ಕಾಲಿಗೆಷ್ಟು ದೂರವಿದ್ದರೇನಂತೆ ಹೃದಯಕ್ಕೆ ಇಲಾಹನು ಹತ್ತಿರವಿಲ್ಲವೇ ಗಳಿಕೆಯಲ್ಲೆಷ್ಟು ಮೆಲಿದ್ದರೇನಂತೆ:? ನನ್ನ ಹಬೀಬರ ಮೊಹಬ್ಬತ್ ದೊರಕದೆ..
ಹಾಗೇ ಲೀನವಾಗಬೇಕು ಮನ ಹುಬ್ಬು ಸ.ಅ ರ ಧ್ಯಾನದ ಅಮಲಿನಲ್ಲಿ.. ದಿನಾ ಜಪಿಸಿ ಅಮಲೇರಿಸಬೇಕು ಕನಸಲ್ಲೂ ಕಮರಿ ಹೋಗದಂತೆ..
ಅಜ್ಞಾನ ಕಾಲದ ಅಂಧಕಾರದ ಮಧ್ಯೆ ಬೆಳದಿಂಗಳಾದ ಹಬೀಬರ ಹುಟ್ಟು ಮತ್ತೆ ಜಗತ್ತಿಗೆ ಪ್ರಕಾಶಿತ ಗೋಚರ ಅದು ಇಂದೂ ಹಾಗೇ ನೆಲೆ ನಿಂತಿದೆ..
ಆದಿ ಕಾಲದಲ್ಲೂ ಹುಬ್ಬು ರಸೂಲರ ರೇಗಿಸುವವರಿದ್ದರು. ಸ್ವಹಾಬಿಗಲು ರೋಷ ಬದಿಗಿರಿಸಿ , ಶಾಂತಿಯಿಂದ ಸಂಧಾನಕ್ಕೊಳಗಾದರು ಮತ್ತೆ ಹಬೀಬರ ಬಳಿ ಕ್ಷಮೆ ಕೇಳಿ ಅವರೂ ಧರ್ಮದಲ್ಲೇ ಪಾಲುದಾರಾದರು..
ಕಪ್ಪು ಕಅಬಾ ಕಂಡವರ ಮನ ಮಿಡಿಯುವ ನಿಮಿಷ ವರ್ಣಿಸಲಾಗದ ಅನುಭವ ಕ್ಷಣ ಕಪ್ಪು ಬಿಲಾಲರೂ ಮುತ್ತಿಕ್ಕಿದ ಕಅಬಾ ಅಲ್ಲಿಗೆ ತಲುಪಲು ಅವನಿಸದವನ ಮನ, ಕಪ್ಪು ಹೃದಯ ಕಲ್ಲಿಗೆ ಸಮ..
ಅಲ್ಲಾಹನ ದಾಸನಾದ ಮೇಲೆ ಪಾದಯಾತ್ರೆಯಲ್ಲಿ ಪಾವನ ಭೂಮಿ ಒಮ್ಮಿ ಸ್ಪರ್ಶಿಸಲು ನನಗೂ ತವಕವಿದೆ ಕರುಣಿಸುವ ಇಲಾಹನಲ್ಲಿ ಅಮಲಿನ ಮತ್ತೇರಿಸಬೇಕು ಅಷ್ಟೇ..
ನೂರಾರು ಮೈಲು ದಾಟಿದ ಮೇಲೂ ಹಬೀಬರ ಮೊಹಬ್ಬತ್ ಕಿಂಚಿತ್ತೂ ಕಳೆಗುಂದಲಿಲ್ಲವಲ್ಲ ಶಿಹಾಬ್ ಇನ್ನೂ, ಮೈಲುಗಟ್ಟಲೆ ದಾಟಿ ತಲುಪುವ ವೇಳೆಗೆ ನಮ್ಮ ಹಬೀಬರ ಶಫಾಅತ್ ನಿನ್ನ ಮೇಲಿರಲಿ..
– ಶಾಹುಲ್ ಹಮೀದ್ ಕಾಶಿಪಟ್ನ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.