ಕೋಲಾರ (ವಿಶ್ವಕನ್ನಡಿಗ ನ್ಯೂಸ್): ಕೋಲಾರದಿಂದ ದತ್ತ ಮಾಲೆಗೆ ತೆರಳುತ್ತಿದ್ದ ಹಿಂದೂ ಕಾರ್ಯಕರ್ತ ಮೇಲಿನ ಹಲ್ಲೆ ಪ್ರಕರಣವನ್ನು ಕೋಮು ಬಣ್ಣ ನೀಡಲು ಅನವಶ್ಯಕವಾಗಿ ಬಂದ್ಗೆ ಕರೆ ನೀಡಿ , ಸರ್ಕಾರ ಮತ್ತು ಸಾರ್ವಜನಿಕರ ಆಸ್ತಿ – ಪಾಸ್ತಿಗೆ ನಷ್ಟ ಉಂಟಾಗುವುದರಿಂದ ನಷ್ಟ ಭರ್ತಿಗೆ ಕೇಮ್ ಕಮಿಷನರ್ ನೇಮಕ ಮಾಡಲು ಕೋರಿ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪೋಲೀಸ್ ಅಧೀಕ್ಷಕರಿಗೆ ಸಾಮಾಜಿಕ ಕಾರ್ಯಕರ್ತ ಕೂಟೇರಿ ಮುನೆಯ್ಯ ಮನವಿ ಸಲ್ಲಿಸಿದ್ದಾರೆ.
ನವೆಂಬರ್ 7 ರಂದು ದತ್ತ ಮಾಲೆಧಾರಿಗಳು , ರಾತ್ರಿ ಸಮಯದಲ್ಲಿ ಸೂಕ್ಷ್ಮ ಪ್ರದೇಶದಲ್ಲಿ ಪ್ರಚೋದನಕಾರಿ ಘೋಷಣೆಗಳು ಕೂಗಿ , ಉದ್ರೇಕ್ಕಾಗಿ ಸನ್ನಿವೇಶ ಸೃಷ್ಟಿಸಿದ್ದರಿಂದ ಕೆಲ ಕಿಡಿಕೇಡಿಗಳು ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸಿದ್ದಾರೆ.
ತಕ್ಷಣವೇ , ಪೋಲೀಸರ ಸಕಾಲಿಕ ಪ್ರವೇಶದಿಂದ ಅನಾಹುತ ತಪ್ಪಿದ್ದು , ಈಗಾಗಲೇ ಘಟನೆ ಸಂಬಂಧ ಹಲವರ ಬಂಧನವೂ ಆಗಿದೆ, ಹೀಗಿರುವಾಗ ಕೆಲ ಸಂಘಟನೆಗಳು ಅನವಶ್ಯಕವಾಗಿ ಗುರುವಾರ 18/11/2021 ಕೋಲಾರ ಬಂದ್ಗೆ ಕರೆ ನೀಡಿ , ಪ್ರಕ್ಷುಬ್ಧ ಸ್ಥಿತಿ ನಿರ್ಮಾಣ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.
ಬ೦ದ್ ಪ್ರಯುಕ್ತ ಸರ್ಕಾರ , ಸಾರ್ವಜನಿಕರಿಗೆ ಕೋಟ್ಯಾಂತರ ರೂ.ಹಣ ನಷ್ಟವಾಗುವದರಿಂದ ಮಾನ್ಯ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ನಷ ಭರ್ತಿಗೆ ಕೈಮ್ ಕಮೀಶನರ್ ನೇಮಕ ಮಾಡಿ ಬಂದ್ ಆಯೋಜಕರಿಂದ ವಸೂಲಿ ಮಾಡಲು ಕ್ರಮ ಕೈಗೊಳ್ಳಲು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.