ಕೋಲಾರ (ವಿಶ್ವಕನ್ನಡಿಗ ನ್ಯೂಸ್): ಶಿಕ್ಷಕರ ಮತ್ತು ಮಕ್ಕಳ ನಡುವಿನ ಅತ್ಯುತ್ತಮ ಭಾವನಾತ್ಮಕ ಸಂಬಂಧ ಕಲಿಕೆಗೆ ಪೂರಕ ವಾತಾವರಣ ಎಂದು ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಚೇರಿಯ ಶಿಕ್ಷಣ ಸಂಯೋಜಕ ಆರ್ ಶ್ರೀನಿವಾಸನ್ ಅಭಿಪ್ರಾಯಪಟ್ಟರು.
ಅವರು ಇಂದು ಕೋಲಾರ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಲುವನಹಳ್ಳಿ ಗ್ರಾಮದಲ್ಲಿ ಪ್ರಥಮ್ ಮೈಸೂರು ಸಂಸ್ಥೆಯವರು ಏರ್ಪಡಿಸಿದ್ದ ಶಾಲಾ ಪೂರ್ವ ತಯಾರಿ ಮೇಳದಲ್ಲಿ ಮಾತನಾಡುತ್ತಿದ್ದರು ಪೋಷಕರ ಮಹದಾಸೆಯ ದೃಷ್ಟಿಕೋನವು ಶಿಕ್ಷಣವಾಗಿದ್ದು ಶಾಲೆಗಳಲ್ಲಿ ಸದೃಢವಾದ ವಾತಾವರಣ ನಿರ್ಮಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ .
ಶಿಕ್ಷಕರು ಪ್ರಸ್ತುತ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳಾಗಿ ಮಕ್ಕಳನ್ನು ಪ್ರೀತಿಸುವ ಜೊತೆಗೆ ಅವಶ್ಯಕತೆ ಇರುವ ಅವಶ್ಯಕತೆಯಿರುವ ವಿದ್ಯಾರ್ಥಿಗಳಾಗಿ ಮಕ್ಕಳನ್ನು ಪ್ರೀತಿಸುವ ಜೊತೆಗೆ ಕಡಿಮೆ ಬೆಲೆಗೆ ಸಿಗುವ ಆಟಿಕೆಗಳನ್ನು ಬಳಸಿಕೊಂಡು ,
ಬೋಧನೆ ಮಾಡಬೇಕು ಇದರಿಂದ ಮಕ್ಕಳು ಕಲಿಕೆಯ ಉತ್ಸಾಹ ಮೂಡುತ್ತದೆ ಇದರಿಂದ ಉತ್ತಮ ಕಲಿಕಾ ಸಾಧನೆಯನ್ನು ಮಾಡಬಹುದಾಗಿದೆ ಎಂದರಲ್ಲದೆ ಪೋಷಕರಾದ ತಾಯಂದಿರು ಮನೆಗಳಲ್ಲಿ ಟಿವಿ ಮೊಬೈಲ್ಗಳಿಂದ ತಾವು ದೂರವಿದ್ದು ಮಕ್ಕಳಿಗೆ ತಮ್ಮ ದಿನನಿತ್ಯದ ಶಿಕ್ಷಣದ ಜೊತೆಗೆ ಕೃಷಿಚಟುವಟಿಕೆಗಳನ್ನು ಪರಿಚಯ ಮಾಡಬೇಕು ತಮ್ಮೊಂದಿಗೆ ಪಾಲ್ಗೊಂಡು ಕಲಿಯುವುದರಿಂದ ಮಕ್ಕಳಲ್ಲಿ ಉತ ್ತಮ ಬೆಳವಣಿಗೆ ಕಾಣಬಹುದು ಎಂದರು .
ಪಥಮ್ ಮೈಸೂರ್ ಸಮಸ್ಯೆಯ ಸಂಪನ್ಮೂಲ ವ್ಯಕ್ತಿಯಾದ ಗುರುದತ್ ಮಾತನಾಡುತ್ತ ಈ ಸಂಸ್ಥೆಯು ಸುಮಾರು 28 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಪಪಥಮವಾಗಿ ಕೋಲಾರ ಜಿಲ್ಲೆಯ ಆಯ್ದ ಶಾಲೆಗಳಲ್ಲಿ ಶಾಲಾ ಪೂರ್ವ ತಯಾರಿ ಮೇಳ ದೊಂದಿಗೆ ಹಿಂದುಳಿದ ಮಕ್ಕಳನ್ನು ಗುರುತಿಸಿ ತಾಯಂದಿರಿಗೆ ಶಿಕ್ಷಣದ ಮಹತ್ವವನ್ನು ಪರಿಚಯಿಸುತ್ತಾ ಆಟಪಾಠಗಳಲ್ಲಿ ಕಲಿಕೆಗೆ ಪೂರಕ ಚಟುವಟಿಕೆಗಳನ್ನು ಅಳವಡಿಸಿಕೊಂಡು ಮಕ್ಕಳಲ್ಲಿ ಕಲಿಯುವ ಆಸಕ್ತಿಯನ್ನು ಮೂಡಿಸುವುದೇ ಆಗಿದ್ದು ಸ್ವಯಂ ಸೇವಾ ಸಂಸ್ಥೆಗಳು ಸಮುದಾಯದೊಂದಿಗೆ ಪಾಲ್ಗೊಂಡು ಮಕ್ಕಳ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು .
ಈ ಕಾರ್ಯಕ್ರಮದಲ್ಲಿ ಈ ಭಾಗದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಾಜಣ್ಣ ಶಾಲಾ ಶಿಕ್ಷಕರಾದ ರಾಧಾ ನೂರು ಆಯಷ್ ಪದ್ಮಾವತಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ರಾಜು ಮಂಜುನಾಥ ಗಾಯತ್ರಿ ತಿಮ್ಮರಾಜು ಗುರು ಹಿರೇಗೌಡ ಮುನೇಗೌಡ ಎಸ್ಟಿಎಂಸಿ ಅಧ್ಯಕ್ಷರಾದ ವಿ ವೆಂಕಟೇಶ್ ಹಾಗೂ ಗ್ರಾಮಸ್ಥರು ಹಾಜರಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.