(www.vknews. in) ; ಒಬ್ಬ ಬಡ ರೋಗಿ ಆಸ್ಪತ್ರೆಯಲ್ಲಿ ದಾಖಲಾದಾಗಲೇ ಅಂದಾಜು ಬಿಲ್ ಸಾಧಾರಣ 15 ರಿಂದ 60 ಲಕ್ಷ ರೂಪಾಯಿ ಆಗಬಹುದು ಎಂಬ ಮುಂಗಡ ಎಚ್ಚರಿಕೆ ಆಸ್ಪತ್ರೆಯ ಆಡಳಿತ ವಿಭಾಗದಿಂದ ಲಭಿಸುತ್ತದೆ. ಅಲ್ಲಿ ದಾಖಲಾದ ರೋಗಿಯ ಕುಟುಂಬಸ್ಥರು ಈ ಮುಂಗಡ ಎಚ್ಚರಿಕೆ ಮಾತನ್ನು ಕೇಳಿ ಆಗಲೇ ಮಾನಸಿಕವಾಗಿ ಕುಸಿದಿರುತ್ತಾರೆ. ಬಳಿಕ ಬೇರೆ ದಾರಿಯಿಲ್ಲದೆ
ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿ ಈ ದೊಡ್ಡ ಮೊತ್ತಕ್ಕಾಗಿ ಊರೆಲ್ಲಾ ಅಲೆದಾಡುತ್ತಾರೆ.ಕೊನೆಗೆ ವಿಧಿಯಿಲ್ಲದೆ ಈ ದುಬಾರಿ ಬಿಲ್ ಪಾವತಿಸಲು ರೋಗಿಯ ವಿವರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಪಡಿಸಿ ಸಾರ್ವಜನಿಕ ಹಣ ಸಂಗ್ರಹದ ಅನಿವಾರ್ಯತೆ ಸೃಷ್ಟಿಯಾಗುತ್ತದೆ.
ಇದಕ್ಕಾಗಿ ಹಣ ರೋಗಿಯ ಅಥವಾ ಕುಟುಂಬಸ್ಥರ ಬ್ಯಾಂಕ್ ಅಕೌಂಟ್ ಕಳುಹಿಸಲು ಕೆಲವು ಸಾಮಾಜಿಕ ಕಾರ್ಯಕರ್ತರು ಸೋಷಿಯಲ್ ಮೀಡಿಯಾಗಳಲ್ಲಿ ರೋಗಿಯ ಪೋಟೋ,ವಿಡಿಯೋ ಹಂಚಿಕೊಂಡು ಸಹಾಯ ಮಾಡುತ್ತಾರೆ. ಇದನ್ನುಕಾಣುವ ಸಮುದಾಯದ ಜನರೂ ತಮ್ಮ ಮನೆಯಲ್ಲಿ ನೂರಾರು ಸಮಸ್ಯೆ ಇದ್ದರೂ ಕನಿಷ್ಠ 100,200 ರೂಪಾಯಿ ಆ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಾರೆ. ಅಂತೂ ಇಂತೂ 15 ,30,50,60 ಲಕ್ಷ ಕ್ಕೆ ಅಕೌಂಟ್ ಕ್ಲೋಸ್ ಆಗುತ್ತದೆ. ಆಸ್ಪತ್ರೆಯ ಬಿಲ್ ಮಾಫಿಯಾ ಗೆಲ್ಲುತ್ತದೆ .ರೋಗಿ ಬೆಡ್ ನಲ್ಲಿರುತ್ತಾನೆ. ಸಾಮಾಜಿಕ ಕಾರ್ಯಕರ್ತರು ಎಷ್ಷು ಮಂದಿಗೆ ಈ ರೀತಿಯ ಫಂಡ್ ಸಂಗ್ರಹದ ಸಹಾಯ ಮಾಡಬಹುದು???
ಇಂತಹ ನೂರಾರು ಮಂದಿ ಕನಿಷ್ಠ ಹತ್ತು ಸಾವಿರ ರೂಪಾಯಿ ಕಟ್ಟಲು ಸಾಧ್ಯವಿಲ್ಲದೆ ಆಸ್ಪತ್ರೆ ಯಲ್ಲಿ ಕಣ್ಣೀರಲ್ಲಿದ್ದಾರೆ. ಒಬ್ಬ ರೋಗಿಯ ಚಿಕಿತ್ಸೆಗೆ ಲೆಕ್ಕವಿಲ್ಲದ ಈ ಲಕ್ಷಗಳು ಯಾಕೆ ಎಂದು ಕೇಳುವವರು ಇಲ್ಲವಾದರೆ ಆಸ್ಪತ್ರೆಗಳ ಈ ಬಿಲ್ ಮಾಫಿಯಾ ದಂಧೆ ನಿರಂತರವಾಗಿ ಮುಂದೂವರಿಯುತ್ತದೆ. ಈ ದಂಧೆ ಮುಂದುವರಿದರೆ ಈ ಸಮಾಜದ ಅವಸ್ಥೆ ಏನು? ಕುಟುಂಬಗಳು ಜೀವಕ್ಕಾಗಿ ಕಣ್ಣೀರಿಡುತ್ತದೆ.ಸಾಮಾಜಿಕ ಕಾರ್ಯಕರ್ತರು ಸುಸ್ತಾಗಿ ಬಿಡುತ್ತಾರೆ . ಆಸ್ಪತ್ರೆ ಬಿಲ್ ಮಾಫಿಯಾ ಹಾಯಾಗಿ ತಿಂದು ತೇಗುತ್ತದೆ. ಒಟ್ಟಾರೆ ನಮ್ಮ ಸಮಾಜದ ದುರವಸ್ಥೆ ಯಾರು ಈ ದಂಧೆಗೆ ಬ್ರೇಕ್ ಹಾಕುತ್ತಾರೆ??
ಅಶ್ರಫ್ ಕಿನಾರ ಮಂಗಳೂರು ಉಪಾಧ್ಯಕ್ಷ ರು ದಕ್ಷಿಣ ಕನ್ನಡ ಜಿಲ್ಲಾ ವಕ್ಪ್ ಸಲಹಾ ಸಮಿತಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.