ್ನಡ ಕಾರ್ಯಕ್ರಮಗಳನ್ನು ನಡೆಸುವುದಾಗಿ ಭರವಸೆ ನೀಡಿದರು. ದೇಶದಲ್ಲಿ ಕೋಲಾರ ಜಿಲ್ಲೆಯ ಹೆಸರು ಬರಲು ನಾನಾ ಕ್ಷೇತ್ರದಲ್ಲಿ ಪ್ರತಿಭೆಗಳು ಹೊರಬರಲು ಕೆಂಬೋಡಿ ಶಾಲೆ ಹಾಗೂ ಗಾಮ ಮುಂಚೂಣಿಯಲ್ಲಿದೆ. ಇಂತಹ ಸಂದರ್ಭದಲ್ಲಿ ಹಳ್ಳಿಯಲ್ಲಿ ಕನ್ನಡ ಸಾಹಿತ್ಯ ಕಾರ್ಯಕ್ರಮ ಆಯೋಜನೆ ಮಾಡದೆ ಇರುವುದಕ್ಕೆ ಬೇಸರ ಹೊರಹಾಕಿದರು . ಈ ನಿಟ್ಟಿನಲ್ಲಿ ಕಸಾಪ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದು , ಮತದಾರರು ಒಂದು ಅವಕಾಶವನ್ನು ನೀಡಿದರೆ ಮುಂಬರುವ ದಿನಗಳಲ್ಲಿ ಕೆಂಬೋಡಿ ಗ್ರಾಮದಲ್ಲಿ ಕಸಾಪ ವತಿಯಿಂದ ಅದ್ದೂರಿ ಕನ್ನಡ ಸಾಹಿತ್ಯ ಕಾರ್ಯಕ್ರಮಗಳನ್ನು ಮಾಡಲು ಭರವಸೆಯನ್ನು ನೀಡಿದರು.
ಜಿಲ್ಲೆಯ ಹೋಬಳಿ ಮತ್ತು ತಾಲೂಕು ಕೇಂದ್ರಗಳಲ್ಲಿ ಮಕ್ಕಳ ಮತ್ತು ಮಹಿಳೆಯರ ಸಮ್ಮೇಳನಗಳನ್ನು ನಡೆಸುವ ಜತೆಯಲ್ಲಿ ಪರಿಷತ್ನ ಪ್ರತಿಯೊಬ್ಬ ಅಜೀವ ಸದಸ್ಯರ ಮನೆಮನೆಗೂ ಆಹ್ವಾನ ಪತ್ರಿಕೆಗಳನ್ನು ತಲುಪಿಸುವ ಮೂಲಕ ಕನ್ನಡವನ್ನು ಕಟ್ಟುವ ಕೆಲಸವನ್ನು ಮಾಡುವುದಾಗಿ ಹೇಳಿದರು . ಕೋಲಾರ ಜಿಲ್ಲೆಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಆಯೋಜನೆ ಮಾಡಲು ಮುಂದಾಗುವುದಾಗಿ ತಿಳಿಸಿ , ಜಿಲ್ಲೆಯಲ್ಲಿ ಸಾಹಿತ್ಯ ಪರಿಷತ್ ಭವನದ ನಿರ್ಮಾಣ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಏರಿಕೆಯಾಗಿರುವ ೧೦೧೦ ರೂಗಳ ಕಸಾಪ ಆಜೀವ ಸದಸ್ಯತ್ವ ಶುಲ್ಕವನ್ನು ೨೫೦ ರೂಗಳಿಗೆ ಇಳಿಕೆ ಮಾಡಲು ಕೇಂದ್ರ ಸಾಹಿತ್ಯ ಪರಿಷತ್ನಲ್ಲಿ ಧ್ವನಿ ಗೂಡಿಸುವುದಾಗಿ ಹೇಳಿದರು . ಕಸಾಪ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಜೆ.ಜಿ ನಾಗರಾಜ್ ಮಾತನಾಡಿ , ಬದಲಾವಣೆ ಜಗದ ನಿಯಮವಾಗಿದ್ದು , ಅದರಂತೆ ಕಸಾಪ ಚುನಾವಣೆಯಲ್ಲಿ ಎಲ್ಲರೂ ಒಕ್ಕೊರಲಿನಿಂದ ಎನ್.ಬಿ ಗೋಪಾಲಗೌಡ ಅವರನ್ನು ಒಮ್ಮತದ ಅಭ್ಯರ್ಥಿಯಾಗಿ ಘೋಷಿಸಲಾಗಿದೆ ಎಂದರು.
