ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಇತ್ತೀಚೆಗೆ ಉಡುಪಿ ಮತ್ತಿತರ ಕೆಲವು ಕಡೆಗಳ ಕೆಲವು ಸರಕಾರೀ ಶಿಕ್ಷಣ ಸಂಸ್ಥೆಗಳಲ್ಲಿ ನೂರಾರು ವರ್ಷಗಳಿಂದ ಮುಸ್ಲಿಂ ವಿದ್ಯಾರ್ಥಿನಿಯರು ದರಿಸುತ್ತಾ ಬರುತ್ತಿರುವ ಮತ್ತು ಭಾರತದ ಸಂವಿಧಾನದಲ್ಲೂ ಅವಕಾಶ ಕಲ್ಪಿಸಲಾದ ಹಿಜಾಬ್, ಸ್ಕಾರ್ಫ್ ನ ಬಗ್ಗೆ ತೀರಾ ಅನಗತ್ಯವಾದ ವಿವಾದವನ್ನು ಸ್ರಷ್ಟಿಸಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಕೋಮು ವಿಷಬೀಜವನ್ನು ಬಿತ್ತುವ ಹುನ್ನಾರ ನಡೆಯುತ್ತಿರುವುದು ವಿಷಾದನೀಯ.
ಮುಸ್ಲಿಂ ವಿಧ್ಯಾರ್ಥಿನಿಯರ ಶೈಕ್ಷಣಿಕ ಭವಿಷ್ಯಕ್ಕೆ ತಡೆಯೊಡ್ಡುವ ಈ ಷಡ್ಯಂತ್ರವನ್ನು ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ. ಮಾತ್ರವಲ್ಲ ಈ ಅನ್ಯಾಯದ ವಿರುದ್ಧ ಪ್ರಬಲ ಹೋರಾಟ ಮಾಡಲಿದ್ದೇವೆ ಎಂದು ದ.ಕ. ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ವಿವಾದವನ್ನು ಸರಕಾರ ಕೂಡಲೇ ಬಗೆಹರಿಸಬೇಕು. ಸಂವಿಧಾನ ಬದ್ಧವಾದ ಹಿಜಾಬ್ ಧರಿಸುವ ಪ್ರಕ್ರಿಯೆಗೆ ತಡೆಯೊಡ್ಡುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಸೌಹಾರ್ದ ವಾತಾವರಣ ಶಾಶ್ವತ ವಾಗಿರುವಂತೆ ನೋಡಿಕೊಳ್ಳಬೇಕು ಎಂದು ಅಶ್ರಫ್ ಒತ್ತಾಯಿಸಿದ್ದಾರೆ. ಹಿಜಾಬ್ ಧಾರಣೆ ಮುಸ್ಲಿಮ್ ಧರ್ಮದ ಧಾರ್ಮಿಕ ಮತ್ತು ಸಾಂವಿಧಾನಿಕ ಹಕ್ಕು.ಇದನ್ನು ಯಾವುದೇ ಬೆಲೆ ತೆತ್ತು ಸಂರಕ್ಷಿಸ ಲಾಗುವುದು. ಹಿಜಾಬ್ ಸಂಬಂಧಿತ ವಿವಾದ ಕರ್ನಾಟಕ ಉಚ್ಛ ನ್ಯಾಯಲಯ ದಲ್ಲಿ ಇದ್ದು, ತೀರ್ಪನ್ನು ಗೌರವಿಸಲಾಗುವುದು. ಭಾರತ ದ ಸಂವಿಧಾನದಲ್ಲಿ ಧಾರ್ಮಿಕ ಆಚರಣೆಗೆ ಮುಕ್ತ ಸ್ವಾತಂತ್ರ್ಯ ವಿರುವುದರಿಂದ ಸಂವಿದಾನದ ಆಶಯವನ್ನು ನ್ಯಾಯಾಲಯ ಎತ್ತಿ ಹಿಡಿಯಲಿದೆ ಎಂಬ ಆಶಾ ಭಾವನೆ ಇದೆ ಎಂದು ಅಶ್ರಫ್ ರವರು ತಿಳಿಸಿದ್ದಾರೆ.
ಕೆ.ಅಶ್ರಫ್ ಅಧ್ಯಕ್ಷರು, ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.