ಮಕ್ಕಾ (www.vknews.in) : ಪುತ್ತೂರಿನ ಪ್ರತಿಷ್ಠಿತ ಹಜ್ ಉಮ್ರಾ ಟ್ರಾವೆಲ್ ಏಜೆನ್ಸಿ ಸಂಸ್ಥೆಯಾದ ಗಲ್ಫ್ ಟೂರ್ಸ್ & ಟ್ರಾವೆಲ್ಸ್ ಆಶ್ರಯದಲ್ಲಿ ಈ ವರ್ಷದ ಹಜ್ ನಿರ್ವಹಿಸಲು ಮಕ್ಕಾ ತಲುಪಿರುವ 100 ಮಂದಿ ಯಾತ್ರಿಕರು ಮಕ್ಕಾದಲ್ಲಿ ಎರಡು ವಾರಗಳ ಕಾಲದ ಆರಾಧನಾ ಕರ್ಮಗಳನ್ನು ನಿರ್ವಹಿಸಿ ಇಂದು ಮದೀನಾ ಝಿಯಾರತ್ ಗೆ ತೆರಳಲಿದ್ದಾರೆ.
ಜೂನ್ ಎರಡರಂದು ಆರಂಭ ಗೊಂಡು 4 ಹಂತಗಳಲ್ಲಿ ಊರಿನ ಯಾತ್ರಿಕರು ಕಲ್ಲಿಕೋಟೆ ಹಾಗೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಿಂದಲೂ ಅನಿವಾಸಿ ಯಾತ್ರಿಕರು ಕತಾರ್, ಅಬುಧಾಬಿ ಹಾಗೂ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಕ್ಕಾ ತಲುಪಿದ್ದರು. ನೂರು ಮಂದಿಯನ್ನೊಳಗೊಂಡ ಯಾತ್ರಿಕರಿಗೆ ಸಿರಾಜುದ್ದೀನ್ ಫೈಝಿ ಬಪ್ಪಳಿಗೆ ಚೀಫ್ ಅಮೀರಾಗಿಯೂ ಮುನೀರ್ ಹುದವಿ ಸಹಾಯಕ ಅಮೀರಾಗಿ,ಕುಬ್ರಾ ಸಿರಾಜುದ್ದೀನ್ ಫೈಝಿ ಮಹಿಳಾ ಯಾತ್ರಿಕರ ಸಹಾಯಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಎಂಟು ದಿನಗಳ ಕಾಲ ಮದೀನಾದಲ್ಲಿ ಆರಾಧನಾ ನಿರತರಾಗಿ,ಹಲವಾರು ಚಾರಿತ್ರಿಕ ಸ್ಥಳಗಳನ್ನು ಸಂದರ್ಶಿಸಲಿದ್ದಾರೆ. ಬಳಿಕ ದುಲ್ ಹಿಜ್ಜ 5ರಂದು ಹಜ್ ನ ಇಹ್ರಾಂ ಮಾಡಿ ಮಕ್ಕಾಕೆ ಮರಳಲಿದ್ದಾರೆ ಎಂದು ಸಂಸ್ಥೆಯ ಸುಲೈಮಾನ್ ಹಾಜಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.