ಕುವೈತ್ ನಗರ (ವಿಶ್ವ ಕನ್ನಡಿಗ ನ್ಯೂಸ್) : ಕಳೆದ ಎರಡು ದಿನಗಳ ಮೊದಲು ಕುವೈತ್ ನಲ್ಲಿ ನಡೆದ ಮದುವೆಯಲ್ಲಿ ವರನು 10 ಲಕ್ಷ ದಿನಾರ್ ಗಳನ್ನು (ಸುಮಾರು 26 ಕೋಟಿ ರೂ.) ಮಹರ್ ಆಗಿ ವಧುವಿಗೆ ನೀಡಿದನು. ಮದುವೆ ನೋಂದಣಿಯ ಸಮಯದಲ್ಲಿ(ನಿಕಾಹ್) ಈ ಮೊತ್ತಕ್ಕೆ ಚೆಕ್ ಬರೆಯುವ ಮೂಲಕ ವರನು ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸುತ್ತಾನೆ.
ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ದಾಖಲಾದ ವಿವಾಹಗಳಲ್ಲಿ ಇದು ಅತ್ಯಧಿಕ ಮಹರ್ ಮೊತ್ತವಾಗಿದೆ ಎಂದು ವರದಿಯಾಗಿದೆ. ಇಸ್ಲಾಮಿಕ್ ನಂಬಿಕೆಗಳ ಪ್ರಕಾರ, ವರನು ಮದುವೆಯಾಗುವಾಗ ವಧುವಿಗೆ ಮಹರ್ ನೀಡುವುದು ಕಡ್ಡಾಯವಾಗಿದೆ. ವರನು ವಿನಂತಿಸಿದರೆ ಮಹರ್ ನ ಮೌಲ್ಯವನ್ನು ವಿವಾಹ ಒಪ್ಪಂದದಲ್ಲಿ ದಾಖಲಿಸಲಾಗುತ್ತದೆ. ಆದಾಗ್ಯೂ, ಮಹರ್ ಗೆ ಯಾವುದೇ ಮಿತಿಯನ್ನು ನಿಗದಿಪಡಿಸಲಾಗಿಲ್ಲ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.