(www.vknews.com) : 07.05.2020 ರಂದು ಅಖಿಲ ಕರ್ನಾಟಕ ಮಾಧ್ವ ಮಹಾಸಭಾ, ಯಾಜ್ಞವಲ್ಕ್ಯ ಟ್ರಸ್ಟ್ ಮತ್ತು ಬ್ರಾಹ್ಮಣ ಸಂಘಗಳ ಪದಾಧಿಕಾರಿಗಳಾದ ಶ್ರೀ ಅಶ್ವತ್ಥನಾರಾಯಣ, ಶ್ರೀ ರಾಮಚಂದ್ರ , ಶ್ರೀ ಮುರಳಿ ಮತ್ತು ಶ್ರೀಮತಿ ವತ್ಸಲಾ ಯವರ ಕೋರಿಕೆಯ ಮೇರೆಗೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಶ್ರೀ ಸಚ್ಚಿದಾನಂದ ಮೂರ್ತಿಯವರು, ಯಾಜ್ಞವಲ್ಕ್ಯ ಟ್ರಸ್ಟ್ ಕಛೇರಿಗೆ ಬಂದು ಕೋವಿಡ್-19 ನ ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾಗಿರುವ ಅರ್ಚಕರು, ಅಡುಗೆಭಟ್ಟರು ಮತ್ತು ಅಡುಗೆ ಸಹಾಯಕರುಗಳ ಅಹವಾಲುಗಳನ್ನು ಸ್ವೀಕರಿಸಿದರು.
ಇದನ್ನು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸೂಕ್ತ ಪರಿಹಾರವನ್ನು ಒದಗಿಸುವೆನೆಂಬ ಭರವಸೆ ನೀಡಿದರು. ಹಾಗೂ ಸಂಕಷ್ಟದಲ್ಲಿರುವ ಅರ್ಚಕರು, ಅಡುಗೆಭಟ್ಟರು ಮತ್ತು ಅಡುಗೆ ಸಹಾಯಕರುಗಳಿಗೆ ಶೀಘ್ರವೆ ನಿತ್ಯಾವಶ್ಯಕ ದಿನಸಿ ಕಿಟ್ ಗಳ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.