ಕೋಝಿಕ್ಕೋಡ್(ವಿಶ್ವಕನ್ನಡಿಗ ನ್ಯೂಸ್): ಕೋವಿಡ್-19 ಹರಡುವಿಕೆಯು ಹೆಚ್ಚುತ್ತಿರುವ ಹಿನ್ನಲೆ ಇಂದಿನಿಂದ ಕೇರಳದಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ.
ಜನರು ಹೆಚ್ಚು ಜಾಗರೂಕರಾಗಿರಿ ಎಂದು ಸಮಸ್ಥ ಕೇರಳ ಜಮೀಯತುಲ್ ಉಲೆಮಾ ಅಧ್ಯಕ್ಷ ಇ ಸುಲೈಮಾನ್ ಮುಸ್ಲಿಯಾರ್ ಮತ್ತು ಪ್ರಧಾನ ಕಾರ್ಯದರ್ಶಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯರ್ ಮನವಿ ಮಾಡಿದರು. ರಮಳಾನನ್ನು ವಿಶೇಷ ಗೌರವ ಮತ್ತು ವಿಶೇಷ ಭಕ್ತಿಯಿಂದ ಆಚರಿಸಬೇಕು. ಹಾಗೂ ಜಾಗರೂಕತೆಯಿಂದ ಆಚರಿಸಿ ಎಂದು ಮನವಿ ಮಾಡಿದರು.
ಇಶಾ ಮೊದಲು ಮಸೀದಿಗಳಲ್ಲಿ ಸಾಮಾನ್ಯವಾಗಿ ನಡೆಸಲಾಗುವ ಹದ್ದಾದ್’ನಂತಹ ದ್ಸಿಕ್ರ್’ಗಳನ್ನು ಇಶಾ ನಮಾಝ್ ಮೊದಲೇ ಪೂರ್ಣಗೊಳಿಸಿ. ಎಲ್ಲಾ ಪರ್ಳ್ ನಮಾಝ್ ಬಳಿಕ ನಾಝಿಲತ್ನ ಖುನೂತ್ ಓದಿರಿ. ಇಶಾ ಬಾಂಗ್ ಆದ ಕೂಡಲೇ ಇಶಾ ನಮಾಝ್ ನಿರ್ವಹಿಸಿರಿ ಮತ್ತು ತರಾವೀಹ್ ಬೇಗ ಮುಗಿಸಿರಿ. ನಮಾಝ್ ನಲ್ಲಿ ಹೇಳಬೇಕಾದ ಅಗತ್ಯ ದ್ಸಿಕ್ರ್ ಗಳು ಮತ್ತು ತರಾವೀಹ್ ಸ್ವಲಾತ್ ಗಳನ್ನು ಚುಟುಕಾಗಿ ನಿರ್ವಹಿಸಿರಿ
ಈ ನಿರ್ದೇಶನಗಳನ್ನು ಪಾಲಿಸಿ ರಮಳಾನ್ ಇಬಾದತ್ ನಿರ್ವಹಿಸಿರಿ ಎಂದು ಮನವಿ ಮಾಡಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.