ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): 28 ವರ್ಷಗಳನ್ನು ಪೂರೈಸಿರುವ ಪುತ್ತೂರಿನ ಪ್ರತಿಷ್ಠಿತ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಯ ಅಧೀನದ ಇದೀಗ ಯಶಸ್ವಿ ನಾಲ್ಕನೆಯ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಅಸ್ವಾಲಿಹಾ ಮಹಿಳಾ ಶರೀಅತ್ & ಪಿ.ಯು.ಕಾಲೇಜ್ ನಲ್ಲಿ 2020-21 ನೇ ಸಾಲಿನ ಶರೀಅತ್ ಮತ್ತು ಪಿ.ಯು.ಸಿ. ತರಗತಿಗೆ ದಾಖಲಾತಿ ಆರಂಭಗೊಂಡಿದೆ.
ಮೂರು ವರ್ಷಗಳ ಅಸ್ವಾಲಿಹಾ ಆಲಿಮಾ ಕೋರ್ಸು, ಮತ್ತು ಪಿ.ಯು.ಸಿ.ಯೊಂದಿಗೆ ಶರೀಅತ್ ಕೋರ್ಸು ಇಲ್ಲಿ ನೀಡಲಾಗುತ್ತಿದ್ದು ಕಳೆದ ಮೂರು ವರ್ಷಗಳಲ್ಲಿ ಪಿ.ಯು. ಮತ್ತು ಶರೀಅತ್ ಶಿಕ್ಷಣದಲ್ಲಿ ವಿದ್ಯಾರ್ಥಿನಿಯರು ಫಲಿತಾಂಶದಲ್ಲಿ ಉತ್ತಮ ಸಾಧನೆಯನ್ನು ಮಾಡಿರುವುದು ಗಮನಾರ್ಹವಾಗಿದೆ.
ಇಸ್ಲಾಮಿಕ್ ಶರೀಅತ್ ಬಗೆಗಿನ ಅಧ್ಯಯನ ದೊಂದಿಗೆ ಆಧ್ಯಾತ್ಮಿಕ ಮಜ್ಲಿಸ್, ಶರೀಅತ್ ಪ್ರಾಕ್ಟಿಕಲ್ ಟ್ರೈನಿಂಗ್, ಕೈ ಬರಹ ಮಾಸಿಕ ಹಾಗೂ ಭಾಷಣ ಕಲೆ, ಲೇಖನಗಳ ವಿಶೇಷ ತರಬೇತಿ, ಇಸ್ಲಾಮೀ ಚೌಕಟ್ಟಿನಡಿ ಪ್ರತಿಭಾ ಪೋಷಣೆ,ಕುಟುಂಬ ನಿರ್ವಾಹಣೆ ತರಬೇತಿ, ಕಂಪ್ಯೂಟರ್ ಶಿಕ್ಷಣ, ವ್ಯಕ್ತಿತ್ವ ವಿಕಸನ ಕ್ಲಾಸ್, ಟೈಲರಿಂಗ್ ಕ್ಲಾಸ್, ಸ್ಮಾರ್ಟ್ ಕ್ಲಾಸ್ ಹೀಗೆ ಮೌಲ್ಯಾಧಾರಿತ ,ಗುಣಮಟ್ಟದ ಶಿಸ್ತು ಬದ್ದ ಉನ್ನತ ಧಾರ್ಮಿಕ-ಲೌಕಿಕ ಶಿಕ್ಷಣವನ್ನು ಸಂಸ್ಥೆಯಲ್ಲಿ ನೀಡಲಾಗುತ್ತಿದೆ.
ಶಬ್ದ ಮಾಲಿನ್ಯ ಮುಕ್ತವಾದ ಕಲಿಕಾ ವಾತಾವರಣದಲ್ಲಿ ಶಾಂತ,ಸುಂದರ ಹಾಗೂ ಸುಭದ್ರ ಪರಿಸರದಲ್ಲಿ ಕಾಲೇಜ್ ಕಾರ್ಯಾಚರಿಸುತ್ತಿದ್ದು,ಸಂಸ್ಥೆಯಲ್ಲಿ ಗುಣ ಮಟ್ಟದ ಶಿಕ್ಷಣ, ಶಿಸ್ತು ಹಾಗೂ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಎಲ್ಲಾ ಕಡೆಗೂ ಕಾಲೇಜ್ ಬಸ್ಸಿನ ವ್ಯವಸ್ಥೆ ಇದೆ. ಹೆಚ್ಚಿನ ಮಾಹಿತಿಗಾಗಿ 9886864188, 9591046202, 9449105818, 08251-232389 ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸ ಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.