ಕೋಲಾರ (www.vknews.in): ದ್ರಾವಿಡ ವಿಮೋಚನಾ ಸಂಘದ ಸಂಘಟನೆಯನ್ನು ಬಲಪಡಿಸುವ ಹಾಗೂ ಸಾಮಾಜಿಕ ನ್ಯಾಯದ ಹೋರಾಟಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುನ್ನಡೆಸುವ ಉದ್ದೇಶದಿಂದ, ಕೋಲಾರ ನಗರದ ಗಂಗಮ್ಮಪಾಳ್ಯದ ನಿವಾಸಿ ರವಿ.ಜಿ.ಎ. ಅವರನ್ನು ದ್ರಾವಿಡ ವಿಮೋಚನಾ ಸಂಘದ ಕೋಲಾರ ತಾಲ್ಲೂಕು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಸಂಘದ ಅಧ್ಯಕ್ಷರಾದ ಕೆ.ಎಂ. ಅನಂತಕೀರ್ತಿ ಅವರು ಈ ನೇಮಕಾತಿಯನ್ನು ಪ್ರಕಟಿಸಿದ್ದು, ಸಂಘಟನೆಯ ಆಶಯಗಳು ಮತ್ತು ಉದ್ದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸುವುದು, ಸಾಮಾಜಿಕ ಸಮಾನತೆ ಹಾಗೂ ನ್ಯಾಯಕ್ಕಾಗಿ ನಡೆಯುವ ಹೋರಾಟಗಳನ್ನು ಸಂಘಟಿಸುವುದು ಮತ್ತು ಸಂಘಟನೆಯನ್ನು ತಾಲ್ಲೂಕು ಮಟ್ಟದಲ್ಲಿ ಮತ್ತಷ್ಟು ಬಲಿಷ್ಠಗೊಳಿಸುವ ಜವಾಬ್ದಾರಿಯನ್ನು ರವಿ.ಜಿ.ಎ. ಅವರಿಗೆ ವಹಿಸಲಾಗಿದೆ. ರವಿ.ಜಿ.ಎ. ಅವರ ನೇಮಕಾತಿಯಿಂದ ಸಂಘಟನೆಯ ಕಾರ್ಯಚಟುವಟಿಕೆಗಳಿಗೆ ಹೊಸ ಚೈತನ್ಯ ದೊರೆಯಲಿದೆ ಎಂಬ ಆಶಯವನ್ನು ಸಂಘದ ಅಧ್ಯಕ್ಷರು ವ್ಯಕ್ತಪಡಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.