ಮರುಭೂಮಿಯ ಒಡನಾಡಿ ವಿಶ್ವ ಕನ್ನಡಿಗ ನ್ಯೂಸ್ ತನ್ನ 13 ಸಂವತ್ಸರಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ 14 ರ ಹರೆಯಕ್ಕೆ ಕಾಲಿಡುವ ಶುಭ ಸಂದರ್ಭದಲ್ಲಿ ಹೃದಯಾಂತರಾಳದ ಶುಭಾಶಯಗಳನ್ನು ಹಾರೈಸುತ್ತೇನೆ.
ಕಳೆದ 13 ವರ್ಷಗಳಿಂದ ಆತ್ಮೀಯ ಮಿತ್ರನಂತೆ ಭೂಮಿಯ ಉದ್ದಗಲದ ಸುದ್ದಿಯನ್ನು ನಿಖರ ಮತ್ತು ನಿಷ್ಪಕ್ಷವಾಗಿ ಚಾಚೂ ತಪ್ಪದೆ ನಮ್ಮ ಬಳಿಗೆ ಒಪ್ಪಿಸಿ ಕೊನೆಗೆ ಸಂತೃಪ್ತಿಯ ನಗು ಅಲ್ಲದೆ ಬೇರೆ ಯಾವುದೇ ಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥ ರೀತಿಯಲ್ಲಿ ತನ್ನ ಕಾರ್ಯಚಟುವಟಿಕೆ ಮಾಡಿಕೊಂಡು ಮುಂದುವರಿಯುತ್ತಿರುವ ವಿ ಕೆ ನ್ಯೂಸ್ ಗೆ ಯಾವ ರೀತಿಯಲ್ಲಿ ಅಭಿನಂದನೆ ಸಲ್ಲಿಸಬೇಕೆಂದು ತಿಳಿಯುತ್ತಿಲ್ಲ.
ನನ್ನ ಪ್ರವಾಸಿ ಜೀವನದಲ್ಲಿ ಬರವಣಿಗೆ ಲೋಕದಲ್ಲಿ ನನ್ನನ್ನು ಅತ್ಯಂತ ಹೆಚ್ಚು ಆಕರ್ಷಿಸಿದ ಮಾದ್ಯಮವಾಗಿದೆ ವಿ ಕೆ ನ್ಯೂಸ್ ಎನ್ನುವುದರಲ್ಲಿ ಎರಡು ಮಾತಿಲ್ಲ. ನನ್ನ ಮತ್ತು ವಿಕೆ ನ್ಯೂಸ್ ಇದರ ಸಂಬಂಧಕ್ಕೆ 13 ವರ್ಷಗಳ ಇತಿಹಾಸ ಇರುವುದು ಸಂತೋಷಕರ ಸಂಗತಿ. ಸಂಘ ಸಂಸ್ಥೆಗಳಲ್ಲಿ ಹೆಚ್ಚು ದುಡಿಯುತ್ತಿರುವ ನನ್ನಂತಹ ಹಲವಾರು ಕಾರ್ಯಕರ್ತರಿಗೆ ವಿ ಕೆ ನ್ಯೂಸ್ ದಾರಿ ದೀಪದಂತೆ ಸಹಕರಿಸುತ್ತಾ ಬಂದಿದೆ.
ಧಾರ್ಮಿಕ ಸಂಘ ಸಂಸ್ಥೆಗಳು ಪ್ರಚಾರ ರಂಗದಲ್ಲಿ ಶೂನ್ಯದಿಂದ ಮುಗಿಲೆತ್ತರಕ್ಕೆ ಬೆಳೆಯಲು ವಿ ಕೆ ನ್ಯೂಸ್ ಮಾದ್ಯಮ ಸಹಕಾರವನ್ನು ಸದುದ್ದೇಶದೊಂದಿಗೆ ನೀಡುತ್ತಾ ಬಂದಿದೆ. ಜಾತಿ ಮತ ಭೇದವಿಲ್ಲದೆ, ಪಕ್ಷ ಪಂಗಡಗಳ ತಾರತಮ್ಯ ಇಲ್ಲದೆ ಎಲ್ಲಾ ಕ್ಷೇತ್ರಗಳಲ್ಲೂ ತನ್ನದೇ ಆದ ಛಾಪನ್ನು ಮೂಡಿಸಲು ವಿ ಕೆ ನ್ಯೂಸ್ ಗೆ ಸಾಧ್ಯವಾಗಿರುವುದು ಇದರ ಸಂಪಾದಕರ ದೂರ ದೃಷ್ಟಿ, ಸಂಯಮ ಮತ್ತು ಉತ್ತಮ ಗುಣಮಟ್ಟದ ಪತ್ರಿಕಾ ರಂಗದ ನೈಪುಣ್ಯತೆಗೆ ಹಿಡಿದ ಕೈಗನ್ನಡಿ ಎನ್ನಲು ಅತಿಶಯೋಕ್ತಿಯಾಗಲಾರದು.
ಪ್ರಧಾನ ಸಂಪಾದಕ ಹಾಗೂ ಆತ್ಮೀಯ ಮಿತ್ರ ಶ್ರೀಯುತ ಸಿ ಹೆಚ್ ಹಮೀದ್ ರವರ ಅಪ್ರತಿಮ ಪರಿಶ್ರಮ ಅಲ್ಲದೆ ಸಂಪಾದಕ ಮಂಡಳಿಯ ಉತ್ತಮ ಸಹಕಾರ ಪತ್ರಿಕೆಯ ಗುಣಮಟ್ಟ ಏರಿಸುವಲ್ಲಿ ಮತ್ತು ಬಿಸಿ ಬಿಸಿ ಸುದ್ದಿಗಳನ್ನು ಅತಿ ವೇಗದಲ್ಲಿ ಪ್ರಕಟಿಸುವಲ್ಲಿ ಸಫಲವಾಗಿದೆ.
ಹೊಸ ಬರಹಗಾರರಿಗೆ ಪ್ರೋತ್ಸಾಹ, ಉತ್ತಮ ಬರಹಗಾರರಿಗೆ ಅಂಗೀಕಾರ ಎಲ್ಲವೂ ವಿಕೆ ನ್ಯೂಸ್ ಬಳಗದಿಂದ ದೊರಕುತ್ತಾ ಬಂದಿರುತ್ತದೆ. ಇನ್ನೂ ಹೆಚ್ಚು ಯಶಸ್ಸನ್ನು ಕಂಡು ಭಾರತ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ತನ್ನದೇ ಆದ ಪ್ರತಿಭೆಯನ್ನು ಮೆರೆದು ಕೀರ್ತಿ ಮುಗಿಲೆತ್ತರಕ್ಕೆ ಏರಲು ಅಲ್ಲಾಹು ಅನುಗ್ರಹಿಸಲಿ ಎಂಬ ಪ್ರಾರ್ಥನೆಯೊಂದಿಗೆ ಶುಭವನ್ನು ಕೋರುತ್ತೇನೆ.
✍ ಬದ್ರುದ್ದೀನ್ ಹೆಂತಾರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.