ಕುವೈತ್ ಸಿಟಿ(www.Vknews.in): ಮಂಗಾಫ್ನಲ್ಲಿರುವ ಕಂಪನಿಯ ಫ್ಲಾಟ್ನಲ್ಲಿ ಸಂಭವಿಸಿದ ಬೆಂಕಿಯಲ್ಲಿ ಹಲವು ಕೇರಳೀಯರು ಸೇರಿದಂತೆ 49 ಜನರು ಸಾವನ್ನಪ್ಪಿದ್ದಾರೆ. ಮೃತರ ಹೆಸರುಗಳನ್ನು ಪರಿಶೀಲಿಸಿದಾಗ 25 ಮಂದಿ ಕೇರಳ ಮೂಲದವರಾಗಿರ ಬಹುದು ಎಂಬುದು ತಿಳಿದು ಬಂದಿದೆ. ಇದುವರೆಗೆ ಎಂಟು ಕೇರಳೀಯರನ್ನು ಗುರುತಿಸಲಾಗಿದೆ. ಇತರರ ಗುರುತು ಇನ್ನಷ್ಚೇ ಪತ್ತೆಯಾಗಬೇಕಿದೆ. ಮೃತರಲ್ಲಿ ಆಕಾಶ್ ಎಸ್. ಕೊಲ್ಲಂ ಮೂಲದ ಕೊನ್ನಿ ಅಟ್ಟಚಕಲ್ ಸಾಜು ವರ್ಗೀಸ್ (56) ಮತ್ತು ಕೊಲ್ಲಂ ಪುನಲೂರು ನಾರಿಕಲ್ ಮೂಲದ ಸಾಜನ್ ಜಾರ್ಜ್ ಎಂದು ಗುರುತಿಸಲಾಗಿದೆ. ಇನ್ನು ಕೆಲವರ ಬಗ್ಗೆ ಮಾಹಿತಿ ಹೊರಬೀಳಬೇಕಿದೆ. ಈತನ್ಮದ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕುವೈತ್ ಸರಕಾರವು ಕಟ್ಟಡ ಮಾಲಿಕನ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಿರುವಂತೆಯೇ ಭಾರತ ಸರಕಾರದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಕುವೈತ್ ಗೆ ತೆರಲಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.