(www.vknews.in) ಡಿಸೆಂಬರ್ 08 ಗುರುವಾರ ಬೀಬಿ ಆಶೂರಾ ವುಮೆನ್ಸ್ ಕಾಲೇಜು ಮಂಗಳೂರು ವತಿಯಿಂದ ವಿದ್ಯಾರ್ಥಿನಿಗಳಿಗೆ ‘ಯೂತ್ ಅವಾರ್ನೆಸ್ ಪ್ರೋಗ್ರಾಂ’ ಎಂಬ ತರಬೇತಿಯನ್ನು ನಡೆಸಲಾಯಿತು.
ಇನ್ಲೈಟ್ ಇಂಡಿಯಾ ರೆಮಿಡಿಯಲ್ ಹಾಗೂ ಟ್ರೈನಿಂಗ್ ಸೆಂಟರ್ ಇದರ ಸಂಸ್ಥಾಪಕರೂ, ಮನಶಾಸ್ತ್ರಜ್ಞರೂ ಹಾಗೂ ಲೈಫ್ ಸ್ಕಿಲ್ ತರಬೇತುದಾರರೂ ಆದ ಖಲೀಲ್ ಇಬ್ರಾಹೀಂ ಕುತ್ತಾರು ತರಬೇತಿಯನ್ನು ಅತೀ ಉತ್ತಮವಾಗಿ ನಡೆಸಿಕೊಟ್ಟು, ಹದಿಹರೆಯದ ಹೆಣ್ಣು ಮಕ್ಕಳು ಪ್ರಸ್ತುತ ಎದುರಿಸುತ್ತಿರುವ ವೈಯುಕ್ತಿಕ ಸಮಸ್ಯೆಗಳು, ಪೋಷಕರನ್ನು ಅರ್ಥೈಸುವ ರೀತಿ, ಯೌವನದ ಮಹತ್ವ ಹಾಗೂ ಅದನ್ನು ಚಾಲೆಂಜಾಗಿ ಉಪಯೋಗಿಸುವ ರೀತಿ ಹೀಗೇ ಮನೋವೈಜ್ಞಾನಿಕವಾದ ವಿಷಯಗಳನ್ನು ಅರ್ಥವತ್ತಾಗಿ ವಿವರಿಸಿದರು. ಸಭೆಯಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಅಬೂಬಕರ್ ಸಿದ್ದೀಖ್ ಬೆಂಗ್ರೆ, ಪ್ರಾನ್ಸುಪಾಲರಾದ ಹನೀಫ್ ಸಖಾಫಿ, ಶಿಕ್ಷಕಿಯರಾದ ಸಮೀನಾ ಹಾಗೂ ರೇಶ್ಮಾ ಉಪಸ್ಥಿತರಿದ್ದು, ಕೊನೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿ ಬೀಬಿ ಆಶೂರಾ ಕಾಲೇಜು ವತಿಯಿಂದ ತರಬೇತುದಾರರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.