ಮಸ್ಕತ್(www.vknews.in): ರೂಪಾಂತರಿತ ಎರಡನೇ ಹಂತದ ಕರೋನಾವೈರಸ್ ಅಲೆಗೆ ವಿಶ್ವ ತತ್ತರಿಸುತ್ತಿರುವಂತೆಯೇ ವಿವಿಧ ದೇಶಗಳು ತಮ್ಮ ತಮ್ಮ ಸುರಕ್ಷತೆಯನ್ನು ಕಾಪಾಡಲು ಮುಂದಾಗುತ್ತಿದೆ. ಈಗಾಗಲೇ ಸೌದಿ ಅರೇಬಿಯಾವು ನಿರ್ದಿಷ್ಠ ರಾಷ್ಟಗಳ ಜನತೆಗೆ ಸೌದಿ ಪ್ರವೇಶ ನಿರ್ಬಂಧಿಸಿದ್ದು, ಇದೀಗ ಒಮಾನ್ ಕೂಡ ಕೆಲವು ರಾಷ್ಟ್ರಗಳ ಜನರಿಗೆ ತಮ್ಮ ದೇಶಕ್ಕೆ ಪ್ರವೇಶವನ್ನು ನಿಷೇಧಿಸಿದೆ.
ಕೊವಿಡ್ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಕ್ರಮಗಳ ಭಾಗವಾಗಿ ಏಪ್ರಿಲ್ 24 ರಿಂದ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಎಲ್ಲಾ ಜಲ ಹಾಗೂ ವಿಮಾನಯಾನಗಳ ಪ್ರವೇಶವನ್ನು ಒಮಾನ್ ನಿರ್ಬಂಧಿಸಲಿದೆ ಎಂದು ಸುಲ್ತಾನೇಟ್ ಆಫ್ ಒಮಾನ್ ಬುಧವಾರ ತಿಳಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.