ಶ್ರೀನಿವಾಸಪುರ ( ವಿಶ್ವ ಕನ್ನಡಿಗ ನ್ಯೂಸ್ ): ಮಾನವೀಯ ಮೌಲ್ಯ ಬಿತ್ತುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಗೂ ಶಿಕ್ಷಣ ತಜ್ಞ ಕೋಡಿ ರಂಗಪ್ಪ ಹೇಳಿದರು. ಪಟ್ಟಣದ ಭೈರವೇಶ್ವರ ವಿದ್ಯಾನಿಕೇತನದ ಸಭಾಂಗಣದಲ್ಲಿ ಕೋಲಾರದ ಕೃಷಿ ಸಂಸ್ಕೃತಿ ಕೇಂದ್ರದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ‘ ಮರೆತ ದಾರಿಗಳ ಹರಿಕಾರ ಶ್ರೀರಾಮರೆಡ್ಡಿ ‘ ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು . ಶಿಕ್ಷಣ ತಜ್ಞ ಎಂ.ಶ್ರೀರಾಮರೆಡ್ಡಿ ಮರೆತ ಮಾನವೀಯ ಪರಂಪರೆಗೆ ಜೀವ ಕೊಟ್ಟ ಚೈತನ್ಯ ಶೀಲ ವ್ಯಕ್ತಿ.
ಮಕ್ಕಳಿಗೆ ಅಕ್ಷರದ ಜತೆಗೆ ಆಲೋಚನೆ ಕಲಿಸಿದ ಮೇಷ್ಟ್ರು ಮಾದರಿ ಖಾಸಗಿ ಶಾಲೆ ಕಟ್ಟಿ , ಪೋಷಕರಿಗೆ ಹೊರೆಯಾಗದಂತೆ , ಸರ್ಕಾರಿ ಶಾಲೆಯಂತೆ ಬೆಳೆಸಿದರು. ಸಮಾಜೋ ತನ್ನ ಕಾರ್ಯಕಕ್ಕೆ ಮರುಜೀವ ನೀಡಿದರು . ಆ ಮೂಲಕ ವಿದ್ಯಾರ್ಥಿಗಳು ಓದಿನ ಬಳಿಕ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗುವಂತೆ ಮಾಡಿದರು ಎಂದು ಹೇಳಿದರು.
ನಾಟಕಕಾರ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ , ಮರೆತ ದಾರಿಗಳ ಹರಿಕಾರ ಶ್ರೀರಾಮರೆಡ್ಡಿ , ನೆಲದ ಗುರುತು ಸರಣಿಯ ಮೊದಲ ಕೃತಿಯಾಗಿದೆ. ಈ ಕೃತಿ ಪ್ರತಿ ಮನೆಯ ದೀಪವಾಗಬೇಕು. ತಮ್ಮ ನಡೆಯ ಮೂಲಕ ಮಕ್ಕಳಲ್ಲಿ ಬದಲಾವರಣೆ ತಂದ ಎಂ. ಶ್ರೀರಾಮರೆಡ್ಡಿ ಶೈಕ್ಷಣಿಕ ಕ್ಷೇತ್ರದಲ್ಲಿ ಭಿನ್ನವಾಗಿ ಕಾಣಿಸುತ್ತಾರೆ. ಅವರ ಆದರ್ಶದ ಬೆಳಕಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು. ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಮಾತನಾಡಿ , ಭೈರವೇಶ್ವರ ವಿಧ್ಯಾನಿಕೇತನದ ಅಭಿವೃದ್ಧಿಯ ಹಿಂದೆ ಶ್ರೀರಾಮರೆಡ್ಡಿ ಅವರ ಶ್ರಮ ಅಡಗಿದೆ. ತಮ್ಮಗಳಿಕೆಯ ಹಣ ಹಾಗೂ ದಾನಿಗಳ ನೆರವು ಪಡೆದು ಮಾದರಿ ಶಾಲೆ ನಿರ್ಮಿಸಿದ್ದಾರೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಅದಕ್ಕಾಗಿ ಅವರು ಅಭಿನಂದನಾರ್ಹರು . ಶಾಲೆ ಅಭಿವೃದ್ಧಿಗೆ ಪೂರಕವಾದ ಎಲ್ಲ ನೆರವು ನೀಡಲಾಗುವುದು. ಸಂಸ್ಥೆಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.
ಸಂಸ್ಥೆಯ ನಿರ್ದೇಶಕ ಎ. ವೆಂಕಟರೆಡ್ಡಿ , ಮುಖ್ಯ ಶಿಕ್ಷಕ ವೆಂಕಟರಮಣಾರೆಡ್ಡಿ , ರಂಗಭೂಮಿ ಕಲಾವಿದೆ ಡಾ . ವಿಜಯ , ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಬಿ. ಗೋಪಾಲಗೌಡ , ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್. ನಾರಾಯಣಸ್ವಾಮಿ , ತಾಲ್ಲೂಕು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವೇಣು ಗೋಪಾಲರೆಡ್ಡಿ , ಡಾ . ರಮೇಶ್ , ಡಾ . ಯಶಸ್ವಿನಿ ಶ್ರೀರಾಮರೆಡ್ಡಿ ಅವರ ಬದುಕು ಹಾಗೂ ಸೇವೆ ಕುರಿತು ಮಾತನಾಡಿದರು.
ಭೈರವೇಶ್ವರ ವಿದ್ಯಾನಿಕೇತನದ ಸಂಸ್ಥಾಪಕ ಕಾರ್ಯದರ್ಶಿ ಎಂ. ಶ್ರೀರಾಮರೆಡ್ಡಿ , ಆದಿಮ ಸಂಸ್ಥೆಯ ಕೋಮಣ್ಣ , ಹ.ಮಾ.ರಾ ಮಚಂದ್ರ , ಕೃಷಿ ಸಂಸ್ಕೃತಿ ಕೇಂದ್ರದ ಮುಖ್ಯಸ್ಥ ಬೈಚೇಗೌಡ , ಲೇಖಕ ಪನಸಮಾಕನಹಳ್ಳಿ ಆರ್. ಚೌಡರೆಡ್ಡಿ , ಗಾಯಕ ಹುಂಜ ಮುನಿರೆಡ್ಡಿ , ರಾಮಾಂಜಮ್ಮ , ಬೈರಾರೆಡ್ಡಿ , ವೆಂಕಟರಾಮರೆಡ್ಡಿ , ಪ್ರೊ . ಸತೀಶ್ ಚಂದ್ರಾರೆಡ್ಡಿ , ನರಸಿಂಹಯ್ಯ , ಶಿವಾರೆಡ್ಡಿ , ಪರಮೇಶ್ ಇದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.