ಕೋಲಾರ (ವಿಶ್ವಕನ್ನಡಿಗ ನ್ಯೂಸ್): ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ವಿಧಾನ ಪರಿಷತ್ತಿನ ಸದಸ್ಯ ಇಂಚರ ಗೋವಿಂದರಾಜು ನಗರದ ದರ್ಗಾ ಮೊಹಲ್ಲಾ ಪ್ರಾಥಮಿಕ ಆರೋಗ್ಯ ಕೇಂದಕ್ಕೆ ಹೆಚ್ಚಿನ ಮೂಲಭೂತ ಸೌಲಭ್ಯ ಒದಗಿಸಲು ಸರ್ಕಾರವನ್ನು ಆಗ್ರಹಿಸಿದರು .
ಶೂನ್ಯವೇಳೆಯಲ್ಲಿ ವಿಧಾನಪರಿಷತ್ನಲ್ಲಿ ವಿಷಯ ಪ್ರಸ್ತಾಪಿಸಿದ ಅವರು , ಕೋಲಾರದ ದರ್ಗಾ ಮೊಹಲ್ಲಾದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರವು ಕಳೆದ ಒಂದು ವರ್ಷದ ಹಿಂದೆ ಆರಂಭವಾಗಿದೆ , ಆದರೆ ಅದು ಪ್ರಾಥಮಿಕ ಆರೋಗ್ಯ ಕೇಂದ್ರದ ಹಾಗೆ ಕಾರ್ಯನಿರ್ವಹಿಸುತ್ತಿದೆ ಎಂದರು .
ಕೇಂದ್ರವು ನಗರದ ಹೃದಯ ಭಾಗದಲ್ಲಿದ್ದು , ಈ ಭಾಗದಲ್ಲಿ ಅತೀ ಹೆಚ್ಚು ಬಡ ಕೂಲಿ ಕಾರ್ಮಿಕರು , ಬೀಡಿ ಕಾರ್ಮಿಕರು , ರೇಷ್ಮೆ ನೂಲೂ ತೆಗೆಯವವರಿದ್ದು , ಇಲ್ಲಿನ ಸಾರ್ವಜನಿಕರು , ಸರ್ಕಾರಿ ಆರೋಗ್ಯ ಕೇಂದ್ರದ ಮೇಲೆ ಅವಲಂಬಿತವಾಗಿದ್ದಾರೆ ಎಂದು ತಿಳಿಸಿದರು .
ಇಲ್ಲಿ ಕೇವಲ ಒಬ್ಬ ವೈದ್ಯಾಧಿಕಾರಿ ಇದ್ದು , ಇಲ್ಲಿ ಸ್ತ್ರೀ ರೋಗ ತಜ್ಞರು ಹಾಗು ಮಕ್ಕಳ ತಜ್ಞರನ್ನು ಇದುವರೆಗೂ ನೇಮಿಸಿರುವುದಿಲ್ಲ . ಇಲ್ಲಿ ಸರಿಸುಮಾರು ತಿಂಗಳಿಗೆ ೫೦ ರಿಂದ ೬೦ ರವರೆಗೂ ಹರಿಗೆಗಳಾಗುತ್ತಿದ್ದು , ಇಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಲ್ಲಿದೇ ಇರುವುದರಿಂದ , ಕಷ್ಟವಾಗುತ್ತಿದ್ದು , ಹಾಗೂ ಸೀಸರಿಯನ್ ಶಸ್ತ್ರ ಚಿಕಿತ್ಸೆಗಳಿಗೆ ಒಳಪಡುವ ಗರ್ಭೀಣಿಯರಿಗೆ ಜಿಲ್ಲಾ ಆಸ್ಪತ್ರೆ ಅಥವಾ ಜಾಲಪ್ಪ ಆಸತೆಗೆ ಕಳುಹಿಸಿ ಕೊಡಲಾಗುತ್ತಿದೆ . ಇದರಿಂದ ಬಡವರಿಗೆ ಮತ್ತು ಇಲ್ಲಿನ ಅಲ್ಪಸಂಖ್ಯಾತ ಸಮುದಾಯಕ್ಕೆ ತುಂಬಾ ಕಷ್ಟವಾಗಿದೆ ಎಂದು ತಿಳಿಸಿದರು .
