(www.vknews.com) : ಅಲ್ ಉಮ್ಮಾ ಹೆಲ್ಪ್ ಲೈನ್ ದ.ಕ.ಜಿಲ್ಲೆ ಈ ಒಂದು ಸಂಘಟನೆ ರೂಪುಗೊಂಡು 5 ವರ್ಷವಾಯಿತು ಮತ್ತು ಈ ಒಂದು ಸಂಘಟನೆಗೆ (ಅಲ್ ಉಮ್ಮಾ ಹೆಲ್ಪ್ ಲೈನ್ ದ.ಕ. ಜಿಲ್ಲೆ) ಎಂಬ ನಾಮಕರಣ ಮಾಡಲಾಯಿತು. ಈ ನಾಮಕರಣ ಮಾಡಿ 2 ವರ್ಷಗಳು ಕಳೆಯಿತು..
ಅಲ್ ಉಮ್ಮಾ ಹೆಲ್ಪ್ ಲೈನ್ ಚಿಕ್ಕ ಮಟ್ಟದಲ್ಲಿ ವಾಟ್ಸಾಪ್ ಗ್ರೂಪ್ ಮಾಡಲಾಯಿತು. ಅಲ್ ಹಮ್ದುಲಿಲ್ಲಾಹ್ ಅಪಾರವಾದ ಅನುಗ್ರಹದಿಂದ 1 2 3 ಗ್ರೂಪಿನಲ್ಲಿ ಹಲವಾರು ಸಹೋದರ ದಾನಿಗಳು ಸೇರಿ ಒಟ್ಟಾಗು 500 ಕ್ಕೂ ಹೆಚ್ಚು ಅದಿಕ ದಾನಿಗಳು ನಮ್ಮೊಂದಿಗೆ ಸಹಕರಿಸುತ್ತಿಧ್ದಾರೆ. ಮಾತ್ರವಲ್ಲದೇ ಹಲವು ಸಹೋದರಿಯರು ಕೂಡಾ ಈ ಮಹಾತ್ಕಾರ್ಯಕ್ಕೆ ಸ್ಪಂದಿಸಿಧ್ದಾರೆ. ಈ ಸಂಘಟನೆಯು ಹಲವಾರು ಬಡ ಕುಟುಂಬಗಳಿಗೆ ಮತ್ತು ಬಡ ಹೆಣ್ಣುಮಕ್ಕಳಿಗೆ ಹಾಗೂ ಯತೀಂ ಸಹೋದರಿಯರಿಗೆ ರೋಗಿಗಳಿಗೆ ಮನೆ ನಿರ್ಮಾಣಕ್ಕೆ ಧನಸಹಾಯವಾಗಿ ಮತ್ತು ಮದುವೆಗೆ ಬೇಕಾಗುವ ಉಡುಪುಗಳ ವ್ಯವಸ್ಥೆಯನ್ನು ಅವರಿಗೆ ಉಪಕಾರಿಯಾಗುವಂತಹ ರೀತಿಯಲ್ಲಿ ಸಹಕರಿಸುತ್ತಿದ್ದೇವೆ.
ಈ ಸಂಸ್ಥೆಯೂ ಇದೀಗ ಕೊರೋನ ಎಂಬ ಮಾರಕ ರೋಗವು ಹರಡುತ್ತಿರುವಾಗ ಅತೀ ತೀರ್ವ ಬಡತನದಲ್ಲಿರುವ ಕುಟುಂಬಗಳಿಗೆ ಸುಮಾರು 200 ಕ್ಕೂ ಹೆಚ್ಚು ಅದಿಕ ಕಿಟ್ ಗಳನ್ನು ದ.ಕ ಜಿಲ್ಲೆಯಲ್ಲಿ ಬಡ ಕುಟುಂಬಗಳಿಗೆ ವಿತರಿಸಲಾಯಿತು. ಮಾತ್ರವಲ್ಲದೇ ಲಾಕ್ ಡೌನ್ ಸಂದರ್ಭದಲ್ಲೂ ಅಲ್ ಉಮ್ಮಾ ಹೆಲ್ಪ್ ಲೈನ್ ವತಿಯಿಂದ 20 ಕುಟುಂಬಗಳಿಗೆ ನೀರಿನ ವ್ಯವಸ್ಥೆ ತುಂಬಾ ಕಠಿಣವಾಗಿದ್ದರಿಂದ ಅಲ್ಲೊಂದು ಕೊಳವೆ ಬಾವಿಯನ್ನು ನಮ್ಮ ಗ್ರೂಪಿನ ದಾನಿಗಳ ಸಹಾಯದಿಂದ ಮತ್ತು ಅಲ್ಲಿಯ ಪರಿಸರದ ಗ್ರಾಮಸ್ಥರಿಂದ ನಿರ್ಮಿಸಲಾಯಿತು.
