ವೀರ್ ಫೌಂಢೇಷನ್‍ನಿಂದ ಉಚಿತ ವೈದ್ಯಕೀಯ ಆಮ್ಲಜನಕ ಸಿಲಿಂಡರ್ ಪೂರೈಕೆ

ಬೆಂಗಳೂರು (www.vknews.com) : ಮುಂಬೈ ಮೂಲದ ಸರ್ಕಾರೇತರ ಸಂಸ್ಥೆಯಾಗಿರುವ ವೀರ್‍ಫೌಂಡೇಷನ್, ಕೋವಿಡ್-19 ಸಾಂಕ್ರಾಮಿಕದ ಸ್ಥಿತಿಯಲ್ಲಿ ನೆರವಾಗುವ ದೃಷ್ಟಿಯಿಂದ ಬಾಡಿಗೆ ರಹಿತ ವೈದ್ಯಕೀಯ ಆಮ್ಲಜನಕ ಸಿಲಿಂಡರ್ ಮತ್ತು ಅಗತ್ಯ ಬಿಡಿಭಾಗಗಳನ್ನು ಪೂರೈಸಲು ಮುಂದಾಗಿದೆ. ಆಸ್ಪತ್ರೆಗಳಲ್ಲಿ ದಾಖಲಾದ ತೀವ್ರ ಅಸ್ವಸ್ಥ ರೋಗಿಗಳಿಗೆ ಅವರು ಆಸ್ಪತ್ರೆಯಲ್ಲಿ ಇರುವಷ್ಟೂ ದಿನ ಈ ಸೌಲಭ್ಯ ಒದಗಿಸಲಾಗುತ್ತದೆ.

ಮುಂಗಾರು ಆರಂಭವಾಗಿರುವ ಹಿನ್ನೆಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ತೀವ್ರ ಅಸ್ವಸ್ಥ ರೋಗಿಗಳುಗೆ ವೈದ್ಯಕೀಯ ಆಮ್ಲಜನಕದ ಅಗತ್ಯತೆ ಕೂಡಾ ಹೆಚ್ಚುತ್ತಿದೆ. ಕೋವಿಡ್-19 ಸೋಂಕಿತರು ಚೇತರಿಸಿಕೊಳ್ಳಲು ಪ್ರಮುಖ ಅಗತ್ಯತೆ ಎಂದರೆ ವೈದ್ಯಕೀಯ ಆಮ್ಲಜನಕ ಬೆಂಬಲ ವ್ಯವಸ್ಥೆ. ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಶಿಫಾರಸ್ಸು ಮಾಡಿದ ಪ್ರಥಮ ಚಿಕಿತ್ಸೆಯೆಂದರೆ, ವೈದ್ಯಕೀಯ ಆಮ್ಲಜನಕ ನೆರವನ್ನು ಒದಗಿಸುವುದು ಮತ್ತು ಅವರ ಆಮ್ಲಜನಕ ಮಟ್ಟವನ್ನು ಹೆಚ್ಚಿಸುವುದು. ಬೇಡಿಕೆ ಗಣನೀಯವಾಗಿ ಹೆಚ್ಚಿರುವುದರಿಂದ ಈ ಸಿಲಿಂಡರ್‍ಗಳ ಕೊರತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ವೀರ್ ಫೌಂಡೇಷನ್ ಬಾಡಿಗೆ ರಹಿತ ವೈದ್ಯಕೀಯ ಆಮ್ಲಜನಕ ಸಿಲಿಂಡರ್, ಬಿಡಿಭಾಗಗಳು ಮತ್ತು ವೈದ್ಯಕೀಯ ಆಮ್ಲಜನಕ ಅನಿಲವನ್ನು ಪೂರೈಸಲು ಕ್ರಮ ಕೈಗೊಂಡಿದೆ.
ಕಳೆದ ಮೂರು ತಿಂಗಳಿಂದ ಮನುಕುಲಕ್ಕೆ ನೆರವಾಗುವ ಮತ್ತು ಸಾಧ್ಯವಿರುವ ಕಡೆಗಳಲ್ಲೆಲ್ಲ ಸಹಾಯಹಸ್ತ ಚಾಚುವ ಮೂಲಕ ಸಮಾಜಕ್ಕೆ ಬೆಂಬಲ ನೀಡುವಲ್ಲಿ ಅವಿತರವಾಗಿ ಶ್ರಮಿಸುತ್ತಿದೆ. ಹೈದರಾಬಾದ್, ಬೆಂಗಳೂರು ಹಾಗೂ ಅಹ್ಮದಾಬಾದ್‍ನಂಥ ಪ್ರಮುಖ ನಗರಗಳಲ್ಲಿ ಕೂಡಾ ಸೇವೆಯನ್ನು ಒದಗಿಸಲು ವೀರ್ ಫೌಂಡೇಷನ್ ಮುಂದಾಗಿದೆ.

