(www.vknews.in) : ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರ ವಿವಾಹ ಪೂರ್ವ ಸಮಾರಂಭಗಳು ಆರಂಭಗೊಂಡಿವೆ. ಮೂರು ದಿನಗಳ ಕಾಲ ನಡೆಯಲಿರುವ ಸಂಭ್ರಮ ನಾಳೆಗೆ ಮುಕ್ತಾಯವಾಗಲಿದೆ. ಗುಜರಾತ್ನ ಜಾಮ್ನಗರದಲ್ಲಿ ಅದ್ದೂರಿ ಆಚರಣೆಗಳು ನಡೆಯುತ್ತವೆ. ಆಚರಣೆಯಲ್ಲಿ ಭಾಗವಹಿಸಲು ವಿಶ್ವದ ಉದ್ಯಮ ನಾಯಕರು ಜಾಮ್ನಗರಕ್ಕೆ ಬಂದಿದ್ದಾರೆ. ಮುಖೇಶ್ ಅಂಬಾನಿ ಆಯೋಜಿಸಿದ್ದ ಔತಣಕೂಟವು ವಿಶ್ವದ ಅತ್ಯಂತ ಅದ್ದೂರಿ ಆಚರಣೆಗಳಲ್ಲಿ ಒಂದಾಗಿದೆ. ಈ ಸಂಭ್ರಮಕ್ಕೆ ಮುಕೇಶ್ ಅಂಬಾನಿ ಎಷ್ಟು ಖರ್ಚು ಮಾಡುತ್ತಾರೆ ಗೊತ್ತಿಲ್ಲ..
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮತ್ತು ಬಿಲಿಯನೇರ್ ಮುಖೇಶ್ ಅಂಬಾನಿ ಅವರು ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಪ್ರೀ ವೆಡ್ಡಿಂಗ್ ಪಾರ್ಟಿಗಾಗಿ ವಿಶ್ವದ ಅತ್ಯುತ್ತಮ ಸೌಲಭ್ಯಗಳನ್ನು ಸಿದ್ಧಪಡಿಸಿದ್ದಾರೆ. ಅದ್ದೂರಿ ಆಚರಣೆಗಳಿಗಾಗಿ ಮುಖೇಶ್ ಅಂಬಾನಿ ಸುಮಾರು 120 ಮಿಲಿಯನ್ ಪೌಂಡ್ಸ್ ಅಂದರೆ 1250 ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡುತ್ತಾರೆ ಎಂದು ವರದಿಯಾಗಿದೆ.
ಜುಲೈನಲ್ಲಿ ಅನಂತ್ ಮತ್ತು ರಾಧಿಕಾ ಮದುವೆಯಾಗಲಿದ್ದಾರೆ. ಈಗ ಮದುವೆ ಪೂರ್ವ ಸಂಭ್ರಮಗಳು ನಡೆಯುತ್ತಿವೆ. ಅಂಬಾನಿ ಫ್ಯಾಮಿಲಿಯಲ್ಲಿ ಮದುವೆ ಎಂದಾಗ ಅತಿಥಿಗಳು ಬರೋದು ತಪ್ಪಲ್ಲ.. ಅನಂತ್ ಅಂಬಾನಿ ಮದುವೆ ಸಂಭ್ರಮದಲ್ಲಿ ಭಾಗವಹಿಸಲು ವಿಶ್ವದ ಪ್ರಮುಖ ಕೈಗಾರಿಕೋದ್ಯಮಿಗಳು, ರಾಜಮನೆತನದವರೂ ಬಂದಿದ್ದಾರೆ ಎಂದು ವರದಿಯಾಗಿದೆ.
ಅಡುಗೆಗೆ ಇಪ್ಪತ್ತೈದು ಹೆಸರಾಂತ ಬಾಣಸಿಗರೂ ಇದ್ದಾರೆ. ಆಹಾರವು ಥಾಯ್, ಮೆಕ್ಸಿಕನ್ ಮತ್ತು ಜಪಾನೀಸ್ ರುಚಿಗಳಿಂದ ತುಂಬಿದೆ. ಮೂರು ದಿನಗಳ ಕಾರ್ಯಕ್ರಮಕ್ಕಾಗಿ 2500 ಖಾದ್ಯಗಳ ಮೆನುವನ್ನು ಸಿದ್ಧಪಡಿಸಲಾಗಿದೆ.
ನಿನ್ನೆ ಪಾಪ್ ಗಾಯಕರಾದ ರಿಹಾನ್ನಾ, ಜೆ ಬ್ರೌನ್ ಮತ್ತು ಆಡಮ್ ಬ್ಲ್ಯಾಕ್ಸ್ಟೋನ್ರೊಂದಿಗೆ ಸಂಗೀತ ಔತಣಕೂಟ ಏರ್ಪಡಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಹಾಗೂ ವಿವಿಧ ರಾಷ್ಟ್ರಗಳ ಮುಖ್ಯಸ್ಥರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಸುಮಾರು ಸಾವಿರ ಆಹ್ವಾನಿತ ಅತಿಥಿಗಳು ಜಾಮ್ ನಗರಕ್ಕೆ ಆಗಮಿಸಲಿದ್ದಾರೆ. ಕಳೆದ ವರ್ಷ ಜನವರಿಯಲ್ಲಿ ಇಬ್ಬರ ನಿಶ್ಚಿತಾರ್ಥಕ್ಕೆ ಪ್ರತಿಸ್ಪರ್ಧಿಯಾಗಿ ವಿವಾಹ ಪೂರ್ವ ಸಮಾರಂಭಕ್ಕೆ ಸಿದ್ಧತೆಗಳು ನಡೆದಿವೆ. ಆಚರಣೆಗಳು ಮುಗಿದ ನಂತರ, ಇದು ವಿಶ್ವದ ಅತ್ಯಂತ ದುಬಾರಿ ವಿವಾಹ ಸಮಾರಂಭಗಳಲ್ಲಿ ಒಂದಕ್ಕೆ ಸಾಕ್ಷಿಯಾಗಲಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.