ಪ್ರವಾದಿ ನಿಂದಕರು ಏನಾದರು…?

ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಪ್ರವಾದಿ ಮುಹಮ್ಮದ್ ಸ್ವಲ್ಲಾಹುಅಲೈಹಿವಸಲ್ಲಮರು ಜಾಗತಿಕ ವಿಶ್ವಾಸಿಗಳ ಅದ್ವಿತೀಯ ನಾಯಕ.
ಅವರ ನಿಂದನೆಯು ವಿಶ್ವಾಸಿಗಳಿಗೆ ಅರಗಿಸಿಕೊಳ್ಳಲಾಗದು.
ಪ್ರವಾದಿ ಪ್ರೇಮ ವಿಶ್ವಾಸಿಗಳಿಗೆ ತಂದೆ,ತಾಯಿ ಮಡದಿ,ಮಕ್ಕಳು,ಆಸ್ತಿ ಅಂತಸ್ತಿಗಿಂತಲೂ ಮೀರಿದ್ದು.
ಪ್ರವಾದಿ ಬಗೆಗಿನ ಗಾಢಪ್ರೇಮವು ಭೌತಿಕವು ಹೌದು ಭಾವನಾತ್ಮಕವು ಹೌದು.
ಈ ಕಾರಣಕ್ಕಾಗಿಯೇ ಪ್ರವಾದಿ ಪ್ರೇಮದ ಹೊಗಳಿಕೆ,ಪ್ರಶಂಸೆಗಳು ಪ್ರವಾದಿ ಪ್ರೇಮಿಗಳಿಗೆ ಅತೀವ ಸಂತೋಷವನ್ನು ಕೊಡುತ್ತದೆ.
ತೆಗಳಿಕೆ ಅಥವಾ ಅವರ ನಿಂದನೆಗಳು ಭಾವೋದ್ರೇಕದ ತೀವ್ರ ಪ್ರತಿಕ್ರಿಯೆಗಳನ್ನು ಹುಟ್ಟಿಸುತ್ತವೆ‌.

ಪ್ರವಾದಿ ಮುಹಮ್ಮದ್ ಸ್ವಲ್ಲಾಹುಅಲೈಹಿವಸಲ್ಲಮರನ್ನು ನಿಂದಿಸಿದವರು ಯಾರು ಕೂಡ ಸುಖಾಂತ್ಯ ಕಂಡಿಲ್ಲ.
ಕೆಲವರು ನಿಂದನೆಯ ಕೆಟ್ಟ ಪರಿಣಾಮವನ್ನು ಅನುಭವಿಸಿದರೆ ಇನ್ನು ಕೆಲವರು ಸತ್ಪಥದ ಹಾದಿ ತುಳಿದು ಸತ್ಯ ವಿಶ್ವಾಸಿಗಳಾಗಿ ಧರ್ಮ ಪ್ರಚಾರಕರಾಗಿದ್ದಾರೆ.

ಪ್ರವಾದಿ ನಿಂದಕರು ಏನಾದರು.?
ಅ ಬಗ್ಗೆ ಸ್ವಲ್ಪ ತಿಳಿಯೋಣ.
ಪ್ರವಾದಿ ಮುಹಮ್ಮದ್ ಸ್ವಲ್ಲಾಹುಅಲೈಹಿವಸಲ್ಲಮರ ಕಾಲದಲ್ಲಿ ಪ್ರವಾದಿಯನ್ನು ನಿಂದಿಸಿ ಹಾಡುವುದು, ಗೋಡೆ,ಧರೆಗಳಲ್ಲಿ ಇದ್ದಲಿನಿಂದ ಕವನ ಬರೆಯುವುದನ್ನೇ
ಕಾಯಕ ಮಾಡಿದ್ದ ಅ ಕಾಲದ ನಿಮಿಷ ಕವಿ ಎಂದೇ ಪ್ರಸಿದ್ಧ ಪಡೆದ ಕಹ‌ಬ್ ಬಿನ್ ಝಹೀರ್ ಸ್ವರಚಿಸಿ ಹಾಡುತ್ತಿದ್ದ ವಿಕೃತ ಕವಿತೆಗಳನ್ನು ಕೇಳಿಸಿಕೊಳ್ಳಲು ಅದಕ್ಕೆ ಚಪ್ಪಾಳೆ,ಸಿಳ್ಳೆ ಹೊಡೆದು
ಕುಣಿದು ಕುಪ್ಪಳಿಸಲು ಅವರ ಫ್ರಂಡ್ಸ್ ಸರ್ಕಲ್ ಹಾದಿ ಬೀದಿಗಳಲ್ಲಿ ಸೇರಿಕೊಳ್ಳುತ್ತಿದ್ದರು.
ಕಾಯುತ್ತಿದ್ದರು.
ಒಮ್ಮೆ ಕಹ‌ಬ್ ಬಿನ್ ಝಹೀರ್.
ತನ್ನ ಪಾಪದ ಬಗ್ಗೆ ಅರಿವಾಗಿ ಪ್ರವಾದಿಯ ಬಗ್ಗೆ ಅಧ್ಯಯನ ಮಾಡಿ ಪ್ರವಾದಿ ಬಳಿಗೆ ತೆರಳಿ ಕ್ಷಮೆ ಕೇಳುತ್ತಾರೆ.
ಮಾಡಿದ ಪಾಪಗಳಿಗೆ ಪಶ್ಚಾತ್ತಾಪ ಪಟ್ಟು ಮುಂದೆ ಪ್ರವಾದಿಯವರ ಆಪ್ತನಾಗಿ ದೊಡ್ಡ ಧರ್ಮ ಪ್ರಚಾರಕರಾಗಿ ಮಾರ್ಪಡುತ್ತಾರೆ.
ನಂತರದ ದಿನಗಳಲ್ಲಿ ಪ್ರವಾದಿ ಪ್ರೇಮದ ಬಹಳಷ್ಟು ಕವಿತೆಗಳನ್ನು ಬರೆಯುತ್ತಾರೆ.

