ಪತಿಯಿಂದ ಪತ್ನಿಗೆ ಕಪಾಳಮೋಕ್ಷ : ಪತ್ನಿಗೆ ಶ್ರವಣದೋಷ !
(ವಿಶ್ವ ಕನ್ನಡಿಗ ನ್ಯೂಸ್) : ಬೇರೊಬ್ಬ ಮಹಿಳೆಯನ್ನು ಮದುವೆಯಾಗಲು ಯೋಜನೆ ಹಾಕಿದ ಪತಿಯ ಬೆರಳುಗಳನ್ನು ಮುರಿದ 25 ವರ್ಷದ ಏಷ್ಯನ್ ಮಹಿಳೆಗೆ ಯುಎಇಯಲ್ಲಿನ ಕ್ರಿಮಿನಲ್ ನ್ಯಾಯಾಲಯವು ಆರು ತಿಂಗಳ ಜೈಲು ಬಳಿಕ ಗಡೀಪಾರು ಮಾಡುವ ಶಿಕ್ಷೆಯನ್ನು ವಿಧಿಸಿದೆ.
ತನಿಖೆಯ ಪ್ರಕಾರ, ದಂಪತಿಗಳು ಜಗಳವಾಡಿದರು, ಅದು ದೈಹಿಕ ಕಲಹಕ್ಕೆ ತಿರುಗಿತು. ಪತಿ ಪತ್ನಿಗೆ ಕಪಾಳಮೋಕ್ಷ ಮಾಡಿದ್ದು, ಪತ್ನಿಗೆ ಶೇ 2 ಶ್ರವಣದೋಷ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಲು ತನ್ನ ಗಂಡನ ನಿರ್ಧಾರ ಮತ್ತು ನನ್ನ ವೈವಾಹಿಕ ಹಕ್ಕುಗಳನ್ನು ನೀಡಲು ನಿರಾಕರಿಸಿದ್ದರಿಂದ ನಾನು ಹೀಗೆ ಮಾಡಬೇಕಾಯಿತು ಎಂದು ಮಹಿಳೆ ಅಧಿಕಾರಿಗಳಿಗೆ ತಿಳಿಸಿದ್ದಾಳೆ.
24 ವರ್ಷದ ಯುವಕನ ಸಾಕ್ಷ್ಯದ ಪ್ರಕಾರ, ನಾನು ಮರುಮದುವೆಯಾಗುವ ನಿರ್ಧಾರವನ್ನು ಹೆಂಡತಿ ಒಪ್ಪಿಕೊಳ್ಳಲು ಇಷ್ಟಪಡಲಿಲ್ಲ, ಆದ್ದರಿಂದ ಅವಳು ನನ್ನ ಮೇಲೆ ಹಲ್ಲೆ ನಡೆಸಿ ಅವಮಾನಿಸಿದ್ದಾಳೆ. ನಮ್ಮೊಳಗಿನ ಜಗಳವು ಜೋರಾದಾಗ ಪತ್ನಿ ನನ್ನ ಬಲಗೈಯ ಬೆರಳುಗಳನ್ನು ಬಲವಾಗಿ ಹಿಡಿದು, ಹಿಂದಕ್ಕೆ ಎಳೆದು ಬೆರಳುಗಳನ್ನು ಮುರಿದಿದ್ದಾಳೆ ಎಂದು ಹೇಳಿದ್ದಾನೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.