(ವಿಶ್ವ ಕನ್ನಡಿಗ ನ್ಯೂಸ್) : 105 ವರ್ಷದ ಅಜ್ಜಿಯೊಬ್ಬರು ಕೇವಲ 45.40 ಸೆಕೆಂಡ್ಗಳಲ್ಲಿ 100 ಮೀಟರ್ ಓಟದ ಮೂಲಕ ‘ವಯಸ್ಸು ಕೇವಲ ಒಂದು ಸಂಖ್ಯೆ’ ಎಂಬ ಗಾದೆಯನ್ನು ಸಾಬೀತುಪಡಿಸಿದ್ದಾರೆ.
ಈ ಮೊದಲು 74 ಸೆಕೆಂಡುಗಳಲ್ಲಿ 100 ಮೀಟರ್ ಓಡಿ ವಿಶ್ವ ಮಾಸ್ಟರ್ಸ್ನಲ್ಲಿ ಚಿನ್ನ ಗೆದ್ದಿದ್ದ 101 ವರ್ಷದ ಮಾನ್ ಕೌರ್ ಅವರ ದಾಖಲೆಯನ್ನು ಈ ಅಜ್ಜಿ ಮುರಿದಿದ್ದಾರೆ. ಭಾರತದ ಹರಿಯಾಣ ರಾಜ್ಯದ ಶತಾಯುಷಿ ”ರಾಂಬಾಯಿ”ಯು ಗುಜರಾತ್ನ ವಡೋದರಾದಲ್ಲಿ ನಡೆದ ರಾಷ್ಟ್ರೀಯ ಓಪನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಈ ದಾಖಲೆ ಬರೆದಿದ್ದಾರೆ.
70 ರ ನಂತರದ ದೈಹಿಕ ಚಟುವಟಿಕೆಯು ಕೇವಲ ಉದ್ಯಾನವನದಲ್ಲಿ ಒಂದು ಸಣ್ಣ ನಡಿಗೆಗೆ ಸೀಮಿತವಾಗಿದೆ ಎಂದು ಭಾವಿಸುವ ದೇಶದ ಯುವಜನರಿಗೆ ಮಾತ್ರವಲ್ಲದೆ ಎಲ್ಲಾ ವಯಸ್ಸಾದ ಭಾರತೀಯರಿಗೆ ರಾಂಬಾಯಿ ಸ್ಫೂರ್ತಿಯಾಗಿದ್ದಾರೆ.
ವಡೋದರಾ ಕ್ರೀಡಾಕೂಟದಲ್ಲಿ ಅವರು ಜೂನ್ 15 ರಂದು 100 ಮೀಟರ್ನಲ್ಲಿ ಪದಕ ಗೆದ್ದರು ಮಾತ್ರವಲ್ಲದೆ ಜೂನ್ 19 ರಂದು 200 ಮೀಟರ್ನಲ್ಲಿ ಪದಕ ಗೆದ್ದರು. ಅವರು 200 ಮೀ ಓಟವನ್ನು ಒಂದು ನಿಮಿಷ ಮತ್ತು 52.17 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದರು.
ಸ್ಥಳೀಯ ಮಾಧ್ಯಮಗಳ ಪ್ರಕಾರ, ರಂಬಾಯ್ ಅವರು 1917 ರಲ್ಲಿ ಜನಿಸಿದರು, ಆ ಸಂದರ್ಭದಲ್ಲಿ ಮೊದಲನೆಯ ಮಹಾಯುದ್ಧವು ನಡೆಯುತಿತ್ತು. ಆ ಸಂದರ್ಭದಲ್ಲಿ ರಾಣಿ ಎಲಿಜಬೆತ್ ರ ಅಜ್ಜ ಜಾರ್ಜ್ ಭಾರತವನ್ನು ಆಳುತ್ತಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.