ಅಬುಧಾಬಿ(ವಿಶ್ವಕನ್ನಡಿಗ ನ್ಯೂಸ್): ಅಬುಧಾಬಿ ಇಂಡಿಯನ್ ಸ್ಕೂಲಿನ ಹಿರಿಯ ಇಂಗ್ಲೀಷ್ ಶಿಕ್ಷಕಿ ಪ್ರಿನ್ಸಿ ರೋಯ್ ಮ್ಯಾಥ್ಯು ಮಹಾಮಾರಿ ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ.
ಇವರು ಭಾರತದ ಕೇರಳ ರಾಜ್ಯದವರಾಗಿದ್ದು, ಇವರಿಗೆ ಮೂವರು ಮಕ್ಕಳಿದ್ದು, “ ನನ್ನ ಹೆಂಡತಿಯ ಅಕಾಲಿಕ ನಿಧನದಿಂದ ನಾವು ಹೆಚ್ಚು ಅಘಾತಕ್ಕೊಳಗಾಗಿದ್ದೇವೆ ಎಂದು ಪ್ರಿನ್ಸಿಯ ಪತಿ ಸ್ಯಾಮ್ಯುಯೆಲ್ ಹೇಳಿದರು.
ತೀವ್ರ ಜ್ವರದಿಂದ ಬಳಲುತ್ತಿದ್ದ ಅವರು ಪರೀಕ್ಷೆ ನಡೆಸಿದಾಗ ಕೋವಿಡ್ ಪ್ರಕರಣ ಪತ್ತೆಯಾಗಿದ್ದು, ನಂತರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಅದಲ್ಲದೆ ಅವರ ಸಾವಿಗೆ ಅಬುಧಾಬಿ ಇಂಡಿಯನ್ ಸ್ಕೂಲಿನ ಎಲ್ಲಾ ಶಿಕ್ಷಕ, ಆಡಳಿತ ಮಂಡಳಿ, ಎಲ್ಲರೂ ಸಂತಾಪ ಸೂಚಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.