(ವಿಶ್ವ ಕನ್ನಡಿಗ ನ್ಯೂಸ್) : ಕೊರೋನ ಮಹಾಮಾರಿ ರೋಗದಿಂದ ತತ್ತರಿಸಿದ್ದ ಜನರ ನಡುವೆ ಹಗಲು ರಾತ್ರಿ ಎಂಬ ವ್ಯತ್ಯಾಸವಿಲ್ಲದೆ ತಮ್ಮ ಜೀವದ ಹಂಗನ್ನು ತೊರೆದು ಜನರಿಗೆ ಧೈರ್ಯ ತುಂಬುತ್ತಿದ್ದ ವಿಟ್ಲ ಪೋಲೀಸ್ ಠಾಣಾ ಸಿಬ್ಬಂದಿಗಳು ಕೆಲ ದಿನಗಳ ಹಿಂದೆ ಕೋರಂಟೈನ್ಗೆ ಒಳಗಾಗಿದ್ದರು.
SKSSF ಕನ್ಯಾನ ಶಾಖೆಯ ನೇತಾರರು ಅವರಿಗೆ ಬೇಕಾದ ತರಕಾರಿ ಹಾಗೂ ಹಣ್ಣು ಹಂಪಲುಗಳನ್ನು ಒದಗಿಸಿ ಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಜನ ಸಾಮಾನ್ಯರ ಕಷ್ಟನಷ್ಟಗಳಿಗೆ ಕಳೆದ ಎರಡು ವರ್ಷಗಳಿಂದ ನಿರಂತರ ಸ್ಪಂದಿಸುವ ಈ ಸಂಘಟನೆ ಈ ಸಂದರ್ಭದಲ್ಲೂ ಜಾತಿ ಧರ್ಮ ನೋಡದೆ ಸಹಾಯದ ಹಸ್ತವನ್ನು ನೀಡುತ್ತಿರುವುದು ನಿಜಕ್ಕೂ ಮೆಚ್ಚುಗೆಯ ವಿಚಾರ.ಸರ್ವಲೋಕ ಸೃಷ್ಟಿಕರ್ತನಾದ ಅಲ್ಲಾಹು ತಕ್ಕದಾದ ಪ್ರತಿಫಲ ನೀಡಿ ಅನುಗ್ರಹಿಸಲಿ.
ಈ ಸಂದರ್ಭದಲ್ಲಿ ವಿಟ್ಲ ವಲಯ SKSSF ಕಾರ್ಯದರ್ಶಿ ರಫೀಕ್ ಮುಸ್ಲಿಯಾರ್,ಜಿಲ್ಲಾ ಸಮಿತಿ ಸದಸ್ಯರುಗಳಾದ ರಫೀಕ್ ಫೈಝಿ ಕನ್ಯಾನ ಹಾಗೂ ಶರೀಫ್ ಕೆಲಿಂಜ,ಕನ್ಯಾನ ಶಾಖಾಧ್ಯಕ್ಷರಾದ ಅಬೂಬಕರ್ ಅಂಗ್ರಿ, ಕಾರ್ಯದರ್ಶಿ ಉಮರ್ ಮುಸ್ಲಿಯಾರ್, ಕೋಶಾಧಿಕಾರಿ ಖಲಂದರ್ ಕುಕ್ಕಾಜೆ ವಿಟ್ಲ ಕ್ಲಸ್ಟರ್ ಕೋಶಾಧಿಕಾರಿ ಮಜೀದ್ ಕನ್ಯಾನ, ಸದಸ್ಯರಾದ ಖಲೀಲ್, ಸಫ ಕಲ್ಕಾರ್ ಹಾಗೂ ಇನ್ನಿತರರು ಹಾಜರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.