(www.vknews. in) ; ದಕ್ಷತೆ, ಪ್ರಾಮಾಣಿಕತೆ ಮತ್ತು ಸಹೃದಯತೆಗಳ ಸಾಕಾರ ಮೂತಿ೯ಯಾಗಿರುವ ಕಾರವಾರ ಜಿಲ್ಲೆಯ SP ಶ್ರೀ ವಿಷ್ಣುವರ್ಧನ್ ಇಲಾಖೆಯ ಶಿಸ್ತು ಬದ್ಧ-ಪ್ರಾಮಾಣಿಕ ಪೋಲಿಸ್ ಅಧಿಕಾರಿಯಾಗಿದ್ದಾ ರೆ. ಕಳೆದ ಕೆಲ ಸಮಯಗಳಿಂದ ಕಾರವಾರದಲ್ಲಿ SP ಯಾಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಶ್ರೀ ವಿಷ್ಣುವರ್ಧನ್ ಕಾರವಾರದ ಜನ ಸಮೂಹದ ಮನಗಳಲ್ಲಿ ಮನೆ ಮಾಡಿದ ಧೀಮಂತರು. ಬೆಂಗಳೂರು, ಮಂಗಳೂರು, ಉಡುಪಿ ಮೊದಲಾದೆಡೆಗಳಲ್ಲಿ ಸೇವೆ ಸಲ್ಲಿಸಿದ ಶ್ರೀ ವಿಷ್ಣುವರ್ಧನ್ ಭ್ರಷ್ಟಾಚಾರದ ಘೋರ ಕಾಯಿಲೆಗೆ ತುತ್ತಾದ ಹಲವು ಭ್ರಷ್ಟ ಅಧಿಕಾರಿಗಳ, ಪೋಲಿಸರ ವಿರುದ್ಧ ಕಾನೂನು ಕ್ರಮ ಕೈಗೊಂಡ ಧೀಮಂತ ಅಧಿಕಾರಿಯಾಗಿದ್ದಾರೆ.
ಗೂಂಡಾಗಿರಿ, ವೇಶ್ಯಾವಾಟಿಕೆ ಗಳ ವಿರುದ್ಧ ಸಮರವನ್ನೇ ಸಾರಿ ಕಾರವಾರ ನಗರದದ್ಯಾಂತ ಶಾಂತಿ- ಸುವ್ಯವಸ್ಥೆಯನ್ನು ಕಾಪಾಡಿದ ಕೀರ್ತಿ ಶ್ರೀ ವಿಷ್ಣುವರ್ಧನ್ ರಿಗೆ ಸಲ್ಲಬೇಕು. ಈ ಸಮರ್ಥ ಪೋಲಿಸ್ ಅಧಿಕಾರಿಯ ಸೇವೆಯನ್ನು ಮನ್ನಿಸಿದ ಸರಕಾರ ಅವರನ್ನು ಪುರಸ್ಕರಿಸಿದೆ. ಮಂಗಳೂರು ನಗರದ DCP ಯಾಗಿಯೂ, ಉಡುಪಿ ಜಿಲ್ಲೆಯ SP ಯಾಗಿಯೂ, ಇದೀಗ ಕಾರವಾರ ಜಿಲ್ಲೆಯ SP ಯಾಗಿರುವುದು ಜನತೆಯ ಸೌಭಾಗ್ಯವೆನ್ನಬಹುದು. ಯಾವುದೇ ರೀತಿಯ ಸಮಸ್ಯೆ ಗಳಿದ್ದರೂ ನೇರವಾಗಿ ಸಂಪಕಿ೯ಸಿ ನಿವೇದಿಸಿದರೆ ಸರಿಯಾದ ಮಾಹಿತಿ ಮತ್ತು ಸಹಕಾರ ನೀಡುವ ಸಹೃದಯಾ ದ ಶ್ರೀ ವಿಷ್ಣುವರ್ಧನ್ ಕಾನೂನಿನ ಪರಿಧಿಯಲ್ಲಿ ನಿರಂತರ ಜನ ಸೇವೆಗೆ ತನ್ನನ್ನು ಮುಡುಪಾಗಿಸಿಕೊಂಡ ಸಜ್ಜನರಾಗಿದ್ದಾರೆ.
ಅಹಂಭಾವದ ಪರಿಚಯವೇ ಇಲ್ಲದ ಶ್ರೀ ವಿಷ್ಣುವರ್ಧನ್ ಯಾವ ಆಸೆ-ಅಮಿಷಗಳಿಗೆ ಬಲಿಯಾಗದೆ ಭ್ರಷ್ಟಾಚಾರದ ಕಡು ವೈರಿಯಾಗಿದ್ದಾರೆ. ತನ್ನ ಪೌರುಷ ಪರಾಕ್ರಮಗಳಿಗಾಗಿ ಇಲಾಖೆಯಿಂದ ಹಲವಾರು ಅವಾಡ್೯ಗಳನ್ನು ಗಳಿಸಿಕೊಂಡ ವೀರ-ಪರಾಕ್ರಮಿ ಶ್ರೀ ವಿಷ್ಣುವರ್ಧನ್ ಇಲಾಖೆಗೊಂದು ವರದಾನವಾಗಿದ್ದಾರೆ. ಯಾವುದೇ ದುಗು೯ಣಗಳನ್ನು ಮೈಗೂಡಿಸಿಕೊಳ್ಳದ ನಿಷ್ಕಳಂಕ, ನಿರಾಡಂಬರ ವ್ಯಕ್ತಿತ್ವದ ಶ್ರೀ ವಿಷ್ಣುವರ್ಧನ್ ತನ್ನ ಜೀವನದ ಉದ್ದಗಲಕ್ಕೂ ತನ್ನ ಸದ್ಗುಣ ಸಂಪನ್ನತೆಯನ್ನು ಬೆಳಸಿ ಯಶಸ್ವಿಯಾಗಲಿ ಮತ್ತು ಇವರ ಪ್ರಾಮಾಣಿಕತೆಯ ದುರುಪಯೋಗ ಯಾರಿಂದಲೂ ಆಗದಂತೆ ಸೂಕ್ಷ್ಮ ದೃಷ್ಟಿ ಹರಿಸಿ ಕೊನೆಯ ವರೆಗೂ ತನ್ನ ಸುಸಂಸ್ಕೃತಿಯನ್ನು ಉಳಿಸಿಕೊಳ್ಳಲೆಂದು ನಮ್ಮ ಹಾರೈಕೆ.
ಶೇಖ್ ಇಸಾಕ್ ಸಂಪಾದಕರು- ಕಾಕೋ೯ಟಕ ಸಾಪ್ತಾಹಿಕ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.