ಶ್ರೀನಿವಾಸಪುರ (ವಿಶ್ವ ಕನ್ನಡಿಗ ನ್ಯೂಸ್):ಬದುಕು ಒಂದೇ ದಿನದಲ್ಲಿ ಬದಲಾಗುತ್ತದೆ ಎನ್ನಲು ಸಾಧ್ಯವಿಲ್ಲ ಆದರೆ ಒಂದು ಒಳ್ಳೆಯ ನಿರ್ಧಾರ ಬದಕನ್ನೇ ಬದಲಾಯಿಸುತ್ತದೆ . ಪ್ರತಿಯೊಬ್ಬ ವ್ಯಕ್ತಿಗೂ ಅವನ ದೃಢ ನಿರ್ಧಾರವೇ ಪ್ರೇರಕ ಶಕ್ತಿಯಾಗಿದ್ದು , ಎ೦ದು ಈ ಮಾರ್ಗದಲ್ಲಿ ಗಟ್ಟಿ ಹೆಜ್ಜೆಗಳನ್ನಿಟ್ಟಾಗಲೇ ಯಶಸ್ಸು ದೊರೆಯುತ್ತದೆ ಶಾಸಕ ಕೆ.ಆರ್.ರಮೇಶ್ ಕುಮಾರ್ ಅಭಿಪ್ರಾಯಪಟ್ಟರು .
ತಾಲೂಕಿನ ಲಕ್ಷ್ಮೀಪುರ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘ ನಿ . ವತಿಯಿಂದ ರೈತರಿಗೆ ಕೆಸಿಸಿ ಸಾಲ ಮತ್ತು ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳಿಗೆ ಬುಧವಾರ 1 ಕೋಟಿ 15 ಲಕ್ಷ ಸಾಲದ ಚೆಕ್ ವಿತರಣೆ ಮಾಡಿ ಮಾತನಾಡಿದರು.
ಸ್ವಾವಲಂಬಿ ಬದುಕಿಗಾಗಿ ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ಅಲೆದಾಡಿದರು ಸಾಲವನ್ನು ಪಡೆಯುಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಅಪವಾದವೆಂಬತೆ ಹಣ ಕೊರತೆ ನಿವಾರಿಸುವ ಸಲುವಾಗಿ ಯಾವುದೇ ಮಧ್ಯವರ್ತಿಗಳಿಲ್ಲದೆ ಕೋಲಾರ – ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ವತಿಯಿಂದ ಅವಳಿ ಜಿಲ್ಲೆಗಳ ನೂರಾರು ಮಹಿಳಾ ಸಂಘಗಳಿಗೆ ಹಾಗು ಬೀದಿ ವ್ಯಾಪಾರಿಗಳಿಗೆ ಶೂನ್ಯ ಬಡ್ಡಿದರದ ಸಾಲವನ್ನು ವಿತರಿಸಲಾಗುತ್ತಿದ್ದು ಹಣವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ತಾಲೂಕು ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ , ಸೊಸೈಟಿ ಅಧ್ಯಕ್ಷ ತೂಪಲ್ಲಿ ಕೃಷ್ಣಾರೆಡ್ಡಿ , ಉಪಾಧ್ಯಕ್ಷ ಜಮೀಲ್ಪಾಷ , ನಿರ್ದೇಶಕರಾದ ಮುನಯ್ಯ , ಪೇಪರ್ ವೆಂಕಟೇಶ್ , ತಾ.ಪಂ.ಮಾಜಿ ಸದಸ್ಯ ಕೆ.ಕೆ.ಮಂಜುನಾಥ್ , ಕೋಚಿಮುಲ್ ಮಾಜಿ ಅಧ್ಯಕ್ಷ ಕೊಂಡಸಂದ್ರ ಶಿವಾರೆಡ್ಡಿ , ಮುಖಂಡ ಟಿ.ವಿ. ನಾರಾಯಣಸ್ವಾಮಿ , ಗ್ರಾ.ಪಂ.ಉಪಾಧ್ಯಕ್ಷೆ ಮಂಗಮ್ಮ ನಡುಪನ್ನ ಇದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.