(www.vknews.com) : ಸಂತ ಜಾನ್ಸ್ ಪ್ರೌಢ ಶಾಲೆ ಅಲ್ಲಿಪಾದೆ ವಿದ್ಯಾರ್ಥಿಗಳಾದ ಮಹಮ್ಮದ್ ಅಫ್ರೀದ್ ಮತ್ತು ಮಹಮ್ಮದ್ ಆಶಿಕ್ ಅಜಿಲಮೊಗರು ಈ ಬಾರಿಯ SSLC ಯಲ್ಲಿ ಶೇಕಡಾ 92% ಅಂಕದೊಂದಿಗೆ ತೇರ್ಗಡೆ ಹೊಂದಿದ್ದಾರೆ.
ಮಹಮ್ಮದ್ ಅಫ್ರಿದ್ 575 ಅಂಕ ಪಡೆದು ಉನ್ನತ ತೇರ್ಗಡೆ ಹೊಂದಿದ್ದರೆ. ಮಹಮ್ಮದ್ ಆಶಿಕ್ 576 ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಿದ್ಯಾರ್ಥಿಗಳ ವಿಶಿಷ್ಟ ಶ್ರೇಣಿಯ ತೇರ್ಗಡೆಯೂ ಅಧ್ಯಾಪಕ ಮತ್ತು ಪೋಷಕರಲ್ಲಿ ಸಂತೋಷ ಮೂಡಿದೆ.
ಮಹಮ್ಮದ್ ಅಫ್ರೀದ್ ಅಬ್ದುಲ್ ಜಬ್ಬಾರ್ ಮತ್ತು ಅಸ್ಮ ರವರ ಸುಪುತ್ರ. ಮತ್ತು ಮಹಮ್ಮದ್ ಆಶಿಕ್ ಹೈದರ್ ಮತ್ತು ಹಫ್ಸ ರವರ ಸುಪುತ್ರ.
ವಿದ್ಯಾರ್ಥಿಗಳ ಮುಂದಿನ ಕಲಿಕಾ ಜೀವನ ಶುಭವಾಗಲಿ ಎಂದು ಅಧ್ಯಾಪಕ ವೃಂದ ಮತ್ತು ಕುಟುಂಬಸ್ಥರು ಶುಭ ಹಾರೈಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.