ಬಂಟ್ವಾಳ(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಮುಸ್ಲಿಂ ಜಮಾಅತ್ ಬಂಟ್ವಾಳ ತಾಲೂಕು ಸಮಿತಿ ವ್ಯಾಪ್ತಿಯ ಇರ್ವತ್ತೂರು ಗ್ರಾಮ ಸಮಿತಿ ರಚನಾ ಸಭೆಯು ಮುಸ್ಲಿಂ ಜಮಾಅತ್ ಬಂಟ್ವಾಳ ತಾಲೂಕು ಸಮಿತಿಯ ಉಪಾಧ್ಯಕ್ಷ ರಾದ ಹಾಜಿ ಹಮೀದ್ ಕೊಡುಂಗಾಯಿ ಯವರ ಅಧ್ಯಕ್ಷತೆಯಲ್ಲಿ ಜರುಗಿತು. ಬಂಟ್ವಾಳ ತಾಲೂಕು ಸಮಿತಿ ಫ್ರಧಾನ ಕಾರ್ಯದರ್ಶಿ ಅನ್ವರ್ ಹಾಜಿ ಗೂಡಿನಬಳಿ ಸಭೆಯನ್ನು ಉದ್ಘಾಟಿಸಿದರು.
ತಾಲೂಕು ಸಮಿತಿಯ ಸಂಘಟನಾ ಕಾರ್ಯದರ್ಶಿ ಸಿರಾಜುದ್ದೀನ್ ಸಖಾಫಿ ಕನ್ಯಾನ ವಿಷಯ ಮಂ ಡಿಸಿದರು.ತಾಲೂಕು ಸಮಿತಿಯ ಕಾರ್ಯದರ್ಶಿ ಅಬ್ದುಲ್ ರಶೀದ್ ವಗ್ಗ ಆಯ್ಕೆ ಪ್ರಕ್ರಿಯೆ ಗೆ ನೇತೃತ್ವ ನೀಡಿದರು.ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮಂಗಿಲಪದವು ನೂತನ ಸಮಿತಿಗೆ ಶುಭ ಹಾರೈಸಿ ಮಾತನಾಡಿದರು.
ನೂತನ ಸಮಿತಿಯ ಅದ್ಯಕ್ಷರಾಗಿ ಅಬ್ದುಲ್ ನಝೀರ್ ಸಾಹೇಬ್ಪ್ರಧಾನ ಕಾರ್ಯದರ್ಶಿಯಾಗಿ ಎಸ್ ಅಬ್ದುಲ್ ರಹಿಮಾನ್ಕೋಶಾದಿಕಾರಿಯಾಗಿ ಅಬೂಬಕ್ಕರ್ ಟಿಎಸ್ಎನ್ಸಂಘಟನಾ ಕಾರ್ಯದರ್ಶಿಯಾಗಿ ಎಸ್ ಎಂ ಮುಹಮ್ಮದ್ ವಸೀಂಉಪಾಧ್ಯಕ್ಷ ರಾಗಿ ಮುಹಮ್ಮದ್ ರಫೀಖ್ ಮತ್ತು ಶೇಖ್ ರಹ್ಮತುಲ್ಲಾಹ್ಜೊತೆ ಕಾರ್ಯದರ್ಶಿಗಳಾಗಿ ಇಬ್ರಾಹಿಂ ಪೈಂಟರ್ ಹಾಗೂ ಯೂಸುಫ್ ರಫೀಕ್ ರವರನ್ನು ಆರಿಸಲಾಯಿತುಕಾರ್ಯಕಾರಿ ಸಮಿತಿ ಸದಸ್ಯರಾಗಿ ಇಬ್ರಾಹಿಂ ಮೇಸ್ತ್ರಿ,ಮುಹಮ್ಮದ್ ಹಫೀಲ್, ಮುಹಮ್ಮದ್ ಯೂಸುಫ್, ನಿಯಾಝುದ್ದೀನ್ ಶಫೀಖ್, ಮುಹಮ್ಮದ್ ಸಪ್ವಾನ್, ಮುಹಮ್ಮದ್ ಸಿಮಾಖ್, ಎಸ್ ಪಿ ರಶೀದ್, ಅಪ್ರೀದ್,ಅಲ್ತಾಫ್,ಶಾರೂಖ್ ರವರನ್ನು ಆರಿಸಲಾಯಿತುಪ್ರಾರಂಭದಲ್ಲಿ ಸಮಿತಿಯ ಕಾರ್ಯದರ್ಶಿ ಎಸ್ ಅಬ್ದುಲ್ ರಹಿಮಾನ್ ಸ್ವಾಗತಿಸಿ ಕೊನೆಯಲ್ಲಿ ಕೃತಜ್ಞತೆ ಸಲ್ಲಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.