ಲಕ್ನೋ (ವಿಶ್ವ ಕನ್ನಡಿಗ ನ್ಯೂಸ್) : ಉತ್ತರ ಪ್ರದೇಶದ ಮಥುರಾದ ರೈಲ್ವೆ ನಿಲ್ದಾಣದಿಂದ ಕಳವು ಮಾಡಲಾದ ಶಿಶುವನ್ನು ಫಿರೋಜಾಬಾದ್ನಲ್ಲಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮಹಿಳಾ ಕೌನ್ಸಿಲರ್ನ ಮನೆಯಲ್ಲಿ ವಶಪಡಿಸಿಕೊಳ್ಳಲಾಗಿದೆ. ಫಿರೋಜಾಬಾದ್ ಮುನ್ಸಿಪಲ್ ಕಾರ್ಪೊರೇಷನ್ನ ಬಿಜೆಪಿ ನಾಯಕಿ ಮತ್ತು ವಾರ್ಡ್ ಕೌನ್ಸಿಲರ್ ವಿನಿತಾ ಅಗರ್ವಾಲ್ ಅವರು ಇಂತಹ ಅಭ್ಯಾಸದಲ್ಲಿ ತೊಡಗಿರುವ ಗ್ಯಾಂಗ್ಗೆ 1.80 ಲಕ್ಷ ರೂ ನೀಡಿ ಮಗುವನ್ನು ಪಡೆದಿದ್ದಾರೆ.
ಇಂತಹ ಮಕ್ಕಳನ್ನು ಮಾರಾಟ ಮಾಡುವ ದಂಧೆಯಲ್ಲಿ ತೊಡಗಿದ್ದ ಆರು ಜನರ ತಂಡ ಏಳು ತಿಂಗಳ ಮಗುವನ್ನು ಕಳವುಗೈದಿದೆ. ಮಥುರಾ ರೈಲ್ವೇ ಪೊಲೀಸರು ವೈದ್ಯ ದಂಪತಿ, ಬಿಜೆಪಿ ಮುಖಂಡ, ಆಕೆಯ ಪತಿ ಮತ್ತು ಮಗುವನ್ನು ಕದ್ದ ಗ್ಯಾಂಗ್ನ ನಾಲ್ವರು ಸೇರಿದಂತೆ ಎಂಟು ಜನರನ್ನು ಬಂಧಿಸಿದ್ದಾರೆ.
ಆಗಸ್ಟ್ 24 ರಂದು ಮಥುರಾ ರೈಲು ನಿಲ್ದಾಣದಲ್ಲಿ ತನ್ನ ತಾಯಿಯೊಂದಿಗೆ ಪ್ಲಾಟ್ಫಾರ್ಮ್ನಲ್ಲಿ ಮಲಗಿದ್ದ ಮಗುವನ್ನು ಕದ್ದೊಯ್ದಿದ್ದ ವಿಡಿಯೋ ವೈರಲ್ ಆಗಿತ್ತು. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕಳೆದ ಆರು ದಿನಗಳಿಂದ ವಿವಿಧ ನಗರಗಳಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
#Watch | #UP man steals a #child from mother sleeping at a #railwayplatform#uttarpradesh #mathura #mathurarailwaystation #viral #cctv #cctvfootage #mathurapolice #viralvideo pic.twitter.com/fH33Vyr9XQ — Free Press Journal (@fpjindia) August 28, 2022
#Watch | #UP man steals a #child from mother sleeping at a #railwayplatform#uttarpradesh #mathura #mathurarailwaystation #viral #cctv #cctvfootage #mathurapolice #viralvideo pic.twitter.com/fH33Vyr9XQ
— Free Press Journal (@fpjindia) August 28, 2022
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.