ಶ್ರೀನಿವಾಸಪುರ ( ವಿಶ್ವ ಕನ್ನಡಿಗ ನ್ಯೂಸ್ ): ಭವಿಷ್ಯದ ದೃಷ್ಟಿಯಿಂದ ಎಲ್ಐಸಿ ಪ್ರತಿನಿಧಿಗಳು ಜೀವ ವಿಮೆ ಮಹತ್ವ ಕುರಿತು ಜನರಲ್ಲಿ ಅರಿವು ಮೂಡಿಸಬೇಕು . ಪಾಲಸಿದಾರರ ಸಮಸ್ಯೆಗಳಿಗೆ ಸ್ಪಂದಿಸುವುದರ ಮೂಲಕ ಅವರ ವಿಶ್ವಾಸ ಗಳಿಸಬೇಕು ಎಂದು ಭಾರತೀಯ ಜೀವ ವಿಮಾ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕಿ ಎಂ.ಕೃಷ್ಣವೇಣಿ ಹೇಳಿದರು.
ಪಟ್ಟಣದ ಎಲ್ಐಸಿ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ತಾಲ್ಲೂಕು ಎಲ್ಐಸಿ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು , ಎಲ್ಐಸಿ ದೇಶದ ದೊಡ್ಡ ಆರ್ಥಿಕ ಸಂಸ್ಥೆಯಾಗಿದ್ದು , ಸಮಾಜ ಸೇವೆ ಹಾಗೂ ಆರ್ಥಿಕ ಪ್ರಗತಿಯಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದರು. ಪ್ರತಿನಿಧಿಗಳು ಗ್ರಾಮಗಳಿಗೆ ಭೇಟಿ ನೀಡಿ ಎಲ್ಐಸಿ ಪ್ರಚಾರ ಮಾಡಬೇಕು. ಮುಖ್ಯವಾಗಿ ಮಹಿಳೆಯರಿಗೆ ಅರಿವು ಮೂಡಿಸಿದಲ್ಲಿ ಹೆಚ್ಚಿನ ಪ್ರಯೋಜನವಾಗುತ್ತದೆ ಮಹಿಳಾ ಪಾಲಿಸಿದಾರರ ಸಂಖ್ಯೆ ಹೆಚ್ಚಿಸಬೇಕು. ದುರ್ಘಟನೆಗಳು ಹೇಳಿ ಕೇಳಿ ಬರುವುದಿಲ್ಲ . ಅಂಥ ಸಂದರ್ಭದಲ್ಲಿ ಎಲ್ಐಸಿ ಪಾಲಿಸಿದಾರರ ಕುಟುಂಬಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಎಲ್ಐಸಿ ಘಟಕದ ವ್ಯವಸ್ಥಾಪಕ ಸಿದ್ದೇಶ್ ಮಾತನಾಡಿ , ಪ್ರತಿನಿಧಿಗಳು ನಿರ್ವಹಿಸುವ ಕಾರ್ಯದ ಮೇಲೆ ಸಂಸ್ಥೆ ಭವಿಷ್ಯ ಹಾಗೂ ಜನರ ಭವಿಷ್ಯ ನಿಂತಿದೆ . ಹಾಗಾಗಿ ಇದೊಂದು ಸಮಾಜ ಸೇವಾ ಕಾರ್ಯವೆಂದು ಪರಿಗಣಿಸಿ ಹೆಚ್ಚು ಪಾಲಸಿ ಮಾಡಿಸಬೇಕು . ಜನರಲ್ಲಿ ಎಲ್ಐಸಿ ಕುರಿತು ತಿಳುವಳಿಕೆ ಉಂಟುಮಾಡಬೇಕು ಎಂದು ಹೇಳಿದರು .
ತಾಲ್ಲೂಕು ಶಾಖಾ ವ್ಯವಸ್ಥಾಪಕ ಎಸ್.ವಿ.ಪ್ರಸಾದ್ , ರವಿಶಂಕರ್ , ಅಭಿವೃದ್ಧಿ ಅಧಿಕಾರಿಗಳಾದ ರವೀಂದ್ರಯ್ಯ ಆರ್.ಕುಲಕರ್ಣಿ , ಶ್ರೀನಿವಾಸ್ , ಯೋಜನಾ ವ್ಯವಸ್ಥಾಪಕ ಆರ್. ಗುರುಕೃಷ್ಣ ಇದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.