ಅಬುಧಾಬಿ(www.vknews.in): ಮುಂಬರುವ ರಂಜಾನ್ ಮಾಸದಲ್ಲಿ ಕೋವಿಡ್19 ಲಸಿಕೆ ಸ್ವೀಕರಿಸುವುದು ಇಸ್ಲಾಮಿನಲ್ಲಿ ಅನುವದನೀಯವಾಗಿದೆ ಮತ್ತು ಇದು ಉಪವಾಸವನ್ನು ಅಮಾನ್ಯಗೊಳಿಸುವುದಿಲ್ಲ ಎಂದು ಶೇಖ್ ಅಬ್ದಲ್ಲಾ ಬಿನ್ ಬಯಾ ಅವರ ಅಧ್ಯಕ್ಷತೆಯಲ್ಲಿ ಯುಎಇ ಫತ್ವಾ ಕೌನ್ಸಿಲ್ ಗುರುವಾರ ಸ್ಪಷ್ಟಪಡಿಸಿದೆ.
ಪವಿತ್ರ ಕುರ್ಆನ್ನಲ್ಲಿ ನೀಡಲಾದ ತೀರ್ಪುಗಳು ಮತ್ತು ಪ್ರವಾದಿ ಮುಹಮ್ಮದ್ (ಸ) ರ ಸುನ್ನಾದ ಸಂಪ್ರದಾಯಗಳಿಂದ ಪಡೆದ ಮಾರ್ಗಸೂಚಿಗಳು, ನಿಯಮಗಳು ಮತ್ತು ನಿಬಂಧನೆಗಳನ್ನು ಒಳಗೊಂಡು ಕೌನ್ಸಿಲ್ ಈ ಫತ್ವಾವನ್ನು ಹೊರಡಿಸಿದೆ. ವಿಶ್ವಾದ್ಯಂತ ಕೊವಿಡ್ ಲಸಿಕಾ ಕಾರ್ಯಕ್ರಮ ಪ್ರಗತಿಯಲ್ಲಿದ್ದು, ಮುಂಬರುವ ಪವಿತ್ರ ರಂಜಾನ್ ಮಾಸದಲ್ಲೂ ಇದು ಮುಂದುವರಿಯಲಿರುವುದರಿಂದ ಜಾಗತಿಕ ಮುಸಲ್ಮಾನರೆಡೆಯಲ್ಲಿರುವ ಸಂಶಯ ನಿವಾರಣೆಯ ಪ್ರಯುಕ್ತ ಕೌನ್ಸಿಲ್ ಈ ಫತ್ವಾವನ್ನು ನೀಡಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.