ನೆದರ್ಲೆಂಡ್‌ನ (ಡಚ್ ) Party for freedom ಎಂಬ ರಾಜಕೀಯ ಪಕ್ಷದಿಂದ ಗೆದ್ದು ಲೋಕಸಭೆ ಪ್ರವೇಶಿಸಿದ ಮಾಜಿ ಸಂಸದ ಜೆರೋಮ್ ಜರೂನ್ ವ್ಯಾನ್ ಎಂಬವರು,ನೆದರ್ಲೆಂಡ್‌ನಲ್ಲಿ
ಮಸೀದಿ ಮದ್ರಸಗಳನ್ನು ಬಂದ್ ಮಾಡಬೇಕಾಗಿಯೂ,ಮುಸ್ಲಿಮರ ಪವಿತ್ರ ಗ್ರಂಥ ಖುರ್‌ಆನನ್ನು ಬಹಿಷ್ಕರಿಸಬೇಕಾಗಿಯೂ, ಮುಸ್ಲಿಮರನ್ನು ದೇಶದಿಂದ ಹೊರದಬ್ಬಬೇಕಾಗಿಯೂ ನೆದರ್ಲೆಂಡ್‌ನ ಲೋಕಸಭೆಯಲ್ಲಿ ಸರಕಾರವನ್ನು ಪದೇ ಪದೇ ಒತ್ತಾಯಿಸುತ್ತಿದ್ದರು.
ನಂತರ Anti Islam ಎಂಬ ಪುಸ್ತಕ ಬರೆಯಲು ಆರಂಭಿಸಿದರು.
ಈ ನಡುವೆ ಇಸ್ಲಾಂ ಮತ್ತು ಪ್ರವಾದಿ ಬಗ್ಗೆ ಅಧ್ಯಯನ ಮಾಡಿದಾಗ ಅವರ ಹೃದಯಕ್ಕೆ ಪರಿವರ್ತನೆಯ ಗಾಳಿ ಬೀಸಿತು.
ಪುಸ್ತಕವನ್ನು ಅರ್ಧಕ್ಕೆ ಮೊಟಕುಗೊಳಿಸಿದರು
26th October 2018 ರಂದು
ಇಸ್ಲಾಂ ಧರ್ಮ ಸ್ವೀಕರಿಸಿದರು.
ಈಗ ಜೋರಮ್, ನೆದರ್ಲೆಂಡ್‌ನಲ್ಲಿ ದೊಡ್ಡ ಇಸ್ಲಾಂ ಪ್ರಚಾರಕ್ಕಾಗಿದ್ದಾರೆ.