ನಗರದ ರಹಮತ್ ನಗರ ಆರೋಗ್ಯ ಕೇಂದ್ರದ ಅಭಿವೃದ್ಧಿ ಮತ್ತು ಸ್ವಂತ ಕಟ್ಟಡ ಒದಗಿಸುವ ಕುರಿತು ಸರ್ಕಾರದ ಗಮನ ಸೆಳೆದ ಅವರು , ಕೋಲಾರದ ವಿನಾಯಕ ನಗರ , ನೂರ್ ನಗರ , ರಹತ್ ನಗರ , ಸಾರಿಗೆ ನಗರ , ನಿಸಾರ್ ನಗರ , ಮಿಲ್ಲತ್ ನಗರ , ಸಂಗೊಂಡಹಳ್ಳಿ ಸೇರಿದಂತೆ ಸುಮಾರು ಎಂಟು ವಾರ್ಡ್ಗಳಿದ್ದು , ಇಲ್ಲಿ ಸುಮಾರು ೩೫ ಸಾವಿರಕ್ಕೂ ಹೆಚ್ಚಾಗಿ ಜನಸಂಖ್ಯೆ ಇದೆ ಎಂದು ತಿಳಿಸಿದರು .
ಈ ಭಾಗಕ್ಕೆ ಕೇವಲ ಒಂದು ನಗರ ಆರೋಗ್ಯ ಕೇಂದ್ರವಿದ್ದು , ಅದು ಕೂಡ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ . ಇದರಿಂದ ಜನಸಾಮಾನ್ಯರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ , ಆದ್ದರಿಂದ ಇಲ್ಲಿ ಕೂಡಲೇ ಒಂದು ಸಮುದಾಯ ಆರೋಗ್ಯ ಕೇಂದ್ರವನ್ನು ಸ್ಥಾಪಿಸಿ , ಎಲ್ಲಾ ಮೂಲಭೂತ ಸೌಲಭ್ಯಗಳನ್ನು ನೀಡಿ ತಕ್ಷಣದಿಂದ ಜಾರಿಗೆ ಬರುವಂತೆ ಕಾರ್ಯಾರಂಭ ಮಾಡಬೇಕೆಂದು ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಲ್ಲಿ ಮನವಿ ಮಾಡಿದರು .
ಮನವಿಗೆ ಸ್ಪಂದಿಸಿದ ಆರೋಗ್ಯ ಸಚಿವರು , ದರ್ಗಾ ಮಹಲ್ಲಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಎಲ್ಲಾ ಮೂಲಭೂತ ಸೌಲಭ್ಯ ಹಾಗೂ ಮಾನವ ಸಂಪನ್ಮೂಲ ಒದಗಿಸಲು ಅಧಿಕಾರಿಗಳಿಗೆ ಆದೇಶಿಸುವುದಾಗಿ ಭರವಸೆ ನೀಡಿದರು . ಹಾಗೆಯೇ ರಹಮತ್ ನಗರದಲ್ಲಿರುವ ನಗರ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸುವ ಸಂಬಂಧವಾಗಿ ಇಲ್ಲಿರುವ ಜನಸಂಖ್ಯೆ ಕಡಿಮೆ ಇರುವುದರಿಂದ ಹಾಗೂ ಜಿಲ್ಲಾ ಆಸ್ಪತ್ರೆ ಒಂದೂವರೆ ಕಿ.ಮೀ ಅಂತರದಲ್ಲಿ ಇರುವುದರಿಂದ ಸಾಧ್ಯವಾಗುತ್ತಿಲ್ಲ . ಆದರೂ ಸಹ ೧೫ ನೇ ಹಣಕಾಸು ಯೋಜನೆಯಡಿಯಲ್ಲಿ ೨ ಪಾಲಿಕೆ ಕೇಂದ್ರ , ಮೂರು ನಗರ ಕ್ಷೇಮ ಕೇಂದ್ರಗಳ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ . ಅದನ್ನು ಶೀಘ್ರ ಮಾಡಿಕೊಡುವುದಾಗಿ ಭರವಸೆ ನೀಡಿದರು .
ವರದಿ ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.