ಬುಲಂದ್ ಶಹರ್ (www.vknews.in) : ಮದುವೆ ಸಮಾರಂಭಕ್ಕೆಂದು ವಧುವಿನ ಮನೆಗೆ ತೆರಳುತ್ತಿದ್ದ ವರನಿಗೆ ಹಾವು ಕಚ್ಚಿದೆ. 26 ವರ್ಷದ ಪ್ರವೇಶ್ ಕುಮಾರ್ ಹಾವು ಕಡಿತದಿಂದ ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದ ಬುಲಂದ್ಶಹರ್ನ ದಿಬೈ ಪ್ರದೇಶದ ಅಕರ್ಬಾಸ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಗುಂಪು ಪಕ್ಕದ ಹಳ್ಳಿಯ ವಧುವಿನ ಮನೆಗೆ ಹೋಗುತ್ತಿತ್ತು.
ಈ ನಡುವೆ ಪ್ರವೇಶ್ ಕುಮಾರ್ ವಾಹನ ನಿಲ್ಲಿಸಿ ಮೂತ್ರ ವಿಸರ್ಜನೆಗೆಂದು ಸಮೀಪದ ಪೊದೆಗೆ ತೆರಳಿದ್ದರು. ಬಹಳ ಸಮಯ ಕಳೆದರೂ ವಾಪಸ್ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಪರಿಶೀಲಿಸಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಪ್ರವೇಶ್ ಕುಮಾರ್ ಪತ್ತೆಯಾಗಿದ್ದಾರೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತನ ಪ್ರಾಣ ಉಳಿಸಲಾಗಲಿಲ್ಲ.
ಶುಕ್ರವಾರ ಬೆಳಗ್ಗೆ ಪ್ರವೇಶ್ ಸಾವು ಖಚಿತವಾಗಿದೆ ಎಂದು ಪ್ರವೇಶ್ ಸಹೋದರಿ ಪೂನಂ ಹೇಳಿದ್ದಾರೆ. ಹಾವು ಕಚ್ಚಿದರೆ ಜನರು ಗಾಬರಿಯಾಗದೆ ಆದಷ್ಟು ಬೇಗ ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದು ದಿಬೈನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ವೈದ್ಯರು ತಿಳಿಸಿದ್ದಾರೆ. ವಿಷ ವಿರೋಧಿ ಲಸಿಕೆ ಮತ್ತು ಇತರ ಔಷಧಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿದೆ. ಮಳೆಗಾಲದಲ್ಲಿ ಜನರು ಜಾಗರೂಕರಾಗಿರಬೇಕು ಎಂದು ದಿಬೈ ಸಿಎಚ್ಸಿಯ ವೈದ್ಯಕೀಯ ಅಧೀಕ್ಷಕ ಡಾ.ಹೇಮಂತ್ ಗಿರಿ ಹೇಳಿದರು.
ಬುಲಂದ್ಶಹರ್ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ ಹಾವು ಕಡಿತದಿಂದ ಏಳು ಮಂದಿ ಸಾವನ್ನಪ್ಪಿದ್ದಾರೆ. ಕಳೆದ ವಾರದ ಆರಂಭದಲ್ಲಿ, ಬುಲಂದ್ಶಹರ್ನ ಚಟ್ಟಾರಿ ಪ್ರದೇಶದಲ್ಲಿ ತಮ್ಮ ಮನೆಯಲ್ಲಿ ಮಲಗಿದ್ದಾಗ ಹಾವು ಕಚ್ಚಿ ವೃದ್ಧೆ ಮತ್ತು ಅವರ ಮೊಮ್ಮಗ ಸಾವನ್ನಪ್ಪಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.