(www.vknews.in) ; ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ಹಾಗೂ ಅಧೀನದ ಡಿಕೆಯಸ್ಸಿ ಬಹ್ರೈನ್ ರಾಷ್ಟ್ರೀಯ ಸಮಿತಿ ವತಿಯಿಂದ ಯೆನೊಪೊಯ Chancellor ಡಾ! ಅಬ್ದುಲ್ಲ ಕುಂಞ ಮತ್ತು ಎಲೈಡ್ ಸೈನ್ಸ್ ಆಫ್ ಹೆಲ್ತ್ ಚೆಯರ್ಮ್ಯಾನ್ ಡಾ! ಇಫ್ತಿಕಾರ್ ಫರೀದ್ ಯುಟಿ ಇವರನ್ನು ಹೋಟೆಲ್ ವೆಸ್ಟಿನ್ ಬಹ್ರೈನ್ ನಲ್ಲಿ 6, ಸಪ್ಟಂಬರ್ ಶುಕ್ರವಾರ ನಡೆದ ಸಮಾರಂಭದಲ್ಲಿ ಡಿಕೆಯಸ್ಸಿ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಜನಾಬ್ ಮುಹಮ್ಮದ್ ಸೀದಿ, ಉಪಾಧ್ಯಕ್ಷ ರಾದ ಹಾತಿಂ ಕೂಳೂರು, ಕಮ್ಯುನಿಕೇಶನ್ ಕಾರ್ಯದರ್ಶಿ ಕೆ.ಎಚ್. ಮುಹಮ್ಮದ್ ರಫೀಖ್ ಸೂರಿಂಜೆ ಹಾಗೂ ಕಾರ್ಯದರ್ಶಿ ಅಬೂಬಕ್ಕರ್ ಬರ್ವ ರವರ ಸಮ್ಮುಖದಲ್ಲಿ ಶಾಲು ಹೊದಿಸಿ ಆದರಪೂರ್ವಕ ಸನ್ಮಾನಿಸಲಾಯಿತು.
ಡಿಕೆಯಸ್ಸಿ ಬಹ್ರೈನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಉಸ್ತಾದ್ ಅಬ್ದುಲ್ ಮಜೀದ್ ಸಅದಿ, ಉಪಾಧ್ಯಕ್ಷರುಗಳಾದ ಅಬ್ದುಲ್ಲತೀಫ್ ಕಾಪು ಮತ್ತು ಸಿದ್ದೀಖ್ ಸುಳ್ಯ, ಉಮ್ಮುಲ್ ಹಸ್ಸಾಂ ಘಟಕದ ಅಧ್ಯಕ್ಷ ಫಝಲ್ ಸುರತ್ಕಲ್ ರವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.