ಕೋಲಾರ (ವಿಶ್ವಕನ್ನಡಿಗ ನ್ಯೂಸ್): ಆಹಾರ ಪ್ರತಿಯೊಬ್ಬರ ವೈಯುಕ್ತಿಕ ಹಕ್ಕು ಬಡ ಮಕ್ಕಳ ಆಹಾರದಲ್ಲಿ ತಾರತಮ್ಯ ಮಾಡುವ ಮೊಟ್ಟೆ ನೀಡಬಾರದೆಂಬ ಆಲೋಚನೆಯನ್ನು ಕೈಬಿಡಬೇಕು . ಆದಷ್ಟು ಬೇಗನೆ ಮಕ್ಕಳಿಗೆ ಮೊಟ್ಟೆ ಯೋಜನೆಯನ್ನು ಅನುಷ್ಠಾನ ಮಾಡಬೇಕೆಂದು ಜಿಲ್ಲೆಯ ಪ್ರಗತಿಪರ ಮಹಿಳಾ ಸಂಘಟನೆಗಳ ಒಕ್ಕೂಟವು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿಯಲ್ಲಿ ಸಲ್ಲಿಸಿದರು .
ಗಮನ ಮಹಿಳಾ ಸಮೂಹ ಸಮನ್ವಯಾಧಿಕಾರಿ ಶಾಂತಮ್ಮ ಮಾತನಾಡಿ ಇತ್ತೀಚೆಗೆ ಹೆಚ್ಚು ಸದನದಲ್ಲಿ ಚರ್ಚೆಯಾಗುತ್ತಿರುವ ಶಾಲಾ ಮಕ್ಕಳಿಗೆ ಮೊಟ್ಟೆ ಕೊಡುವ ವಿಚಾರ ಕುರಿತು ಸಾಕರಷ್ಟು ವಿವಾದಗಳು ಆಗುತ್ತಿರುವುದು ದುರಂತವೇ ಸರಿ . ಕಳೆದ ಎರಡು ವರ್ಷಗಳಿಂದ ಕೋವಿಡ್ 19 ರ ಹಿನ್ನಲೆಯಲ್ಲಿ ಸಾಕಷ್ಟು ಬಡ ಕುಟುಂಬದ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿರುವ ಅಂಕಿ ಅಂಶಗಳುಳ್ಳ ಅಧ್ಯಯನದ ವರದಿ ಹೇಳುತ್ತಿದೆ . ಹಾಗಾಗಿ ಈ ಯೋಜನೆಯು ಬಡ ಮಕ್ಕಳಿಗೆ ಅಗತ್ಯವಿದ್ದು , ಯೋಜನೆಯನ್ನು ಮುಂದುವರೆಸಬೇಕು ಎಂದರು .
ಗ್ರಾಮೀಣ ಮಹಿಳಾ ಒಕ್ಕೂಟದ ಕಾರ್ಯದರ್ಶಿ ಎಂ.ಜಿ.ಪಾಪಮ್ಮ ಮಾತನಾಡಿ ಕೋಲಾರ ಜಿಲ್ಲೆಯಲ್ಲಿರುವ 20 ಸ್ವಯಂ ಸೇವಾ ಸಂಸ್ಥೆಗಳು ಸೇರಿಕೊಂಡು ಕಳೆದ 5 ವರ್ಷಗಳಿಂದ ಜಿಲ್ಲಾ ಪ್ರಗತಿಪರ ಮಹಿಳಾ ಸಂಘಟನೆಗಳ ಒಕ್ಕೂಟವನ್ನು ಮಾಡಿಕೊಂಡು ಮಹಿಳೆಯರ ಸಶಸ್ತ್ರತೆಗಾಗಿ ಹಾಗೂ ಮಹಿಳೆಯರ ಹಕ್ಕುಗಳ ಮೇಲೆ ಚ್ಯುತಿ ಬಂದಲ್ಲಿ ಎಲ್ಲರೂ ಸೇರಿ ಐಕ್ಯಮತ್ಯದಿಂದ ವಿರೋಧಿಸುವುದು , ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವುದು ಹಾಗೆಯೇ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾ ಬಂದಿದ್ದೇವೆ ಎಂದರು .
ಈ ಸಂದರ್ಭದಲ್ಲಿ ಶಾಂತಿ ಸೌಹಾರ್ಧ ಸಂಸ್ಥೆಯ ಕಾರ್ಯದರ್ಶಿ ಹೆಚ್ . ಶಾಂತಮ್ಮ , ಗಮನ ಮಹಿಳಾ ಒಕ್ಕೂಟದ ಲಕ್ಷ್ಮೀದೇವಿ , ಈನೆಲ ಈಜಲ ಬಿ.ವೆಂಕಟಾಚಲಪತಿ , ಸಂವಾದ ವಿಜಿಕುಮಾರ್ , ಯಂಗ್ ಇಂಡಿಯಾ ಡೆವಲಪ್ಮೆಂಟ್ ಹೂಹಳ್ಳಿ ನಗರಾಜ್ , ಸುವರ್ಣ ಕರ್ನಾಟಕ ಕಲಾವಿದರ ಒಕ್ಕೂಟದ ವಿ.ಸಂಜೀವಯ್ಯ ಯಶಸ್ವಿನಿ ಮಹಿಳಾ ಮಂಡಳಿ ಅಧ್ಯಕ್ಷೆ ಕೆ.ಎಸ್.ನಾಗವೇಣಮ್ಮ , ಗ್ರಾಮೀಣ ಮಹಿಳಾ ಒಕ್ಕೂಟದ ಅಧ್ಯಕ್ಷೆ ಹೆಚ್.ಎಂ.ಲಕ್ಷ್ಮಮ್ಮ , ಪಿ.ಜಿ.ಸೆಂಟರ್ ಮಂಗಸಂದ್ರದ ವಿದ್ಯಾರ್ಥಿ ಶ್ರವಣ್ ಕುಮಾರ್ , ಕಲಾವಿದ ಕುಡುವನಹಳ್ಳಿ ಗಣೇಶ್ ಹಾಜರಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.