ತಾಲೂಕಿನ ಕೆಂಬೋಡಿ ಗ್ರಾಮದಲ್ಲಿ ರಾಷ್ಟ್ರ , ರಾಜ್ಯ , ಜಿಲ್ಲಾ ಹಾಗೂ ತಾಲೂಕು ಮಟ್ಟದ ಪ್ರತಿಭೆಗಳನ್ನು ಗುರುತಿಸಿ ಅವರ ಕಲೆಯನ್ನು ಪ್ರೋತ್ಸಾಹಿಸುವ ಜೊತೆಗೆ ಗಾಮದಲ್ಲಿ ಡೊಳ್ಳು ಕುಣಿತ , ಕೋಲಾಟ , ತಮಟೆ ಕಲೆಗೆ ಹೆಸರುವಾಸಿಯಾಗಿದ್ದು , ಇಂತಹ ಪ್ರತಿಭೆಗಳನ್ನು ಹೊರತೆಗೆದು ಕನ್ನಡದ ಕೆಲಸವನ್ನು ಮಾಡುವುದಾಗಿ ತಿಳಿಸಿದರು.
ಕಸಾಪ ಅಭ್ಯರ್ಥಿ ಎನ್.ಬಿ ಗೋಪಾಲಗೌಡರು ಪಾರದರ್ಶಕ ಆಡಳಿತ ನೀಡುವ ಜೊತೆಯಲ್ಲಿ ಪ್ರತಿವರ್ಷ ಸರ್ವ ಸದಸ್ಯರ ಸಭೆಯನ್ನು ನಡೆಸಿ ರಾಜ್ಯಕ್ಕೆ ಮಾದರಿಯಾಗುವ ಮೂಲಕ ಮುಂಬರುವ ವರ್ಷದ ಲೆಕ್ಕಪತ್ರಗಳನ್ನು ಪತ್ರಿಕಾಗೋಷ್ಠಿಗೆ ಮೂಲಕ ಬಿಡುಗಡೆಗೊಳಿಸಲಾಗುವುದು ಮತ್ತು ಹಿಂದಿನ ಅವಧಿಯ ಲೆಕ್ಕಪತ್ರಗಳನ್ನು ಹಿಂದಿನ ಅಧ್ಯಕ್ಷರು ನೀಡುವಲ್ಲಿ ವಿಫಲವಾಗಿದ್ದಾರೆ ಎಂದು ದೂರಿದರು.
ಕಸಾಪ ರಾಜ್ಯಾಧ್ಯಕ್ಷರ ಆಯ್ಕೆ ನಂತರ ರಾಜ್ಯಾಧ್ಯಕ್ಷರಾದವರು ರಾಜ್ಯದ ಎಲ್ಲಾ ಜಿಲ್ಲಾಧ್ಯಕ್ಷರ ಸಭೆಯನ್ನು ನಡೆಸಿ ಒಂದು ಬಾರಿ ಜಿಲ್ಲಾಧ್ಯಕ್ಷರಾದ ನಂತರ ಮುಂದಿನ ಅವಧಿಗೆ ಮತ್ತೊಬ್ಬರಿಗೆ ಅವಕಾಶ ಕಲ್ಪಿಸುವ ತೀರ್ಮಾನವನ್ನು ಕೈಗೊಳ್ಳುವ ಮೂಲಕ ತಿದ್ದುಪಡಿಗಳನ್ನು ತರುವಂತಾಗಬೇಕು . ಎಂದು ಆಗ್ರಹಿಸಿದರು . ಗ್ರಾಮದ ಹಿರಿಯ ಮುಖಂಡ ಹಾಗೂ ನಿವೃತ್ತ ಮುಖ್ಯಶಿಕ್ಷಕ ಮುನೇಗೌಡ ಅವರು ಮಾತನಾಡಿ , ಕಸಾಪ ಅಭ್ಯರ್ಥಿ ಎನ್.ಜಿ ಗೋಪಾಲಗೌಡ ಅವರ ಪರವಾಗಿ ಮತಯಾಚಿಸಿ ಬೆಂಬಲವನ್ನು ಸೂಚಿಸಿದರು.
ಮತ ಯಾಚನೆ ಸಂದರ್ಭದಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನಾರಾಯಣಪ್ಪ ಜಿಲ್ಲಾ ಕನ್ನಡ ಸಿರಿ ಸಾಹಿತ್ಯ ಪರಿಷತ್ ಅಧ್ಯಕ್ಷ ಸುಬ್ಬರಾಮಯ್ಯ , ಕಸಾಪ ಗೌರವ ಅಧ್ಯಕ್ಷ ಪರಮೇಶ್ವರನ್ ಸೇರಿದಂತೆ ನೂರಕ್ಕು ಹೆಚ್ಚುಜನ ಪ್ರಾಚಾರದಲ್ಲಿ ಭಾಗವಹಿಸಿದ್ದರು.
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.