ಪ್ರಸ್ತುತ ಘಟ್ಕೋಪರ್ ಪೂರ್ವ, ಘಟ್ಕೋಪರ್ ಪಶ್ಚಿಮ, ಮುಳುಂದ್ ಪೂರ್ವ, ಲೋಹರ್ ಚಾಳ್ ಎಲೆಕ್ಟ್ರಿಕ್ ಮಾರ್ಕೆಟ್ ಮತ್ತಿತರ ಪ್ರದೇಶಗಳಲ್ಲಿ ವೀರ್ ಫೌಂಡೇಷನ್ ವೈದ್ಯಕೀಯ ಆಮ್ಲಜನಕ ಬೆಂಬಲ ವ್ಯವಸ್ಥೆಯನ್ನು ಒದಗಿಸುತ್ತಿದ್ದು, ಶೀಘ್ರವೇ ಇನ್ನಷ್ಟು ಕಡೆಗಳಿಗೆ ಅದನ್ನು ವಿಸ್ತರಿಸಲಿದೆ. ಈ ಕೇಂದ್ರಗಳು ಉಚಿತ ವೈದ್ಯಕೀಯ ಆಮ್ಲಜನಕ ಸಿಲಿಂಡರ್‍ಗಳನ್ನು ಸುತ್ತಮುತ್ತಲ ಪ್ರದೇಶಗಳಿಗೆ ಒದಗಿಸಲಿವೆ.

ಈ ಕೇಂದ್ರಗಳು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ಮೂಲಕ ವೈದ್ಯಕೀಯ ಆಮ್ಲಜನಕ ಸಿಲಿಂಡರ್‍ಗಳನ್ನು ಬೆಂಬಲ ಅಗತ್ಯ ಇರುವ ಎಲ್ಲರಿಗೆ ಒದಗಿಸಲಿದೆ. ಆದರೆ ಇದನ್ನು ವೈದ್ಯಕೀಯ ಮೇಲ್ವಿಚಾರಣೆಯಡಿ ಬಳಸಬೇಕು.

ಫೌಂಡೇಷನ್ ತನ್ನ ಚಟುವಟಿಕೆಗಳನ್ನು ಇನ್ನಷ್ಟು ಪಟ್ಟು ಹೆಚ್ಚಿಸಲು ನಿರ್ಧರಿಸಿದ್ದು, ಈ ವೈರಾಣು ಸೋಂಕನ್ನು ನಿರ್ಮೂಲನೆ ಮಾಡುವ ಸರ್ಕಾರದ ಪ್ರಯತ್ನಗಳಿಗೆ ನೆರವಾಗಲಿದೆ. ಸಮಾಜಕ್ಕೆ ಸುರಕ್ಷಿತ ಪರಸರವನ್ನು ಒದಗಿಸಲು ಫೌಂಡೇಷನ್ ಬದ್ಧವಾಗಿದೆ.

“ನಮ್ಮ ಫೌಂಡೇಷನ್ ಎಲ್ಲ ಸದಸ್ಯರ ಸಹಕಾರದೊಂದಿಗೆ ಈ ಕಠಿಣ ಪರಿಸ್ಥಿತಿಯಲ್ಲಿ ಮನುಕುಲಕ್ಕೆ ನೆರವಾಗಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ. ಸರ್ವಶಕ್ತನಾದ ಭಗವಂತರು ಈ ವಿಶ್ವವನ್ನು ಕೊರೋನಾ ಮುಕ್ತಗೊಳಿಸಲು ಕೃಪೆ ಹರಿಸಲಿ” ಎಂದು ಫೌಂಡೇಷನ್‍ನ ಟ್ರಸ್ಟಿ ನಿತಿನ್ ಸಾಂಗ್ವಿ ಹೇಳಿದ್ದಾರೆ.

ಫೌಂಡೇಷನ್‍ನ ಏಕೈಕ ಧ್ಯೇಯವೆಂದರೆ, “ಮನುಕುಲದ ಸೇವೆಯೇ ದೇವರ ಸೇವೆ”

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...