ಮಂಗಳೂರು (ವಿಶ್ವಕನ್ನಡಿಗ ನ್ಯೂಸ್): ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ದ. ಕ. ಜಿಲ್ಲಾ ಸಮಿತಿಯು ತನ್ನ ಮಹಿಳಾ ಸದಸ್ಯೆಯರನ್ನು ಒಗ್ಗೂಡಿಸಿ ಇತ್ತೀಚೆಗೆ ಪಕ್ಷದ ಜಿಲ್ಲಾ ಕಚೇರಿಯಾಗಿರುವ ಸ್ಟೇಟ್ ಬ್ಯಾಂಕ್ ಬಳಿಯಲ್ಲಿರುವ ವೆಲ್ಪೇರ್ ಭವನದಲ್ಲಿ, ಸಭೆ ನಡೆಸಿ ಇದರ ದ.ಕ.ಜಿಲ್ಲಾ ಮಹಿಳಾ ಘಟಕವನ್ನು ರಚಿಸಿತು.
ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ದ. ಕ. ಜಿಲ್ಲಾಧ್ಯಕ್ಷ ಅಡ್ವೋಕೇಟ್ ಸರಪ್ರಾಜ್ ಅಧ್ಯಕ್ಷತೆಯಲ್ಲಿ ಸೇರಿದ ಪಕ್ಷದ ಕಾರ್ಯಕರ್ತೆಯರ ಸಭೆಯಲ್ಲಿ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ತಲ್ಹತ್ ಯಾಸ್ಮೀನ್ ರವರು ಪಕ್ಷದ ಧ್ವಜವನ್ನು ದ.ಕ ಜಿಲ್ಲಾ ಮಹಿಳಾ ನಿಯೋಜಿತ ಅಧ್ಯಕ್ಷೆ ಆಯಿಷಾ ಮಮ್ತಾಝ್ ರವರಿಗೆ ನೀಡುವ ಮುಖಾಂತರ ಘಟಕಕ್ಕೆ ಚಾಲನೆಯನ್ನು ನೀಡಿದರು. ಮತ್ತು ಪಕ್ಷದ ಈ ಕೆಳಗಿನ ಸದಸ್ಯೆಯರನ್ನು ಹೊಸದಾಗಿ ರೂಪಿತಗೊಂಡ ಮಹಿಳಾ ಸಮಿತಿಯ ಪದಾಧಿಕಾರಿಣಿಗಳನ್ನಾಗಿ ನಿಯುಕ್ತಿಗೊಳಿಸಲಾಯಿತು.
ಅಧ್ಯಕ್ಷೆಯಾಗಿ, ಆಯಿಷಾ ಮಮ್ತಾಝ್ , ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ, ಮರಿಯಂ ಶಹೀರ ಮತ್ತು ಜತೆ ಕಾರ್ಯದರ್ಶಿಗಳಾಗಿ ಝೀನತ್ ಹಾಗೂ ರಝಿಯಾ ವಾಮಂಜೂರು. ರವರನ್ನು ಅವಿರೋಧ ಆಯ್ಕೆ ಮಾಡಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಅಡ್ವೋಕೇಟ್ ಸರ್ಪರಾಜ್ ರವರು ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸುವ ಯೋಜನೆಯಿದ್ದು, ಅದರಂತೆ ಸಮಾಜದ ಎಲ್ಲಾ ಸ್ತರಗಳಲ್ಲಿನ ಮಹಿಳೆಯರನ್ನೂ ಸೇರಿಸಿ ಬಹಳ ಕ್ರಿಯಾಶೀಲ ಮತ್ತು ಪ್ರಬಲವಾದ ಮಹಿಳಾ ಘಟಕವನ್ನೂ ಸಕ್ರಿಯಗೊಳಿಸಲಾಗುವುದು.
ಆದ್ದರಿಂದ ಇಂದಿನ ಮಹಿಳಾ ಸಮಿತಿಯು ಕೇವಲ ಸಾಂಕೇತಿಕ ಅಥವಾ ತಾತ್ಕಾಲಿಕವಾದ ಘಟಕ ಮಾತ್ರವಾಗಿದೆ ಮತ್ತು ನೂತನ ಸಮಿತಿಯ ರೂಪೀಕರಣದವರೆಗೆ ಪ್ರಸಕ್ತ ನೇಮಕಾತಿಯು, ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ದ.ಕ. ಜಿಲ್ಲಾ ಮಹಿಳಾ ಸಮಿತಿಯ ನೆಲೆಯಲ್ಲಿ ಅಧಿಕೃತವಾಗಿ ಕಾರ್ಯನಿರ್ವಹಿಸುತ್ತವೆಂಬುವುದಾಗಿ ಹೇಳಿದರು.
ಸಭೆಯಲ್ಲಿ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ದ.ಕ. ಜಿಲ್ಲಾ ಉಪಾಧ್ಯಕ್ಷೆ ಮರಿಯಮ್ ಶಹೀರ ಹಾಗೂ ಪಿ. ಆರ್. ಸೆಕ್ರೆಟರಿ ಮತ್ತು ಜಿಲ್ಲಾ ಮಾದ್ಯಮ ವಕ್ತಾರ ಅಬ್ದುಲ್ ಖಾದರ್ ಕುಕ್ಕಾಜೆ ಉಪಸ್ಥಿತರಿದ್ದರು, ಕಾರ್ಯಕ್ರಮದ ಕೊನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಎಮ್. ಮುತ್ತಲಿಬ್ ರವರು ಧನ್ಯವಾದವಿತ್ತರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.