ಚೆನ್ನೈ (ವಿಶ್ವ ಕನ್ನಡಿಗ ನ್ಯೂಸ್) : ದೇವಸ್ಥಾನದ ಉತ್ಸವದ ವೇಳೆ 13 ವರ್ಷದ ಬಾಲಕಿಯ ಕೂದಲು ಜನರೇಟರ್ನಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ. ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಸರ್ಕಾರ್ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಎಸ್ ಲಾವಣ್ಯ ಮೃತಪಟ್ಟಿದ್ದಾಳೆ. ಭಾನುವಾರ ರಾತ್ರಿ ಗ್ರಾಮದ ದೇವಸ್ಥಾನದ ಹಬ್ಬ ಇತ್ತು.
ಜನರು ದೇವರನ್ನು ರಥಕ್ಕೆ ಕುಳ್ಳಿರಿಸುತ್ತಿದ್ದಾಗ, ಡೀಸೆಲ್ ಜನರೇಟರ್ ಹೊಂದಿರುವ ಎತ್ತಿನ ಬಂಡಿಯನ್ನು ರಥದ ಹಿಂಭಾಗದಲ್ಲಿ ಇರಿಸಲಾಯಿತು. ಜನರೇಟರ್ ಬಳಿ ಕುಳಿತಿದ್ದ ಲಾವಣ್ಯ ಅವರ ಕೂದಲು ಜನರೇಟರ್ ನಲ್ಲಿ ಸಿಲುಕಿಕೊಂಡಿತ್ತು. ಧ್ವನಿವರ್ಧಕದ ಜೋರಾದ ಕಾರಣ ಲಾವಣ್ಯಳ ಕಿರುಚಾಟ ಯಾರಿಗೂ ಕೇಳಿಸಲಿಲ್ಲ.
ಬಳಿಕ ಜನರೇಟರ್ ಆಫ್ ಮಾಡಿದಾಗ ಮಗುವಿನ ಕಿರುಚಾಟ ಕೇಳಿ ಬಂದಿತ್ತು. ಕೂಡಲೇ ಲಾವಣ್ಯ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿಂದ ಅವರನ್ನು ಕಾಂಚೀಪುರಂ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಲಾವಣ್ಯ ಅವರ ತಲೆಗೆ ಗಂಭೀರ ಗಾಯವಾಗಿತ್ತು. ಬಳಿಕ ಚಿಕಿತ್ಸೆ ಪಲಿಸದೇ ಲಾವಣ್ಯ ಸಾವಿಗೆ ಶರಣಾಗಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.