(www.vknews.in) ; ಹಿದಾಯ ಫೌಂಡೇಶನ್ (ರಿ.) ಮಂಗಳೂರು, ಅಝಾದ್ ಫ್ರೆಂಡ್ಸ್ ಸರ್ಕಲ್ (ರಿ.) ನೆಹರುನಗರ ಹಾಗೂ ಆಧಾರ್ ಸೇವಾ ಕೇಂದ್ರ ಮಂಗಳೂರು ಇದರ ಸಹಯೋಗದೊಂದಿಗೆ 2024 ಸೆಪ್ಟೆಂಬರ್ 09 ಮತ್ತು 10 ರಂದು 02 ದಿವಸಗಳ ಆಧಾರ್ ಶಿಬಿರ ಕಾರ್ಯಕ್ರಮವು ಬೆಳಿಗ್ಗೆ 9:30ರಿಂದ ಸಂಜೆ 4:00ರ ವರೆಗೆ ಅಂಗನವಾಡಿ ಕೇಂದ್ರ ನೆಹರನಗರ (ನರಿಕೊಂಬು ಗ್ರಾಮ)ದಲ್ಲಿ ನಡೆಯಲಿದೆ.
ಶಿಬಿರದಲ್ಲಿ ಲಭ್ಯವಿರುವ ಸೇವೆಗಳು: ಹೊಸ ಆಧಾರ್ ಕಾರ್ಡ್, ಬಯೋಮೆಟ್ರಿಕ್ ಹಾಗೂ ವಿಳಾಸ ತಿದ್ದುಪಡಿ, ಇತರ ತಿದ್ದುಪಡಿ, ಪೋಟೊ ತಿದ್ದುಪಡಿ, ಬಯೋಮೆಟ್ರಿಕ್ ಅಪ್ಡೇಟ್ (ಫೋಟೋ) ಹಾಗೂ ಹೆಸರು ಸರಿಪಡಿಸಲು ಎರಡು ದಿವಸಗಳ ಕಾಲ ಸೇವೆ ಲಭ್ಯವಿದೆ. ನೋಂದಾವಣೆಗಾಗಿ ಸಂಪರ್ಕಿಸಿರಿ (9964303598, 9535622486) ಮತ್ತು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.