(www.vknews.in) ಒಂದು ಕಾಲದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅತೀ ಹಿಂದುಳಿದಿದ್ದ ಮುಸ್ಲಿಂ ಅಲ್ಪ ಸಂಖ್ಯಾತ ವಿಭಾಗವು ಇತ್ತೀಚಿನ ವರ್ಷಗಳಲ್ಲಿ ಗಣನೀಯ ಸಾಧನೆಯನ್ನು ಮಾಡುತ್ತಿದ್ದು ಅನಿವಾಸಿ ಸಹೋದರರು ಹಲವಾರು ಸಂಘಸಂಸ್ಥೆಗಳ ಮೂಲಕ ಬಡ ವಿಧ್ಯಾರ್ಥಿಗಳಿಗೆ ಕಲಿಯುವ ಅವಕಾಶ ಮಾಡಿಕೊಡುತ್ತಿದೆ ಎಂದು ಅನಿವಾಸಿ ಉದ್ಯಮಿ ಹಾಜಿ ಬದ್ರುದ್ದೀನ್ ಹೆಂತಾರ್ ಹೇಳಿದ್ದಾರೆ.
ಅವರು ಮಂಗಳವಾರ ಕೆಮ್ಮಾರ ಶಂಸುಲ್ ಉಲಮಾ ಮೆಮೋರಿಯಲ್ ದಹವಾ ಶರೀಹತ್ ಕಾಲೇಜಿನ ಮೀಲಾದ್ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಸಂಸ್ತೆಯ ಮುಖ್ಯಸ್ಥ ಎಸ್ ಬಿ ದಾರಿಮಿ ಅದ್ಯಕ್ಷತೆ ವಹಿಸಿದ್ದರು. ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ ಪ್ರಸ್ತಾವಿಕವಾಗಿ ಮಾತನಾಡಿದರು. ಗಂಡಿಬಾಗಿಲು ಖತೀಬ್ ಶೌಖತ್ ಪೈಝಿ ಉದ್ಘಾಟಿಸಿದರು. ಹನೀಪ್ ದಾರಿಮಿ ನೆಕ್ಕಿಲಾಡಿ,ಕೊಯಿಲ ಹಸೈನಾರ್ ಹಾಜಿ,ಯುನಿಕ್ ಅಬ್ದುಲ್ ರಹಿಮಾನ್,ಬಡಿಲ ಹುಸೈನ್,ಜಿ ರಫೀಕ್ ಹಾಜಿ ,ಎನ್ ಇಸಾಕ್,ಆದಂ ಹಾಜಿ ಗಂಡಿಬಾಗಿಲು ಮಸೀದಿ ಅಧ್ಯಕ್ಷರು, ಅಶ್ರಪ್ ಮೌಲವಿ ಕೋಲ್ಪೆ,ಉಸ್ತಾದ್ ಬಾ ಅಸನಿ,ಇಸ್ಮಾಯಿಲ್ ಜಿ,ಅಬ್ದುಲ್ ರಹಿಮಾನ್ ಪೈಝಿ ಕುಂತೂರು, ಕಲಂದರ್ ಗಂಡುಬಾಗಿಲು ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭ ಮಹಿಳಾ ಶರೀಹತ್ ಕಾಲೇಜಿನ ವಿಧ್ಯಾರ್ಥಿನಿಯರು,ದಹವಾ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಮದ್ರಸ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನ ಅನಾವರಣ ಗೊಳಿಸಿದರು. ಸಂಸ್ಥೆಯ ಮ್ಯಾನೇಜರ್ ಕೆಎಂಎ ಕೊಡುಂಗೈ ಸ್ವಾಗತಿಸಿದರು. ಅಬ್ದುಲ್ ರಝಾಕ್ ದಾರಿಮಿ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.