ಕುಂಪಲ (www.vknews.in) : ಅಂಗಡಿಗೆ ನುಗ್ಗಿ ಕೋಳಿ ವ್ಯಾಪಾರಿ ಹಾಗೂ ಮತ್ತೋರ್ವ ವ್ಯಕ್ತಿಯನ್ನು ಗಾಯಗೊಳಿಸಿದ್ದ ಪ್ರಕರಣದ ಆರೋಪಿ ಹೋಟೆಲ್ ಮಾಲೀಕ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ. ಕುಂಪಲ-ಬದಿಯತುಕ್ಕ ರಸ್ತೆಯಲ್ಲಿರುವ ಹೋಟೆಲ್ ಮಾಲೀಕ ಹಾಗೂ ಶಾಂತಿಪಳ್ಳದ ಬಾಡಿಗೆ ಮನೆಯ ನಿವಾಸಿ ಆರಿಫ್ (33) ಶರಣಾದವರು.
ಮಾರ್ಚ್ 10 ರಂದು ಕುಂಪಲ ಮಾರ್ಕೆಟ್ ರಸ್ತೆಯ ಕೋಳಿ ವ್ಯಾಪಾರಿ ಮಟ್ಟಂಕುಜಿಯ ಅನ್ವರ್ ಅಂಗಡಿಗೆ ನುಗ್ಗಿ ಚಿಕನ್ ಕೊಳ್ಳಲು ಬಂದಿದ್ದ ಕಂಚಿಕಟ್ಟೆಯ ಇಬ್ರಾಹಿಂ ಎಂಬಾತನಿಗೆ ಚಾಕು ಝಳಪಿಸುತ್ತಾ ಅಂಗಡಿಗೆ ನುಗ್ಗಿ ತಲೆ ಕತ್ತರಿಸಿ ಗಾಯಗೊಳಿಸಿದ್ದರು. ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಲೆಮರೆಸಿಕೊಂಡಿದ್ದ ಆರೋಪಿಗಳು ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.
ನ್ಯಾಯಾಲಯ ಜಾಮೀನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಆರೋಪಿಗಳು ನಿನ್ನೆ ಬೆಳಗ್ಗೆ ನೇರವಾಗಿ ಕುಂಪಲ ಠಾಣೆಗೆ ಬಂದು ಶರಣಾಗಿದ್ದಾರೆ. ಆರೀಫ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ರಿಮಾಂಡ್ ವಿಧಿಸಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.