ಸಟ್ಲೆಜ್-ಯಮುನಾ ಕಾಲುವೆ ನಿರ್ಮಾಣವಾದರೆ ಪಂಜಾಬ್ ಹೊತ್ತಿರಿಯಲಿದೆ:ಕ್ಯಾಪ್ಟನ್ ಅಮರಿಂದರ್ ಸಿಂಗ್


ನವದೆಹಲಿ(ವಿಶ್ವ ಕನ್ನಡಿಗ ನ್ಯೂಸ್): ಕೇಂದ್ರ ಸರಕಾರ ನಿರ್ಮಿಸಲು ಉದ್ದೇಶಿಸಿರುವ ಸಟ್ಲೆಜ್-ಯಮುನಾ ಕಾಲುವೆ ನಿರ್ಮಾಣವಾಗುವುದಾದರೆ ಪಂಜಾಬ್ ಹೊತ್ತಿರಿಯಲಿದೆ ಹಾಗು ಇದು ದೇಶದ ಸುರಕ್ಷತೆಯ ಸಮಸ್ಯೆಯಾಗಿ ಬದಲಾಗಲಿದೆ ಎಂದು ವರ್ಚುವಲ್ ಸಭೆಯಲ್ಲಿ ಕೇಂದ್ರವನ್ನು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಎಚ್ಚರಿಸಿದ್ದಾರೆ.

ಸಭೆಯಲ್ಲಿ ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹಾಗು ಕೇಂದ್ರ ಮಂತ್ರಿ ಗಜೇಂದ್ರ ಸಿಂಗ್ ಶೇಖಾವತ್ ಉಪಸ್ಥಿತರಿದ್ದರು.ಪ್ರಸ್ತುತ ಉದ್ದೇಶಿತ ಕಾಲುವೆ ಯೋಜನೆ ರಾಜಸ್ಥಾನ ಹಾಗು ಪಂಜಾಬ್ ಅನ್ನು ತೀವ್ರವಾಗಿ ಬಾಧಿಸಲಿದ್ದು ,ಈ ಯೋಜನೆ ಕಾರ್ಯಗತವಾಗುವುದಾದರೆ ದೇಶದ ಸುರಕ್ಷತೆಗೆ ಧಕ್ಕೆ ತರಲಿದೆ ಎಂದು ಸಿಂಗ್ ಮುನ್ನೆಚ್ಚರಿಕೆ ನೀಡಿದ್ದಾರೆ.1966 ರಲ್ಲಿ ಹರ್ಯಾಣ ರಾಜ್ಯವಾದಾಗ್ಗಿನಿಂದ ನೀರಿನ ತರ್ಕ ಮುಂದುವರೆದಿದ್ದು,ಹರ್ಯಾಣ ತನಗೆ ನೀರಿನ ಹಕ್ಕನ್ನು ಪ್ರತಿಪಾದಿಸಿದೆ.ಆದರೆ ಪಂಜಾಬ್ ತನಗೆ ಪೂರೈಸಲು ಅಗತ್ಯಕ್ಕಿಂತ ಹೆಚ್ಚಿನ ನೀರು ಇಲ್ಲವೆಂಬ ಕಾರಣವೊಡ್ಡಿ ಪ್ರಸ್ತಾಪವನ್ನು ನಿರಾಕರಿಸಿತ್ತು.

ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಕಾಲದಲ್ಲಿ ಕಾಲುವೆ ನಿರ್ಮಾಣ ಸಂಬಂಧ ಧಾರಣೆಗೆ ಬಂದಿದ್ದು 1982 ರಲ್ಲಿ ಕಾಲುವೆ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿದ್ದರು.ಆದರೆ ಶಿರೋಮಣೆ ಅಕಾಲಿದಳ ಅಂದು ರಾಜ್ಯಾದ್ಯಂತ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಿತ್ತು.ರಾಜೀವ್ ಗಾಂಧಿ ಅವಧಿಯಲ್ಲಿ ಹೊಸ ಕರಾರಿಗೆ ಶಿರೋಮಣಿ ಅಕಾಲಿ ದಳದ ಮುಖ್ಯಸ್ಥರಾಗಿದ್ದ ಹರ್ಚಂದ್ ಸಿಂಗ್ ಒಪ್ಪಿಕೊಂಡಿದ್ದರೂ ಉಗ್ರರ ಕೈಯ್ಯಲ್ಲಿ ಹತರಾಗಿದ್ದರು.1990 ರಲ್ಲಿ ಕಾಲುವೆ ಯೋಜನೆಯ ಮುಖ್ಯ ಇಂಜಿನಿಯರ್ ಎಮ್.ಎಲ್ ಸೇಕ್ರಿ ಹಾಗು ಅವತಾರ್ ಸಿಂಗ್ ಕೂಡ ಉಗ್ರರ ಕೈಗಳಲ್ಲಿ ಹತ್ಯೆಯಾಗಿದ್ದರು.ಈ ಬಳಿಕ ಕಾಲುವೆ ಯೋಜನೆ ತಟಸ್ಥವಾಗಿ ಬಿಟ್ಟಿತ್ತು. ಆದರೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಜತೆಸೇರಿ ಧಾರಣೆಗೆ ಬರಬೇಕೆಂಬ ತೀರ್ಪಿತ್ತ ಹಿನ್ನಲೆಯಲ್ಲಿ ಈ ಸಭೆಯನ್ನು ಕರೆಯಲಾಗಿತ್ತು.ಆದರೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಈ ಕಾಲುವೆ ಯೋಜನೆಯನ್ನು ತಿರಸ್ಕರಿಸಿದ್ದಾರೆ.

ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...