ಕುದ್ರೋಳಿ ಶ್ರೀ ಗೋಕರ್ಣೇಶ್ವರ ಕ್ಷೇತ್ರದಲ್ಲಿ ಮಂಗಳೂರು ದಸರಾಗೆ ಚಾಲನೆ ನೀಡಿದ ಡಾ.ಆರತಿ ಕೃಷ್ಣ


ಮಂಗಳೂರು(ವಿಶ್ವ ಕನ್ನಡಿಗ ನ್ಯೂಸ್):ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣೇಶ್ವರ ಕ್ಷೇತ್ರದಲ್ಲಿ ನಡೆಯುವ ಸಡಗರದ ದಸರಾ ಈ ಬಾರಿ ಸರಳವಾಗಿ-ಸಕಲ ಸುರಕ್ಷತಾ ನಿಯಮ ಪಾಲನೆಯೊಂದಿಗೆ ಚಾಲನೆಗೊಂಡಿತು.ಕರ್ನಾಟಕ ಸರಕಾರದ ಅನಿವಾಸಿ ಫಾರಂ ನ ಮಾಜಿ ಉಪಾಧ್ಯಕ್ಷರಾದ ಡಾ.ಆರತಿ ಕೃಷ್ಣ ರವರು ಶನಿವಾರ ಚಾಲನೆ ನೀಡಿದರು.ದರ್ಬಾರು ಮಂಟಪದಲ್ಲಿ ಮಹಾ ಗಣಪತಿ-ಆದಿಶಕ್ತಿ-ನವದುರ್ಗೆ ಸಹಿತ ಶಾರದ ಮಾತೆಯ ವಿಗ್ರಹ ಪ್ರತಿಷ್ಠಾಪನೆ ನಡೆಸಲಾಯಿತು.ಆ ಬಳಿಕ ಪ್ರತಿಷ್ಠಾಪಿಸಿದ ವಿಗ್ರಹಗಳ ಪೂಜೆ ನಡೆಯಿತು.ಮಹಾಪೂಜೆಯ ಬಳಿಕ ಅನ್ನಪ್ರಸಾದ ಪೊಟ್ಟಣವನ್ನು ಭಕ್ತರಿಗೆ ವಿತರಿಸಲಾಯಿತು.

ಕೋವಿಡ್ ಸಂದರ್ಭದಲ್ಲಿ ಅನಿವಾಸಿ ಕಾರ್ಮಿಕರನ್ನು-ವಿದ್ಯಾರ್ಥಿಗಳು ಸೇರಿ ಸಾವಿರಾರು ಭಾರತೀಯರನ್ನು ಅದರಲ್ಲೂ ಸಾವಿರಾರು ಕನ್ನಡಿಗರನ್ನು ವಿವಿಧ ದೇಶಗಳಿಂದ ಕರೆತರಲು ವಿಶೇಷ ಆಸಕ್ತಿ ವಹಿಸಿದ್ದ ಡಾ.ಆರತಿ ಕೃಷ್ಣರವರು ಮಾತನಾಡಿ,ನನ್ನ ಸೇವೆಯನ್ನು ಗುರುತಿಸಿ ಹಿರಿಯ ನಾಯಕರಾದ ಜನಾರ್ದನ ಪೂಜಾರಿಯವರು ಹಾಗು ಆಡಳಿತ ಮಂಡಳಿ ಆಹ್ವಾನ ನೀಡಿರುವುದು ಸಂತಸ ನೀಡಿದೆ,ಕುದ್ರೋಳಿಯ ಭಕ್ತೆಯಾಗಿ ಈ ಕಾರ್ಯ ನಿರ್ವಹಿಸುವುದು ಸುಯೋಗ ಎಂದರು.ಕೋವಿಡ್ ಸಂದರ್ಭದಲ್ಲೂ ಕ್ಷೇತ್ರದಲ್ಲಿ ಸಕಲ ಸುರಕ್ಷತೆಗಳನ್ನು ಪಾಲಿಸಿ ಅವಕಾಶ ನೀಡುತ್ತಿರುವುದು ಮಾದರಿಯಾಗಿದೆ,ದಸರಾ ಯಶಸ್ವಿಯಾಗಲಿ ಎಂದು ಹಾರೈಸಿದರು.ಅನಿವಾಸಿಗಳು ಕೋವಿಡ್ ಸಂದರ್ಭದಲ್ಲಿ ವಿವಿಧ ಕಾರಣಕ್ಕೆ ಸಂತ್ರಸ್ತರಾಗಿರುವಾಗ ನೆರವಾಗಿದ್ದೆ ,ಈಗ ಮರಳಿ ಹೋಗಲು ಸಂಕಷ್ಟ ಎದುರಿಸುತ್ತಿದ್ದಾರೆ,ಈಗಾಗಲೇ ಕೇಂದ್ರ ನಾಗರಿಕ ವಿಮಾನಯಾನ ಸಚಿವರೊಂದಿಗೆ ಮಾತನಾಡಿದ್ದೇನೆ ಎಂದರು.ಕುದ್ರೋಳಿ ಕ್ಷೇತ್ರ ಅನೇಕ ಕ್ರಾಂತಿಕಾರಿ ಹೆಜ್ಜೆಯ ಮೂಲಕ ತನ್ನದೇ ಆದ ಹೆಜ್ಜೆ ಇಟ್ಟಿದೆ,ನಾಡಿಗೆ ಬಂದ ಆಪತ್ತು ಪರಿಹಾರವಾಗಲಿ ಎಂದು ಪ್ರಾರ್ಥಿಸಿದರು.

ಕ್ಷೇತ್ರದ ಅಧ್ಯಕ್ಷ ಎಚ್.ಎಸ್.ಸಾಯಿರಾಮ್,ಕಾರ್ಯದರ್ಶಿ ಬಿ ಮಾಧವ ಸುವರ್ಣ,ಕೋಶಾಧಿಕಾರಿಗಳಾದ ಪದ್ಮರಾಜ್ ಆರ್,ಟ್ರಸ್ಟಿಗಳಾದ ರವಿಶಂಕರ್ ಮಿಜಾರು,ಮಹೇಶ್ಚಂದ್ರ ಹಾಗು ಅಭಿವೃದ್ದಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...