(www.vknews.in) : ಮದುವೆಯಾದ ಬಳಿಕ ಗತ ಎಲ್ಲವನ್ನೂ ಮರೆತು ಗಂಡನೊಂದಿಗೆ ಅನ್ಯೋನ್ಯತೆ, ಪ್ರೀತಿಯಿಂದ ಕೂಡಿ ಬಾಳಬೇಕು. ಅಲ್ಲಿ ಹಳೆಯ ಅನಗತ್ಯ ವಿಷಯಗಳನ್ನು ಕೆದಕಿ ಸಂಶಯ, ಗೊಂದಲಕ್ಕೆ ಅವಕಾಶ ನೀಡಬಾರದು. ಅಂದರೆ, ಈ ಮದುವೆಗೆ ಮೊದಲಿದ್ದ ತನ್ನ ಪ್ರಿಯತಮನ ಕುರಿತೋ ಅಥವಾ ತಾನು ಮದುವೆಯಾಗಲು ಬಯಸಿದ್ದ ಹುಡುಗನ ಕುರಿತೋ ಅನಗತ್ಯ ಎಳೆದು ಹಾಕಬಾರದು. ಮಾತ್ರವಲ್ಲ ಅಂತಹ ಹುಡುಗರೊಂದಿಗಿದ್ದ ಎಲ್ಲ ಸಂಪರ್ಕವನ್ನು ಕಡಿದು ಹಾಕಬೇಕು. ಹುಚ್ಚು ಪ್ರೇಮದಿಂದಾದ ಗತ ಎಲ್ಲವನ್ನೂ ಡಿಲೀಟ್ ಮಾಡಿ ಅಲ್ಲಾಹನೊಂದಿಗೆ ಪಶ್ಚಾತ್ತಾಪ ಪಡಬೇಕು. ಅದನ್ನು ಉಳಿಸಿದರೆ ಅಥವಾ ಮುಂದುವರಿಸಿದರೆ ಮುಂದೆ ಹೊಸ ಸಮಸ್ಯೆಗಳು ಹುಟ್ಟುತ್ತವೆ. ಬಳಿಕ ಖೇದಿಸಿ ಪ್ರಯೋಜನವಿಲ್ಲ. ಈ ನೀಚ ಸಂಸ್ಕಾರವನ್ನು ಇಸ್ಲಾಮೀ ಶರೀಅತ್ ಕೂಡಾ ಒಪ್ಪುವುದಿಲ್ಲ. ಅದು ಮನಸ್ತಾಪ, ವಿಚ್ಛೇದನಕ್ಕೆ ಕೊಂಡೊಯ್ಯುತ್ತದೆ.
ಕೆಲವು ಪತಿಯಂದಿರು ದೊಡ್ಡ ಸೊಬಗರಂತೆ ಇಂತಹ ರಹಸ್ಯಗಳನ್ನು ಪತ್ನಿಯಿಂದ ಮೆಲ್ಲನೆ ಕೆದಕುತ್ತಾರೆ. ಪಾಪ, ಆಕೆ ಆತನ ಒತ್ತಾಯಕ್ಕೆ ಮಣಿದು ವಿವಾಹಪೂರ್ವ ನಡೆದ ಸಂಗತಿಗಳನ್ನು ಎಳೆಎಳೆಯಾಗಿ ವಿವರಿಸುತ್ತಾಳೆ. ಆಗಲೇ ಆತನಿಗೆ ಸಂಶಯ, ಗುಮಾನಿಯ ರೋಗ ಆರಂಭವಾಗುತ್ತದೆ. ನಿಜವಾಗಿ ಹಳೆಯ ಕಡತಗಳನ್ನು ತಡಕಾಡುವ, ಹುಡುಕಾಡುವ ಯಾವ ಅಗತ್ಯವೂ ಇಲ್ಲ. ಅದರಿಂದ ಆತ ಮತ್ತಷ್ಟು ತಪಾಸಣೆಕ್ಕಿಳಿಯುತ್ತಾನೆ.
ಎಲ್ಲವೂ ಆತನಿಗೆ ನಕಾರಾತ್ಮಕವಾಗಿ ಕಾಣುತ್ತದೆ. ಅಲ್ಲಿ ದಾಂಪತ್ಯದ ನೆಮ್ಮದಿ ಹಾಳಾಗುತ್ತದೆ. ಆದ್ದರಿಂದ ಕೌಟುಂಬಿಕ ಭದ್ರತೆಗೆ ಮಾರಕವಾದ ಇಂತಹ ಕಿತಾಪತಿಗಳಿಂದ ಜಾಗೃತರಾಗಿರಬೇಕು. ಆತನೆಷ್ಟೇ ನಯವಾಗಿ ವಿಚಾರಿಸಿದರೂ ವಿವಾಹಪೂರ್ವ ರಹಸ್ಯಗಳನ್ನು, ತಪ್ಪುಗಳನ್ನು ಬಿಚ್ಚಬಾರದು. ತನ್ನ ಪ್ರೀತಿಯ ಪತಿಯ ಜತೆ ಗೂಡಿ ಹೊಸ ಹುಮ್ಮಸ್ಸಿನ ಬದುಕಿನೊಂದಿಗೆ ಹೊಂದಿಕೊಂಡು ಮುನ್ನಡೆಯಬೇಕು. ಸದಾ ಆತನ ಪ್ರೀತಿ, ವಿಶ್ವಾಸವನ್ನು ಗಳಿಸಬೇಕು. ಆತನ ನೋವು, ನಲಿವನ್ನು ಹಂಚಿಕೊಳ್ಳಬೇಕು. ವಿಶ್ವಾಸದ್ರೋಹಕ್ಕೆ ಅವಕಾಶ ನೀಡಲೇಬಾರದು.
ಮುಂದುವರಿಯುವುದು..
✍️ ಮುಹಮ್ಮದ್ ಸಿದ್ದೀಕ್, ಜಕ್ರಿಬೆಟ್ಟು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.