ಮಂಗಳೂರು (ವಿಶ್ವಕನ್ನಡಿಗ ನ್ಯೂಸ್): ಮಂಗಳೂರು ನಗರದಲ್ಲಿ ನಡೆಯುವ ಕಟ್ಟಡ ನಿರ್ಮಾಣ ಮತ್ತು ದುರಸ್ತಿ ಕಾರ್ಯ ನಿರ್ವಹಿಸಿದ ನಂತರದಲ್ಲಿ ಉಳಿಯುವ, ಕಲ್ಲು,ಮಣ್ಣು, ಅಳಿದುಳಿದ ಕಬ್ಬಿಣ ಸಿಮೆಂಟ್ ಮತ್ತು ಅವುಗಳ ಖಾಲಿ ಚೀಲಗಳನ್ನು ಸಂಬಂಧಪಟ್ಟ ಖಾಸಗಿಗಳು, ಅಲ್ಲಲ್ಲೇ ರಸ್ತೆ ಬದಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿಟ್ಟು ಹೋಗುವ ಪೃವೃತ್ತಿ ಸರ್ವೇ ಸಾಮಾನ್ಯವಾಗಿದೆ.
ಇದರ ಬಗ್ಗೆ ಮ.ನ.ಪಾ.ಮೌನ ಪಾಲಿಸುತ್ತಿರಲು ಇವೆಲ್ಲವನ್ನೂ ಇನ್ನು ಕೇಳುವವರಾರು ಎಂಬ ಪರಿಸ್ಥಿತಿ ಸಂಜಾತವಾಗಿದೆಯೆಂದು ವೆಲ್ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ದ. ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಎಮ್. ಮುತ್ತಲಿಬ್ ರವರು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದರು. ಇದು ಎಲ್ಲಿಯವರೆಗೆ ಮುಂದುವರಿದಿದೆಯೆಂದರೆ, ಕಟ್ಟಡ ದುರಸ್ತಿ ಮಾಡಿ ಉಳಿದ ಸಾಮಾನು ರಸ್ತೆ ಮತ್ತು ಅದರ ಬದಿಯಲ್ಲಿಯೇ ಎಸೆದು ಸಾರ್ವಜನಿಕರ ಸಂಚಾರಕ್ಕೆ ತೊಂದರೆಗೊಂಡಿರುವ ಉದಾಹರಣೆಗೆ ನಗರದ ಐ. ಜಿ. ಪಿ.ಯವರ ಕಚೇರಿಯ ಮುಂಭಾಗದಲ್ಲಿರುವ ರಸ್ತೆಯೇ ಸಾಕ್ಷಿಯಾಗಿದೆಯೆಂದವರು ಹೇಳಿದರಲ್ಲದೆ, ಒಟ್ಟಿನಲ್ಲಿ ನಗರಾಡಳಿತ, ಚುಕ್ಕಾಣಿ ಕಳೆದ ಹಡಗಿನನಂತಾಗಿದೆ, ರಸ್ತೆಗಳ ದುರವಸ್ಥೆ, ಸಂಚಾರ ವ್ಯವಸ್ಥೆಯಲ್ಲಿ ಎಲ್ಲೆಲ್ಲೂ ಅಸಮರ್ಪಕತೆ ತಾಂಡವವಾಡುತ್ತಿದ್ದು ಮನಪಾದ ಆಡಳಿತ ವರ್ಗ ಮತ್ತು ಅಧಿಕಾರಿಗಳು ಇನ್ನಾದರೂ ತನ್ನ ನಿದ್ರಾವಸ್ಥೆಯಿಂದ ಹೊರಬಂದು ಇತ್ಯಾದಿ ಅನೇಕ ವಿಷಯಗಳತ್ತ, ಗಮನಹರಿಸಿ ಆಡಳಿತ ಚುರುಕುಗೊಳಿಸಬೇಕಾಗಿದೆಯೆಂದವರು ಈ ಸಂಧರ್ಭದಲ್ಲಿ ಹೇಳಿದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.