ಅದೇ ರೀತಿ ಒಂದು ಮದರಸ ಶೌಚಲಯವನ್ನು ನಾವು ನಿರ್ಮಿಸಿಕೊಡುತ್ತೇವೆಂದು ಕುಕ್ಕಾವು ಊರಿನ ಅಧ್ಯಕ್ಷರಿಗೆ ಅಲ್ ಉಮ್ಮಾ ಹೆಲ್ಪ್ ಲೈನ್ ವತಿಯಿಂದ ನಿರ್ಮಾಣ ಮಾಡಿಕೊಡುತ್ತೇವೆಂದು ಭರವಸೆ ನೀಡಿಧ್ದೇವೆ ಇದೀಗ ಆ ಕೆಲಸವು ಲಾಕ್ಡೌನ್ ನಿಂದ ಅರ್ಧದಲ್ಲಿ ನಿಂತಿದೆ, ಲಾಕ್ ಡೌನ್ ಮುಗಿದ ನಂತರ ಕೆಲಸವನ್ನು ಆರಂಭಿಸಲು ತಯ್ಯಾರಿಯಲ್ಲಿದೆ.
ಇದಕ್ಕೆ ಸಹಕರಿಸಿದ ಹಲವಾರು ಮಹಾ ದಾನಿಗಳು, ದೇಶ ವಿದೇಶಗಳಲ್ಲಿ ದುಡಿಯುವ ಹಲವಾರು ಸಮಾಜ ಸೇವಕರು ಉಲಮಾ ಉಸ್ತಾದರೂ ಯವ ಮಿತ್ರರು ನಮ್ಮೊಂದಿಗೆ ಸದಾ ಸಮಯದಲ್ಲೂ ಸಹಕಾರ ನೀಡುತ್ತಿಧ್ದಾರೆ. ಹಲವಾರು ಮಹಾ ದಾನಿಗಳಿಂದ ನೂರಾರು ಬಡ ಕುಟುಂಬಕ್ಕೆ ಧನ ಸಹಾಯವನ್ನು ನೀಡುವಲ್ಲಿ ಈ ಒಂದು ತಂಡವು ಯಶಶ್ವಿಯಾಯಿತು. ತಮ್ಮೆಲ್ಲರ ದುಅ ಸಹಕಾರ ಸಹಾಯದಿಂದ ಈ ತಂಡವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೀಗ ಹೆಸರುವಾಸಿಯಾಗಿ ಕಾರ್ಯನಿರ್ವಹಿಸುತ್ತಿದೆ. ಮಾತ್ರವಲ್ಲದೆ ನಮ್ಮ ಪಂಡ್ ಕಲೆಕ್ಷನ್ ನಲ್ಲಿ ಬಹು ದೊಡ್ಡ ಮೊತ್ತವನ್ನು ಬಡ ಕುಟುಂಬಗಳಿಗೆ ಹಸ್ತಾಂತರಿಸಲಾಯಿತು.
ಇನ್ಸಾ ಅಲ್ಲಾ ಇನ್ನೂ ಮುಂದೆ ಈ ಸೇವೆಗೆ ದಾನಿಗಳ ಸಹಕಾರ ಸಹಾಯ ನಮಗೆ ಅತ್ಯಗತ್ಯವಾಗಿದೆ ತಮ್ಮೆಲ್ಲರ ಭರವಸೆ ನಿರೀಕ್ಷೆಯೊಂದಿಗೆ…
– ಅಲ್ ಉಮ್ಮಾ ಹೆಲ್ಪ್ ಲೈನ್ ದ.ಕ.ಜಿಲ್ಲೆ ( ರಿ)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.