ಕೋಲಾರ (ವಿಶ್ವ ಕನ್ನಡಿಗ ನ್ಯೂಸ್): ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಯಳೇಸಂದ್ರ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ರಾತ್ರಿ ದಿಢೀರಣೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲೂಕಿನ ಬೂದಿಕೋಟೆ ಹೋಬಳಿ ವ್ಯಾಪ್ತಿಯ ಯಳೇಸಂದ್ರ ಗ್ರಾಮದ ಬಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ರಾತ್ರಿ 7 ಗಂಟೆಗೆ ಬೇಟಿ ನೀಡಿದ ಡಿಸಿ , ಎರಡು ಗಂಟೆಗಳ ಕಾಲ ಅಡುಗೆ ಕೋಣೆ , ಮಕ್ಕಳ ವಸತಿ ಕೊಠಡಿ ಸೇರಿ ಶಾಲೆಯ ಎಲ್ಲಾ ಕೊಠಡಿಗಳನ್ನು ಪರಿಶೀಲಿಸಿ ಮಕ್ಕಳು ಮತ್ತು ಶಿಕ್ಷಕರಿಂದ ಬೋಧನಾ ಪದ್ಧತಿಯ ಬಗ್ಗೆ ಮಾಹಿತಿ ಪಡೆದರು.
ಸರ್ಕಾರ ವಸತಿ ಶಾಲೆಗಳಿಗೆ ಕೋಟ್ಯಾಂತರ ರೂಗಳನ್ನು ಖರ್ಚು ಮಾಡಿ ಮಕ್ಕಳಿಗೆ ವಸತಿಯೊಂದಿಗೆ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುತ್ತಿದೆ. ವಸತಿ ಶಾಲೆಗಳನ್ನು ಓದುವಂತಹ ಬಹುತೇಕ ಮಕ್ಕಳು ಗ್ರಾಮೀಣ ಮತ್ತು ಬಡ ಕುಟುಂಬದಿಂದ ಬಂದಿರುವವರು ಆಗಿದ್ದು , ಯಾವುದೇ ಕಾರಣಕ್ಕೂ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಬಾರದು.
ಈಗಾಗಲೇ ಶಾಲೆಯಲ್ಲಿ ಶೇ 100 ರಷ್ಟು ಫಲಿತಾಂಶ ಬರುತ್ತಿರುವುದು ಶ್ಲಾಘನೀಯ . ಜೊತೆಗೆ ಹೆಚ್ಚು ಅಂಕ ಗಳಿಸುವಲ್ಲಿ ನೋಡಿಕೊಳ್ಳಬೇಕು ಹಾಗೂ ಯಾವುದೇ ಅನಾನುಕೂಲ ಆಗದಂತೆ ಎಚ್ಚರವಹಿಸಿ ಎಂದು ಶಿಕ್ಷಕರಿಗೆ ಮತ್ತು ಅಧಿಕಾರಿಗಳಿಗೆ ಸೂಚಿಸಿದರು. ಮಕ್ಕಳೊಂದಿಗೆ ಬೆರೆತ ಜಿಲ್ಲಾಧಿಕಾರಿ ಅಕ್ರಂ ಪಾಷ ಮಕ್ಕಳ ಕುಸಲೋಪರಿಯನ್ನು ವಿಚಾರಿಸಿ , ಶಿಕ್ಷರು ಮಾಡುವ ಪಾಠವನ್ನು ಚೆನ್ನಾಗಿ ಓದಬೇಕು ಅಕಸ್ಮಾತ್ ಏನಾದರೂ ಅರ್ಥವಾಗಿಲ್ಲ ಎಂದರೆ ಮತ್ತೆ ಶಿಕ್ಷಕರನ್ನು ಕೇಳಿ ಅನುಮಾನವನ್ನು ಬಗೆಹರಿಸಿಕೊಳ್ಳಬೇಕು . ಪರೀಕ್ಷೆಯಲ್ಲಿ ಪಾಸಾದರೆ ಸಾಲದು ಹೆಚ್ಚು ಅಂಕ ಪಡೆದು ಉತ್ತಮ ಶೇಣಿಯಲ್ಲಿ ಪಾಸಾಗಬೇಕು .
ಮುಂದೆ ಉನ್ನತ ವ್ಯಾಸಂಗ ಪಡೆದು ಸಮಾಜದಲ್ಲಿ ಒಳ್ಳೆ ಹುದ್ದೆಯನ್ನು ಆಲಂಕರಿಸಿಕೊಂಡು ತಂದೆ ತಾಯಿಗೆ ಮತ್ತು ಜಿಲ್ಲೆಗೆ ಕೀರ್ತಿ ತಂದು ಕೊಡಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು . ನಂತರ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ತಾಲೂಕಿನ ಹೊರವಲಯದ ಬೀರಂಡಹಳ್ಳಿ ಗ್ರಾಮದ ಬಳಿ ಇರುವ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ ನಿರಾಶ್ರಿತರ ಬಳಿ ಮುಕ್ತವಾಗಿ ಚರ್ಚೆ ಮಾಡಿದರು. ನಿರಾಶ್ರಿತರಿಗೆ ಪ್ರತಿನಿತ್ಯ ಕಾವ್ಯಚಟುವಟಿಕೆಗಳು ಹಾಗೂ ದಿನಚರಿ ಯಾವ ರೀತಿ ನಡೆಯುತ್ತಿವೆ ಎಂಬುದನ್ನು ಖುದ್ದು ಪರಿಶೀಲನೆ ಮಾಡಿದರು . ನಿರಾಶ್ರಿತರ ಕೇಂದ್ರದಲ್ಲಿ ನಿರಾಶ್ರಿತರಿಗೆ ಯಾವುದೇ ತೊಂದರೆ , ಅಸಮಾಧಾನ ಸೇರಿದಂತೆ ಅನಾನುಕೂಲವಾಗದಂತೆ ಎಚ್ಚರವಹಿಸುವಂತೆ ಸೂಚನೆ ನೀಡಿದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.