‘ಫಿತ್ನಾ ಸಿನೆಮಾ’ ನಿರ್ಮಾಪಕ ಅರ್ನಾಲ್ಡ್‌ ವ್ಯಾನ್ ಡೂನ್ ಪ್ರವಾದಿಯನ್ನು ನಿಂದಿಸಿ ಸಿನೆಮಾ ರಚಿಸಿದರು.
ಆ ಬಳಿಕ ಪ್ರವಾದಿ ಬಗ್ಗೆ ಅಧ್ಯಯನ ನಡೆಸಿ,ಪ್ರವಾದಿಯ ಉದಾತ್ತ ಸಂದೇಶ ಮಾನವೀಯ ತತ್ವಗಳಿಗೆ ಮಾರು ಹೋಗಿ ಇಸ್ಲಾಂ ಸ್ವೀಕರಿಸಿ ಇತ್ತಿಚೀನ ಕೆಲವು ವರ್ಷಗಳ ಹಿಂದೆ ಹಜ್ಜ್ ನಿರ್ವಹಿಸಲು ಮಕ್ಕಾ ತೆರಳಿ ಅಲ್ಲಿಂದ ಮದೀನಾ (ಪ್ರವಾದಿ ಅಂತ್ಯ ವಿಶ್ರಾಂತಿ ‌ಪಡೆಯುವ ಸ್ಥಳ) ಹೋಗಿ ಪ್ರವಾದಿಯ ಗೋರಿಯ ಮುಂದೆ ನಿಂತು ಕಣ್ಣೀರಿಳಿಸಿ ಬಿಕ್ಕಿ ಬಿಕ್ಕಿ ಅತ್ತು ಹೇಳಿದರು ‘ಪುಣ್ಯ ಪ್ರವಾದಿಯ ಗೋರಿಯ ಮುಂದೆ ನಿಲ್ಲಲು ನನಗೆ ನಾಚಿಕೆಯಾಗುತ್ತಿದೆ’ ನಾನಷ್ಟೊಂದು ಅವರನ್ನು ನಿಂದಿಸಿ ಸಿನೆಮಾ ರಚಿಸಿದ್ದೆ ಎಂದು.

ಪ್ರವಾದಿ ಮುಹಮ್ಮದ್ ಸ್ವಲ್ಲಾಹುಅಲೈಹಿವಸಲ್ಲಂ ವಿರುದ್ಧ ಮಾತೆತ್ತಿದ್ದವರು ಮೇಣದ ಬತ್ತಿಯಂತೆ ಕರಗಿ ಹೋಗಿದ್ದಾರೆ.
‘ಅಬೂ ಲಹಬ್’ ಎಂಬ ಪ್ರವಾದಿ ನಿಂದಕನಿಗೆ ಅಲ್ಲಾಹನು ಕೊಟ್ಟ ಉಗ್ರ ಶಿಕ್ಷೆ ಇಸ್ಲಾಮಿನ ಇತಿಹಾಸದಲ್ಲಿ ಜೀವಂತವಿರುವಾಗ ಇಲ್ಲಿ ಪ್ರವಾದಿ ನಿಂದಕರ ವಿರುದ್ಧ ಪ್ರತಿಭಟಿಸುವುದು ಸಾಂವಿಧಾನಿಕ ಹಕ್ಕು.
ಆದರೆ,ಯಾರು ಕೂಡ ನಿಂದಕರ ವಿರುದ್ಧ ಪ್ರಚೋದಿತರಾಗಬಾರದು.
ಇಲ್ಲಿ ನಮಗೆ ಕಾನೂನಾತ್ಮಕವಾಗಿ ಪ್ರತಿಭಟಿಸಿ ಪ್ರವಾದಿ ನಿಂದಕರ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಬಹುದು.
ಆದರೆ,ಪೊಲೀಸರು ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಯಾರೂ ಕೂಡ ನಿರಾಶರಾಗಬೇಕಾಗಿಲ್ಲ.

ಪ್ರವಾದಿ ನಿಂದಕರು ಯಾರು ಕೂಡ ಇಲ್ಲಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿಲ್ಲ. ಕೆಲವರು ಇಸ್ಲಾಂ ಸ್ವೀಕರಿಸಿದ್ದಾರೆ.
ಇನ್ನು ಕೆಲವರು
ಅಬು ಲಹಬ್‌ನಂತೆ ಪ್ರವಾದಿ ನಿಂದನೆಯ ಕೆಟ್ಟ ಪರಿಣಾಮವನ್ನು ಅನುಭವಿಸಿ ಕೊಳೆತು ದಾರುಣ ಅಂತ್ಯ ಕಂಡಿದ್ದಾರೆ.
ಅದೇ ಸಾಲಿನಲ್ಲಿ ಪ್ರವಾದಿ‌ ನಿಂದಕರೆಲ್ಲರೂ ಸೇರಿದ್ದಾರೆ/ಸೇರಲಿದ್ದಾರೆ.

ಪ್ರವಾದಿ ಸ್ವಲ್ಲಾಹುಅಲೈಹಿವಸಲ್ಲಮರ ನಿಂದನೆ ಅಧ್ಯಯನದ ಕೊರತೆ,ತಪ್ಪು ಗ್ರಹಿಕೆ, ರಾಜಕೀಯದ ದುರುದ್ದೇಶ ಮತ್ತು ಧರ್ಮದ ಮತ್ತೇರಿದ ಫಲವಾಗಿದೆ.
ಇದು ಆರಂಭವಲ್ಲ.
ಅಂತ್ಯವೂ ಅಲ್ಲ.!!

✍️ಇಸ್ಹಾಕ್ ಸಿ.ಐ.ಫಜೀರ್(ಗಲ್ಫ್ ಕನ್ನಡಿಗ)

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...