ಎಲಿಮಲೆ(ವಿಶ್ವಕನ್ನಡಿಗ ನ್ಯೂಸ್): ನುಸ್ರತುಲ್ ಇಸ್ಲಾಂ ಎಸೋಸಿಯೇಶನ್ .ರಿ. ಎಲಿಮಲೆ. ಇದರ ವತಿಯಿಂದ ಎಲಿಮಲೆ ಹಯಾತುಲ್ ಇಸ್ಲಾಂ ದರ್ಸ್ ನ ಕ್ಯಾಂಟೀನ್ ಗೆ ಫ್ರಿಡ್ಜ್ ಒಂದನ್ನು ಕೊಡುಗೆಯಾಗಿ ನೀಡಲಾಯಿತು. ಜಮಾಅತ್ ಅಧ್ಯಕ್ಷ ಮಹಮದ್ ಇಕ್ಬಾಲ್ ಎಲಿಮಲೆಯವರಿಗೆ ನುಸ್ರತ್ ಅಧ್ಯಕ್ಷ ಲತೀಫ್ ಹರ್ಲಡ್ಕ ರವರು ಹಸ್ತಾಂತರಿಸಿದರು.
ಹಯಾತುಲ್ ಇಸ್ಲಾಂ ದರ್ಸ್ ನ ಪ್ರಾರಂಬೋತ್ಸವ ಕಾರ್ಯಕ್ರಮದ ಬಳಿಕ ನಡೆದ ಹಸ್ತಾಂತರ ಕಾರ್ಯಕ್ರಮದಲ್ಲಿ ಮಂಜನಾಡಿ ಅಲ್ ಮದೀನ ಇಸ್ಲಾಮಿಕ್ ಶರೀಅತ್ ಕಾಲೇಜಿನ ಪ್ರಾಂಶುಪಾಲರಾದ ಅಬ್ದುಲ್ಲ ಅಹ್ಸನಿ ಪುಂಜಾಲಕಟ್ಟೆ, ಅಲ್ ಮದೀನದ ಮುದರ್ರಿಸರಾದ ಮುಕ್ಕಂ ಅಬ್ದುರಹ್ಮಾನ್ ಅಹ್ಸನಿ, ಅಬ್ದುಸಲಾಂ ಅಹ್ಸನಿ ಕೋಝಿಕ್ಕೋಡು, ಸ್ಥಳೀಯ ಮುದರಿಸರಾದ ಅನೀಸ್ ಮರ್ಝೂಕಿ ಅಲ್ ಅಫ್ಳಲಿ ಸರತ್ಕಲ್, ನುಸ್ರತ್ ಪ್ರ ಕಾರ್ಯದರ್ಶಿ ಸೂಫಿ ಎಲಿಮಲೆ, ಉಪಾಧ್ಯಕ್ಷ ಸೂಫಿ ಮುಸ್ಲಿಯಾರ್, ಮಹಮೂದ್ ಸಖಾಫಿ ಎಲಿಮಲೆ, ಜಮಾಅತ್ ಕೋಶಾಧಿಕಾರಿ ಮಹಮೂದ್ ಮುಸ್ಲಿಯಾರ್ ದೊಡ್ಡಂಗಡಿ ಹಾಗೂ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು .
ನುಸ್ರತುಲ್ ಇಸ್ಲಾಂ ಎಸೋಸಿಯೇಸನ್ ತನ್ನ 40 ನೇ ವರ್ಷಾಚರಣೆಯ ರೂಬಿ ಜ್ಯುಬಿಲಿ ಪ್ರಯುಕ್ತ 40 ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು ಇದು 33 ನೇ ಕಾರ್ಯಕ್ರಮವಾಗಿ ಹಮ್ಮಿಕೊಳ್ಳಲಾಗಿತ್ತು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.