ಕೋಲಾರ ( ವಿಶ್ವಕನ್ನಡಿಗ ನ್ಯೂಸ್ ) : ಪರಿಸರ ಸಂರಕ್ಷಣೆ ಜೂನ್.05 ಕ್ಕೆ ಸೀಮೀತವಾಗದೆ ಪ್ರತಿದಿನ ಪರಿಸರ ದಿನವಾಗಬೇಕೆಂದು ರೈತ ಸಂಘದ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಆಶಯ ಪಟ್ಟರು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹೊಸಮಟ್ನಹಳ್ಳಿ ಗ್ರಾಮದ ತಮ್ಮ ಕೃಷಿ ಭೂಮಿಯಲ್ಲಿ ಗಿಡ ನೆಟ್ಟು ಕೃಷಿ ಕೂಲಿಕಾರ್ಮಿಕರಿಗೆ ಗಿಡ ಹಂಚುವ ಮೂಲಕ ಆಚರಣೆ ಮಾಡಿ ಪರಿಸರ ನಾಶವಾದರೆ ದೇಶದ ಮನುಕಲದ ಪರಿಸ್ಥತಿಯನ್ನು 2 ವರ್ಷಗಳ ಕಾಲ ಕೋರೋನಾ ಸೃಷ್ಠಿ ಮಾಡಿದ ಅವಾಂತರ ಪ್ರತಿಯೊಬ್ಬ ನಾಗರೀಕರಿಗೂ ಪರಿಪಾಠವಾಗಬೇಕೆಂದು ಯುವ ಪೀಳಿಗೆಗೆ ಸಲಹೆ ನೀಡಿದರು.
ಕೈಗಾರಿಕೆ, ರಸ್ತೆ ಲೇಔಟ್ ಅಅಭಿವೃದ್ದಿ ಹೆಸರಿನಲ್ಲಿ ಮರಗಿಡಗಳನ್ನು ನಾಶ ಮಾಡುವ ಮುಖಾಂತರ ಪರಿಸರದ ಮೇಲೆ ಮಾನವನ ದಬ್ಬಾಳಿಕೆ ನಿಲ್ಲದೆ ಇದ್ದರೆ ಮುಂದಿನ ದಿನಗಳಲ್ಲಿ ಇಡೀ ಮನುಕುಲದ ಜೊತಗೆ ಜೀವಸಂಕುಲ ನಾಶವಾಗುವ ಕಾಲ ದೂರವಿಲ್ಲ ಇನ್ನಾದರೂ ಪರಿಸರ ಉಳಿಯಬೇಕಾದರೆ ಮನುಷ್ಯನ ದುರಾಸೆಗೆ ಕಡಿವಾಣ ಹಾಕಿ ಮದುವೆ ಮತ್ತಿತರ ಸಮಾರಾಂಭಗಳು ಹಾಗೂ ಸರ್ಕಾರದ ಯಾವುದೇ ಸೌಲಭ್ಯ ಪಡೆಯಬೇಕಾದರೆ ಒಂದು ಗಿಡ ನೆಟ್ಟು ಪೋಷಣೆ ಮಾಡುವ ಕುಂಟುಂಬಗಳಿಗೆ ಮಾತ್ರ ಯೋಜನೆ ಜಾರಿ ಮಾಡುವ ಕಾನೂನು ಜಾರಿ ಆಗಬೇಕೆಂದು ಸರ್ಕಾರಗಳಿಗೆ ಕಿವಿ ಮಾತು ಹೇಳಿದರು.
ಕೃಷಿ ಕಾರ್ಮಿಕ ರೈತ ಮಹಿಳೆ ಸುನೀತಮ್ಮ ಮಾತನಾಡಿ ಪರಿಸರ ಪ್ರೇಮಿ ಯುವಕರಿಗೆ ಆಧರ್ಶವಾಗಿರುವ ಸಾಲು ಮರದ ತಿಮ್ಮಕ್ಕನ ಪರಿಸರ ರಕ್ಷಣೆ ಇಂದಿನ ಯುವ ಪೀಳಿಗೆಗೆ ಮನವರಿಕೆ ಮಾಡಲು ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಪಠ್ಯ ಪುಸ್ತಕಗಳಲ್ಲಿ ಅಳವಡಿಸುವ ಜೊತೆಗೆ ಒಂದು ಮರ ಕಡಿದರೆ 10 ಗಿಡ ನೆಡುವ ಕಾನೂನು ಜಾರಿ ಆಗಬೇಕೆಂದು ಒತ್ತಾಯ ಮಾಡಿದರು.
ಪ್ರತಿ ವರ್ಷ ಪರಿಸರ ದಿನಾಚರಣೆಯನ್ನು ತಾ ಮುಂದು ನಾ ಮುಂದು ಎಂದು ಗಿಡ ನೆಡುವ ಮುಖಾಂತರ ಪ್ರಚಾರ ಪಡೆಯುವ ಜನಪ್ರತಿನಿಧಿಗಳು ಸರ್ಕಾರಿ ಅಧಿಕಾರಿಗಳು ಅರಣ್ಯ ಹಾಗೂ ಪರಿಸರ ಇಲಾಖೆ ನೆಟ್ಟಿರುವ ಗಿಡದ ರಕ್ಷಣೆ ಆಗಿದೆಯೇ ಎಂಬುಂದನ್ನು ಆತ್ಮ ಸಾಕ್ಷಿಯಾಗಿ ಅವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಪ್ರಶ್ನೆ ಮಾಡಿದರು.
ಪರಿಸರ ಉಳಿಸದೆ ಹೋದರೆ ಮುಂದಿನ ದಿನಗಳಲ್ಲಿ ಗಾಳಿಗೂ ಸಹ ಹಣ ನೀಡಿ ಬದುಕಬೇಕಾದ ಪರಿಸ್ಥಿತಿ ಬರುವ ಮೊದಲು ಕೈಗಾರಿಕಾ ಮಾಲಿನ್ಯ , ಪ್ಲಾಸ್ಠಿಕ್ ನಿಷೇಧ ಮಾಡುವ ಜೊತೆಗೆ ಪರಿಸರ ನಾಶ ಮಾಡುವ ದುಷ್ಕರ್ಮಿಗಳ ವಿರುದ್ದ ಪ್ರಬಲವಾದ ಕಾನೂನು ಜಾರಿ ಆಗಬೇಕೆಂದು ಒತ್ತಾಯ ಮಾಡಿದರು.
ಗಿಡ ನೆಡುವಾಗ ಲಕ್ಷ್ಮಮ್ಮ, ಭಾಗ್ಯಮ್ಮ, ಶಾಂತಮ್ಮ, ಪದ್ಮಮ್ಮ, ನರಸಮ್ಮ, ಗೀತಾ ಅಮರಾವತಿ, ಮುನಿಯಮ್ಮ, ಮುಂತಾದ ಕೃಷಿ ಕಾರ್ಮಿಕರು ಇದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.